More

    ‘ಪದಕ ಗೆಲ್ಲುವ ನನ್ನ ಕನಸು ನನಸಾಗಿದೆ’, ಅದನ್ನು ದೇಶಕ್ಕೆ ಅರ್ಪಿಸುತ್ತೇನೆ: ಮೀರಾಬಾಯಿ ಚಾನು

    ನವದೆಹಲಿ: ಟೋಕಿಯೋ ಒಲಿಂಪಿಕ್ಸ್​​ನ ಎರಡನೇ ದಿನವಾದ ಇಂದು ವೇಟ್ ಲಿಫ್ಟಿಂಗ್​​ನಲ್ಲಿ ಭಾರತಕ್ಕೆ ಬೆಳ್ಳಿ ಪದಕ ತಂದುಕೊಡುವ ಮೂಲಕ ಶುಭಾರಂಭ ಮಾಡಿರುವ ಮೀರಾಬಾಯಿ ಚಾನು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.

    ಇದನ್ನೂ ಓದಿ: Tokyo Olympics| ಭಾರತದ ಪದಕ ಬೇಟೆ ಆರಂಭ: ಬೆಳ್ಳಿ ಪದಕ ಗೆದ್ದ ವೇಟ್​ಲಿಫ್ಟರ್​ ಮೀರಾಬಾಯಿ ಚಾನು​

    ಇಂದು ನಡೆದ 49 ಕೆಜಿ ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಬೆಳ್ಳಿ ಪದಕವನ್ನು ಮುಡಿಗೇರಿಸಿಕೊಂಡ ಚಾನು ತನ್ನ ದೇಶಕ್ಕೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ವಿಶೇಷವಾಗಿ ಪ್ರತಿಯೊಬ್ಬ ಭಾರತೀಯರಿಗೂ ಹಾಗೂ ಪ್ರತಿ ಹಂತದಲ್ಲಿಯೂ ನನಗೆ ಬೆಂಬಲ ನೀಡಿದ ನನ್ನ ತಾಯಿಗೆ ಯಾವಾಗಲೂ ಚಿರರುಣಿ ಎಂದು ಪದಕ ಗೆದ್ದ ನಂತರ ತಮ್ಮ ಮಾತುಗಳನ್ನು ಹಂಚಿಕೊಂಡಿದ್ದಾರೆ.
    ಅಲ್ಲದೇ ಈ ಸಾಧನೆಗೆ ಬೆಂಬಲ ನೀಡಿದ ಸರ್ಕಾರ, ಕ್ರೀಡಾ ಪ್ರಾಧಿಕಾರ, ವೇಟ್ ಲಿಫ್ಟಿಂಗ್ ಫೆಡರೇಶನ್ ಆಫ್ ಇಂಡಿಯಾ, ರೈಲ್ವೇಸ್ ಮತ್ತು ಸ್ಪಾನ್ಸ್​​ರ್ಸ್ ಗಳಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

    ಆತ್ಮಸ್ಥೈರ್ಯ ಮತ್ತು ಕಠಿಣ ತರಬೇತಿ ಮೂಲಕ ನನ್ನನ್ನು ಸಧೃಡರನ್ನಾಗಿ ಮಾಡಿದ ಕೋಚ್ ವಿಜಯ್ ಶರ್ಮಾ ಅವರಿಗೂ ಸಹ ಧನ್ಯವಾದ ತಿಳಿಸಿದ್ದಾರೆ.
    84 ಮತ್ತು 87 ಕೆಜಿ ಭಾರವನ್ನು ಎತ್ತುವಲ್ಲಿ ಯಶಸ್ವಿಯಾದ ಮೀರಾಬಾಯಿ 89ಕೆಜಿ ಭಾರ ಎತ್ತುವಲ್ಲಿ ಇಂದು ವಿಫಲರಾದರು. ಅವರು ಎರಡನೇ ಸ್ಥಾನವನ್ನು ಅಲಂಕರಿಸುವ ಮೂಲಕ ಬೆಳ್ಳಿ ಪದಕವನ್ನು ಜಯಿಸಿದರು. ಚೀನಾದ ಹೌ ಝಿಜು 94 ಕೆಜಿ ಭಾರ ಎತ್ತುವ ಮೂಲಕ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಲ್ಲದೆ, ಒಲಿಂಪಿಕ್ಸ್​ ದಾಖಲೆ ಸೃಷ್ಟಿಸಿದ್ದಾರೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts