More

    ಇನ್ನು ಆರು ತಿಂಗಳು ಈ ಹೆದ್ದಾರಿ ಬಂದ್

    ಶಿರಸಿ: ಸೇತುವೆ ಹಾಗೂ ದೇವಿಮನೆ ಘಟ್ಟದಲ್ಲಿ ರಸ್ತೆ ಕಾಮಗಾರಿ ಮಾಡುವ ಸಲುವಾಗಿ ಕುಮಟಾ-ಶಿರಸಿ ರಾಷ್ಟ್ರೀಯ ಹೆದ್ದಾರಿ 766ಇ ಯಲ್ಲಿ ಎಲ್ಲ ರೀತಿಯ ವಾಹನಗಳನ್ನು ನ.1ರಿಂದ 2024 ಮೆ. ತಿಂಗಳ ಕೊನೆಯವರೆಗೆ ಸಂಪೂರ್ಣ ಬಂದ್ ಮಾಡಲು ನಿರ್ಧರಿಸಲಾಗಿದೆ.
    ಬುಧವಾರ ಶಿರಸಿ ಉಪವಿಭಾಗಾಧಿಕಾರಿ ದೇವರಾಜ್ ಆರ್. ಅಧ್ಯಕ್ಷತೆಯಲ್ಲಿ ಗುತ್ತಿಗೆದಾರ ಕಂಪನಿ ಆರ್. ಎನ್. ಎಸ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.
    ನಂತರ ಮಾತನಾಡಿದ ಉಪವಿಭಾಗಾಧಿಕಾರಿ ದೇವರಾಜ್. ಆರ್. ಆರ್.ಎನ್.ಎಸ್ ಕಂಪನಿ ಹಾಗೂ ಹೆದ್ದಾರಿ ಪ್ರಾಧಿಕಾರ ರಸ್ತೆ ಕಾಮಗಾರಿಗೊಸ್ಕರ ಹೆದ್ದಾರಿ ಬಂದ್ ಮಾಡುವಂತೆ ಕೋರಿತ್ತು..ಆ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
    ಶಿರಸಿ ಉಪ ವಿಭಾಗ ವ್ಯಾಪ್ತಿಗೆ ಬರುವ ಶಿರಸಿ ಕುಮಟಾ ಹೆದ್ದಾರಿಯಲ್ಲಿ 33 ಕೀಮಿ ನಲ್ಲಿ 27ಕಿ.ಮಿ ರಸ್ತೆ ಕಾಮಗಾರಿ ಮುಗಿದಿದೆ.ಆದರೆ ಸಣ್ಣ ಹಾಗೂ ದೊಡ್ಡ ಸೇತುವೆಗಳು ಸೇರಿ ಒಟ್ಟು 9 ಸೇತುವೆಗಳ ಕಾಮಗಾರಿ ನಡೆಯಬೇಕಿದೆ.ಜೊತೆಗೆ ದೇವಿಮನೆ ಘಾಟ್ ನಲ್ಲಿ ಕಾಮಗಾರಿ ನಡೆಯಬೇಕಿದೆ. ಸೇತುವೆ ಕಾಮಗಾರಿ ನಡೆಯುವ ಸಮಯದಲ್ಲಿ ವಾಹನ ಸಂಚಾರ ಕ್ಕೆ ಅವಕಾಶ ಕಲ್ಪಿಸುವುದು ಕಷ್ಟಸಾಧ್ಯ ವಾದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದರು.
    ಮಾರ್ಚ್ ತಿಂಗಳಲ್ಲಿ ರಾಜ್ಯದ ಅತಿದೊಡ್ಡ ಜಾತ್ರೆ ಶಿರಸಿ ಮಾರಿಕಾಂಬಾ ದೇವಿಯ ಜಾತ್ರೆ ನಡೆಯಲಿದ್ದು, ಸಮಯದಲ್ಲಿ 15ದಿನ ಲಘು ವಾಹನಗಳಿಗೆ ದೇವಿಮನೆ ಘಾಟ್ ನಲ್ಲಿ ಸಂಚಾರ ನಡೆಸಲು ಅನುವು ಮಾಡಿಕೊಡಬೇಕು.ಸ್ಥಳೀಯರಿಗೆ ಯಾವುದೇ ರೀತಿಯ ತೊಂದರೆಗಳು ಆಗದಂತೆ ನೋಡಿಕೊಳ್ಳಬೇಕು. ಮುಂದಿನ ತಿಂಗಳಿನಿಂದಲೇ ಘಾಟ್ ಸೆಕ್ಷನ್ ಗಳಲ್ಲಿ ಕಾಮಗಾರಿಗಳನ್ನು ಆರಂಭಿಸಿ, ಚುರುಕಾಗಿ ಕೆಲಸ ನಡೆಸುವಂತೆ ಆರ್. ಎನ್. ಎಸ್ ಕಂಪನಿ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

    ಇದನ್ನೂ ಓದಿ: ವಿಶ್ವಕಪ್​ ಭರ್ಜರಿ ನಿರ್ವಹಣೆಯಿಂದ ರೋಹಿತ್​ ಶರ್ಮಗೆ ಐಸಿಸಿ ರ‍್ಯಾಂಕಿಂಗ್​ನಲ್ಲಿ ಭಾರಿ ಬಡ್ತಿ


    ಬಂದ್ ಆಗಲಿರುವ ಶಿರಸಿ ಕುಮಟಾ ಹೆದ್ದಾರಿ ಸಂಪರ್ಕಿಸುವ ರಸ್ತೆಗಳಲ್ಲಿಈಬಗ್ಗೆ ಮಾಹಿತಿ ಇರುವ ಬೋರ್ಡ್ಗಳನ್ನುಹಾಕಿ ಜನರಿಗೆ ಮಾಹಿತಿ ನೀಡುವಂತೆ ಪೊಲೀಸ್‌ಇಲಾಖೆ ಗೆಸೂಚಿಸಿದರು.

    ಬದಲಿ ಮಾರ್ಗಗಳು:
    ಕುಮಟಾ- ಮಾವಿನಗುಂಡಿ- ಸಿದ್ದಾಪುರ ಮಾರ್ಗ ವಾಗಿ ಶಿರಸಿಗೆ ಎಲ್ಲ ತರಹದ ವಾಹನ ಸಂಚಾರ ಕ್ಕೂ ಅವಕಾಶ ನೀಡಲಾಗಿದೆ.ಅದೇ ರೀತಿ ಅಂಕೋಲಾ-ಯಲ್ಲಾಪುರ ಮಾರ್ಗವಾಗಿ ಶಿರಸಿಗೆ ಎಲ್ಲ ತರಹದ ವಾಹನ ಸಂಚಾರ ಕ್ಕೆ ಅವಕಾಶ ಇದೆ.
    ಅಚವೆ,ಯಾಣ,ಹೆಗಡೆಕಟ್ಟಾ ಮಾರ್ಗವಾಗಿ ಹಾಗೂ ದೊಡ್ಮನೆ ಘಾಟ್ -ಸಿದ್ದಾಪುರ ಮಾರ್ಗದಲ್ಲಿ ಲಘು ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶವಿದೆ ಎಂದು ಅವರು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts