More

    ವಾರ ಭವಿಷ್ಯ: ಈ ರಾಶಿಯವರನ್ನು ದ್ವಾದಶ ಶನಿ ತಪ್ಪುದಾರಿಗೆ ಎಳೆಯಬಹುದು…ಆದರೆ ಭಯ ಬೇಡ

    ವಾರ ಭವಿಷ್ಯ: ಈ ರಾಶಿಯವರನ್ನು ದ್ವಾದಶ ಶನಿ ತಪ್ಪುದಾರಿಗೆ ಎಳೆಯಬಹುದು...ಆದರೆ ಭಯ ಬೇಡಮೇಷ: ರಾಹು-ಕೇತುಗಳ ಸಂಚಾರದಲ್ಲಿ ಮೇಷ ರಾಶಿಯಲ್ಲಿದ್ದ ರಾಹು ವೃಷಭಕ್ಕೆ ಸೇರಿ ವಿಶೇಷವಾದ ಫಲಗಳನ್ನು ನೀಡಿ ಧನದ ಕೊರತೆ ನೀಗಿಸುತ್ತಾನೆ. ಸ್ವಕ್ಷೇತ್ರ ಗುರುವು ದೈವಬಲ ತುಂಬಿ ನಿಮ್ಮನ್ನು ನಡೆಸುತ್ತಾನೆ. ಶೀಘ್ರವಾಗಿ ಕಾರ್ಯೋನ್ಮುಖವಾಗಿ. ನಿಮ್ಮ ದಕ್ಷತೆ, ಸಾಮರ್ಥ್ಯವನ್ನು ಅವಲಂಬಿಸಿ ಕೆಲಸ ಮಾಡಿಕೊಂಡು ಹಸನ್ಮುಖಿಗಳಾಗಿರಿ. ಅಷ್ಟಮ ಕೇತುವಿಗೆ ಗಣಪನಿಗೆ ಕಡಬು, ಕಡಲೆಕಾಳು ನೈವೇದ್ಯ ಮಾಡಿ.

    ವೃಷಭ: ಒಂದನೇ ಮನೆಯ ರಾಹು ಶುಕ್ರನ ಮನೆಯಲ್ಲಿ ಫಲವನ್ನು ಕೊಡುತ್ತಾನೆ. ಅಷ್ಟಮ ಗುರು ನಿಧಾನವೇ ಹೊರತು ಶುಭಫಲಗಳನ್ನು ನೀಡದೆ ಇರುವುದಿಲ್ಲ. ಒಂಬತ್ತರ ಶನಿ ಸ್ವಕ್ಷೇತ್ರದಲ್ಲಿದ್ದು ತಾಳ್ಮೆಯಿಂದ ಕೆಲಸಗಳನ್ನು ಮಾಡಿದಲ್ಲಿ ಜಯಗಳಿಸಬಹುದು. ಅಷ್ಟಮ ಗುರುವಿಗೆ ಕಾಲಭೈರವನನ್ನು ಪೂಜಿಸಿ. ಪ್ರದೋಷದಂದು ಮರೆಯದೆ ಶಿವನನ್ನು ಮನಸಾ ಭಜಿಸಿ, ಪೂಜಿಸಿದರೆ ನಿಮ್ಮ ಕಾರ್ಯ ಕೈಗೂಡುವುದು.

    ಮಿಥುನ: ಸಪ್ತಮದ ಗುರು ಕಾರ್ಯದಲ್ಲಿ ಜಯವನ್ನು ಕೊಡುತ್ತಾನೆ. ಹನ್ನೆರಡರ ರಾಹು ಒಳ್ಳೆಯ ಸಮಯದಲ್ಲಿ ಬುದ್ಧಿ ಹಾಳುಮಾಡುತ್ತಾನೆ. ಅಜ್ಞಾನದ ಪರಾಕಾಷ್ಠೆಯಿಂದ ಹೊರಬಂದು ಕಾರ್ಯೋನ್ಮುಖರಾಗಿ, ಎಚ್ಚರಿಕೆಯಿರಲಿ. ಅಷ್ಟಮ ಶನಿಯಿದ್ದಾನೆ. ಶಕ್ತಿ ಗಣಪತಿ ವ್ರತವನ್ನು ಮಾಡಿ. ಹುಣ್ಣಿಮೆಯಂದು ಲಕ್ಷ್ಮೀ ಸತ್ಯನಾರಾಯಣನ ವ್ರತವನ್ನು ಮಾಡಿ ಪೂಜಿಸಿ. ಆನಂದಿಸಿರಿ.

    ಕಟಕ: ಛಾಯಾಗ್ರಹಗಳಾದ ರಾಹು-ಕೇತುಗಳು ಸ್ಥಾನವನ್ನು ಬದಲಿಸಿವೆ. ರಾಹು ಹನ್ನೊಂದನೆ ಮನೆಯಲ್ಲಿದ್ದು ಆಕಸ್ಮಿಕ, ಅಗೋಚರವಾದ ಲಾಭ, ಧನ, ಸಂತೋಷವನ್ನು ತರುತ್ತಾನೆ. ಆರನೇ ಮನೆಯ ಕೇತುವಿಗೆ ಪ್ರತಿ ತಿಂಗಳ ಚೌತಿಯಂದು ವರಗಣಪತಿ ಪೂಜೆ ಮಾಡಿ, ಶುಭವನ್ನು ಪಡೆಯಿರಿ. ಸಂಸಾರ ತಾಪತ್ರಯಗಳನ್ನು ತಲೆ ಮೇಲೆ ಎಳೆದುಕೊಳ್ಳಬೇಡಿ. ಶ್ರೀರಾಮನ ಅನುಗ್ರಹ ಪಡೆದುಕೊಳ್ಳಿ.

    ಸಿಂಹ: ಈ ನಭೋ ಭೂಮಂಡಲದಲ್ಲಿ ಸೂರ್ಯನ ತೇಜಸ್ಸು, ಪ್ರತಾಪ ಎಲ್ಲರಿಗೂ ಎಂದೆಂದೂ ಬೇಕಾಗುತ್ತದೆ. ಸೂರ್ಯ ಉದಯ ವಾಗದಿದ್ದರೆ ಏನು ಮಾಡಲೂ ಸಾಧ್ಯವಿಲ್ಲ. ಸಿಂಹರಾಶಿಯವರು ಹಗಲು-ಇರುಳಲ್ಲೂ ಸೂರ್ಯನ ಬೆಳಕನ್ನು ಎಲ್ಲ ದಿಕ್ಕಿನಲ್ಲೂ ಕಾಣಬಹುದು. ಸೂರ್ಯ ಕವಚ, ಅರುಣ ಪಾರಾಯಣ ಮಾಡಿಸಿ. ಭಾನುವಾರದಂದು ಗೋಧಿಪಾಯಸ ನೈವೇದ್ಯಮಾಡಿ. ಸಮಯ ಚೆನ್ನಾಗಿದೆ. ಪಂಚಮ ಗುರು, ಆರರ ಶನಿ ಕೇಳಿದ್ದೆಲ್ಲ ಕೊಡುತ್ತಾರೆ.

    ಕನ್ಯಾ: ಸ್ವಕ್ಷೇತ್ರನಾಗಿರುವ ಬುಧ ನಿಮಗೆ ಬೇಕಾದ ಸನ್ಮಾರ್ಗ, ಸತ್ ಚಿಂತನೆ, ನ್ಯಾಯಮಾರ್ಗವನ್ನು ತೋರುತ್ತಾನೆ. ಅದನ್ನು ಪಾಲಿಸುವುದು ನಿಮ್ಮ ಕರ್ತವ್ಯ. ಆಲೋಚನೆಗಳು ಬಂದು ಹೋಗುತ್ತವೆ. ಯೋಚನಾಲಹರಿಯಲ್ಲಿ ಯಾರನ್ನೂ ನಿಷ್ಠುರ ಮಾಡಬಾರದು. ತಪ್ಪು ಹುಡುಕಬಾರದು. ನೀವೇ ತಿದ್ದಿಕೊಂಡು ಅಲ್ಪಕಾಲ ಸುಖದ ಹಾದಿಯಲ್ಲಿ ಸಾಗಬಹುದು. 20ನೇ ನವೆಂಬರ್​ನಿಂದ ಉತ್ತಮ ಫಲ ಸಿಗುತ್ತದೆ. ಪಂಚಮ ಶನಿಗೆ ಶನಿಕವಚವನ್ನು ಪಠಿಸಿ. ಎಳ್ಳುಂಡೆಯನ್ನು ಮಾಡಿ. ಎಳ್ಳುದೀಪ ಹಚ್ಚಿ. ಮಾಡಿದ ಪಾಪಕರ್ಮಗಳನ್ನು ತೊಳೆದುಕೊಂಡು ಶುದ್ಧರಾಗಿರಿ. ಶುದ್ಧತ್ವ, ಶ್ರದ್ಧೆ, ಪ್ರಾಮಾಣಿಕತೆ ಇದ್ದಲ್ಲಿ ಎದ್ದು ನಿಲ್ಲಬಹುದು. ದಿನನಿತ್ಯ ಒಂದು ಅಧ್ಯಾಯದಂತೆ ಭಗವದ್ಗೀತೆಯ 18 ಅಧ್ಯಾಯವನ್ನು ಓದಿರಿ. ಬದುಕಿಗೆ ಉತ್ತಮ ಫಲ ನೀಡುತ್ತದೆ.

    ತುಲಾ: ವೃಷಭ ಮತ್ತು ತುಲಾರಾಶಿ ಅಧಿಪತಿ ಶುಕ್ರ. ಶುಕ್ರನ ಮನೆಯಲ್ಲಿ ರಾಹು ವೃಶ್ಚಿಕದಲ್ಲಿ ಕೇತು ಕೂತಿರುತ್ತಾನೆ. ಮಾಡಿದ ಕೆಲಸಕ್ಕೆ ತಕ್ಕ ಫಲ ಸಿಗುತ್ತದೆ. ತುಲಾರಾಶಿಯವರು ಯಾವುದೇ ಕೆಲಸಗಳನ್ನು ಮಂಗಳವಾರ ಮಾಡಿದಲ್ಲಿ ಶುಭವಾಗುತ್ತದೆ. ಅಧೈರ್ಯ, ಮಾನಸಿಕ ಚಿಂತೆಗಳಿಗೆ ದಾರಿಮಾಡಿಕೊಡದಿರಿ. ನಿಮ್ಮ ಇಷ್ಟದಂತೆ ಕಾರ್ಯಗಳು ನಡೆಯುತ್ತವೆ.

    ವೃಶ್ಚಿಕ: ದ್ವಿತೀಯ ಗುರು ನಿಮ್ಮ ಆಸೆಗಳನ್ನು ಈಡೇರಿಸುತ್ತಾನೆ. ಎಲ್ಲ ಗ್ರಹ ಗಳಿಗೂ ದೇವತೆಗಳಿಗೂ ಜೇಷ್ಠನಾದವನು ವಿನಾಯಕನೇ. ಅರ್ಕ ಪತ್ರೆಯಲ್ಲಿ ಪೂಜಿಸಿ ತೊಂದರೆಗಳನ್ನು ದೂರಮಾಡಿಕೊಳ್ಳಿ. ಬಂಧುಮಿತ್ರರು ಏನೇ ಮಾತನಾಡಿದರೂ ತಲೆಕೆಡಿಸಿಕೊಳ್ಳಬೇಡಿ. ಜಗಳವಾಗದಂತೆ ಹೆಜ್ಜೆ ಹಾಕಿ, ಯಾವುದಕ್ಕೂ ಕಿವಿಗೊಡದೆ ಅಸಾಧ್ಯವಾದದನ್ನು ಪಡೆಯಲು ಸೂಕ್ತ ಕಾಲ. ಗುರುಗಳನ್ನು ಸ್ಮರಿಸಿ ಭಜಿಸಿ. ಇಷ್ಟಾರ್ಥ ಈಡೇರುವುದು. ಸುಖವಾಗಿರಿ.

    ಧನು: ಗುರುವು ರಾಶಿಯಲ್ಲೇ ಇದ್ದು ನಿಮಗೆ ಯಾವ ತೊಂದರೆಯೂ ಇರುವುದಿಲ್ಲ. 6ನೇ ಮನೆಯ ರಾಹು ಅಕಸ್ಮಾತ್ ಧನಯೋಗ ಕೊಟ್ಟು ನಿಮ್ಮ ಕಾರ್ಯಕ್ಕೆ ಜಯ ತಂದುಕೊಡುತ್ತಾನೆ. ವಿಶೇಷವಾಗಿ ಮಾತೃಸ್ವರೂಪಿಯಾದ ಸ್ತ್ರೀಯರ ಮಾತನ್ನು ತೆಗೆದುಹಾಕಬೇಡಿ. ಮೌನಕ್ಕೆ ವಿಶೇಷವಾದ ಸ್ಥಾನವಿದೆ. ಆದರೆ ಮೌನವನ್ನು ಮುರಿದು ಮಾತನಾಡದಿದ್ದರೆ ನೀವು ತಪ್ಪು ಮಾಡಿದಂತಾಗುತ್ತದೆ. ವಿರೋಧಗಳು ಬೇಡ. ಸುಬ್ರಹ್ಮಣ್ಯ ಭುಜಂಗ ಸ್ತೋತ್ರವನ್ನು ಪಠಿಸಿ. ಸುಖವಾದ ಬಾಳಿದೆ.

    ಮಕರ: ಮಕರ ರಾಶಿಯಲ್ಲಿ ಶನಿ ತಾಪಪಾಪ, ಗುರು ನಿಂದನೆಯನ್ನು, ಮಾತಾಪಿತೃಗಳಿಗೆ ನೋವನ್ನು ಉಂಟುಮಾಡುತ್ತಾನೆ. ದ್ವಾದಶ ಗುರು ದೈವಬಲವನ್ನು ಕಡಿತಗೊಳಿಸಿ ನಿಮ್ಮನ್ನು ನಿಮ್ಮ ಕಾರ್ಯವೈಖರಿಯನ್ನು ನೋಡುತ್ತಿದ್ದಾನೆ. ಕುಲದೇವರನ್ನು, ನಿಮ್ಮ ದೇವರನ್ನು ಮನಬಂದಂತೆ ಬದಲಾಯಿಸಲು ಸಾಧ್ಯವಿಲ್ಲ. ಈ ಸಮಯದಲ್ಲಿ ಶನಿಕವಚವನ್ನು ಪಠಿಸಿ. ಏಕಾಗ್ರತೆಯಿಂದ ಇಷ್ಟದೇವರನ್ನು ಪೂಜಿಸಿ. ಕುಲದೇವರನ್ನು ಪೂಜಿಸಿ. ಪ್ರಾಣಕಂಟಕ ಪಾರಾಗಿ ಅಲ್ಪಧನ ಬರುವುದು. 2022ನೇ ಇಸವಿಯಿಂದ ಒಳ್ಳೆಯ ಕಾಲ ಬರಲಿದೆ.

    ಕುಂಭ: ಹನ್ನೆರಡರಲ್ಲಿ ಶನಿ ಇದ್ದಾಗ ಹೇಳಿದಂತೆ ಕೇಳುವುದು ನಿಮ್ಮ ಸ್ವಭಾವವಾಗಬೇಕು. ಹಿರಿಯರು ಹೇಳಿದಂತೆ ಮಾಡಬೇಕು. ಮಾಡಬೇಕಾದ್ದನ್ನು ತಿಳಿಸಬೇಕು. ಹನ್ನೆರಡರ ಶನಿ ನಿಮ್ಮ ಸ್ವಇಚ್ಛೆಯಂತೆ ಮಾಡಿಸಿ ನಿಮ್ಮನ್ನು ತಪ್ಪು ದಾರಿಗೆ ಒಯ್ಯಬಹುದು. ಆದರೆ ಏಕಾದಶ ಗುರು ನಿಮ್ಮನ್ನು ಎಲ್ಲ ಸಂಕಷ್ಟದಿಂದ ಪಾರುಮಾಡಿದ್ದಾನೆ. ಗುರುನರಸಿಂಹನ ಪ್ರಾರ್ಥನೆ ಇರಲಿ. ದೇವರು ಏನು ಕೊಟ್ಟರೂ ಅದೇ ಮಹಾಪ್ರಸಾದವೆಂದು ಸ್ವೀಕರಿಸಿ. ಶಾಂತಿಯಿರಲಿ. ಲಕ್ಷ್ಮೀಯನ್ನು ಆರಾಧಿಸಿ.

    ಮೀನ: ಸತ್ಕಾರ್ಯ ಮಾಡುವುದು ಮನುಷ್ಯನ ಧರ್ಮ. ಸತ್ ಸಿಂಚನೆ ಮಾಡುವುದು ಮಾನವನ ಕರ್ತವ್ಯ. ಮೀನರಾಶಿ ಅಧಿಪತಿ ಗುರು ಹತ್ತರಲ್ಲಿದ್ದು ನವೆಂಬರ್ ತಿಂಗಳಲ್ಲಿ ಹನ್ನೊಂದನೆ ಮನೆಗೆ ಬರಲಿದ್ದಾನೆ. ಕಲ್ಲುಸಕ್ಕರೆಯನ್ನು ಕೈಯಲ್ಲಿಟ್ಟುಕೊಂಡರೆ ಅಂಟಾಗುತ್ತದೆ. ತಲೆಯ ಬಳಿ ಇಟ್ಟುಕೊಂಡು ಮಲಗಿದರೆ ಕೆಂಪಿರುವೆ ಕಚ್ಚುತ್ತದೆ. ಅಂದರೆ, ಸಿಹಿಯನ್ನು ಉಂಡು, ಸತ್ಯವನ್ನು ಹೇಳಿ ಕೈಲಾದ ಸಹಾಯವನ್ನು ಮಾಡುವುದು ನಿಮ್ಮ ಧರ್ಮವಾಗಿರಬೇಕು. ದೈವವನ್ನು ಮರೆಯದಿರಿ. ಅನನ್ಯವಾಗಿ ದಶಸ್ವರೂಪಿ ಮಹಾವಿಷ್ಣುವನ್ನು ಸೂರ್ಯೋದಯಕ್ಕೆ ಮುಂಚೆಯೇ ಪೂಜಿಸಿ, ಸಹಸ್ರನಾಮ ಪಠಿಸಿ. ಜೀವನ ಸಾರ್ಥಕವಾಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts