More

    ಈ ರಾಶಿಯವರಿಂದ ಸ್ತ್ರೀಯರ ಬಗ್ಗೆ ಅವಹೇಳನ ಸಲ್ಲದು: ವಾರ ಭವಿಷ್ಯ

    ಈ ರಾಶಿಯವರಿಂದ ಸ್ತ್ರೀಯರ ಬಗ್ಗೆ ಅವಹೇಳನ ಸಲ್ಲದು: ವಾರ ಭವಿಷ್ಯ

    ಮೇಷ

    ಮೇಷದ ಅಧಿಪತಿ ಕುಜನು 24.12.2020ರಂದು ಬದಲಾಗಲಿದ್ದು ಸ್ವಕ್ಷೇತ್ರಕ್ಕೆ ಬರುತ್ತಾನೆ. ಚಂದ್ರನಿಂದ ಒಂಬತ್ತರಲ್ಲಿ ಬುಧ, ಹತ್ತರಲ್ಲಿ ಗುರು-ಶನಿಯಿದ್ದು ನಿಮ್ಮ ಕೆಲಸ ಸುಗಮವಾಗುತ್ತದೆ. ನಿಮ್ಮಂತೆಯೇ ವರ್ತಿಸಿ. ಅನ್ಯರ ಮಾತನ್ನು ಕೇಳಿದರೆ ಹಾಳಾಗಬಹುದು. ಭಗವಂತನಲ್ಲಿ ಪ್ರಾರ್ಥನೆ ಮಾಡಿ ಮುಂದೆ ಹೆಜ್ಜೆ ಇಟ್ಟರೆ ಕೊರತೆಯಿಲ್ಲ. ಮೇಷ-ವೃಶ್ಚಿಕ ರಾಶಿಯವರು ಸುಬ್ರಹ್ಮಣ್ಯನನ್ನು ಆರಾಧಿಸಿ.

    ವೃಷಭ

    ಹನ್ನೆರಡರ ಅಂಗಾರಕ, ಅಷ್ಟಮದಲ್ಲಿ ರವಿ-ಬುಧ ನಿಮ್ಮ ಲೌಕಿಕ ದಾರಿಯನ್ನು ತಪ್ಪಿಸಿ ಅಲೌಕಿಕವಾಗಿ ಬೇಡದ್ದನ್ನು ನಿಮ್ಮ ನಾಲಿಗೆಯಲ್ಲಿ ನುಡಿಸುತ್ತಾರೆ. ಮುತ್ತು ಬಿದ್ದರೆ ಒಡೆಯುತ್ತೆ. ಮಾತು ಆಡಿದರೆ ಮುಗಿಯುತ್ತದೆ. ಗೋಗ್ರಾಸ ಕೊಟ್ಟು ಗೋಪೂಜೆ ಮಾಡಿ. ಶ್ರೀಕೃಷ್ಣನನ್ನು ಪೂಜಿಸಿ. ಕೃಷ್ಣಾಷ್ಟಮಿಯ ವ್ರತಕಥೆ ಓದಿ. ಒಂಬತ್ತರ ಶನಿ-ಗುರು ಸಾಫಲ್ಯ ಕೊಡುತ್ತಾರೆ.

    ಮಿಥುನ

    ಮಿಥುನಾಧಿಪತಿ ಬುಧನು ಸಪ್ತಮಕ್ಕೆ ಬಂದು ರವಿಯ ಸಹಯೋಗದಲ್ಲಿದ್ದಾನೆ. ಅಷ್ಟಮ ಶನಿ-ಗುರುವು ಗೊಂದಲದ ಮನಸ್ಸು ಆತುರದ ನಿರ್ಧಾರ ತೆಗೆದುಕೊಳ್ಳು ವಂತೆ ಮಾಡಬಹುದು. ರವಿ-ಬುಧರು ಶುಭವನ್ನು ತರುತ್ತಾರೆ. ದಾನ- ಧರ್ಮ, ಕುಲದೇವರಲ್ಲಿ ನಂಬಿಕೆ ಸರಿದಾರಿಗೆ ಒಯ್ಯುತ್ತದೆ. ಇಲ್ಲದ ಶ್ರೇಷ್ಠತೆ ಪ್ರದರ್ಶಿಸಬೇಡಿ. ರಾಮಾಷ್ಟಕ ಪಠಿಸಿ.

    ಕಟಕ

    ಗುರು-ಶನಿ ಸಪ್ತಮದಲ್ಲಿದ್ದು ಅವಾಂತರ, ಆತುರ ಬೇಡ. ಗುರುವಿನಿಂದ ದಾರಿ ಕಾಣುತ್ತದೆ. ಶನಿ ಸ್ವಕ್ಷೇತ್ರದಲ್ಲಿದ್ದು ನಿಮ್ಮ ಪಾಪ-ಪುಣ್ಯದ ತುಲನ ಮಾಡಿ ಕೆಲಸಗಳು ಕಾರ್ಯಗತವಾಗುತ್ತದೆ. ಅಧಿಕವಾದ ವೆಚ್ಚವಿರುತ್ತದೆ. ಎಚ್ಚರವಿರಲಿ. ಗುರುವು ಶುಭಗ್ರಹನಾಗಿದ್ದರೂ, ಸಮಸ್ಯೆ ತಂದೊಡ್ಡದಿದ್ದರೂ ನೂರುಮೈಲಿ ವೇಗದಲ್ಲಿ ಓಡಬೇಡಿ. ಶಂಕರ-ನಾಗದೇವರನ್ನು ಪೂಜಿಸಿ.

    ಸಿಂಹ

    ಷಷ್ಠದಲ್ಲಿ ಗುರುವು ಪೂರ್ಣ ಕೆಲಸ ಆಗದಿದ್ದರೂ ಕೆಲಸವನ್ನು ಮುನ್ನಡೆಸುತ್ತಾನೆ. ಶಾಸ್ತ್ರಾನುಸಾರ ಸಿಂಹ ರಾಶಿಯವರು ದೈವಭಕ್ತಿ ಉಳ್ಳವರಾಗಿರುತ್ತಾರೆ. ಅದನ್ನು ಮುಂದುವರಿಸಿದರೆ ಆನಂದ ಹೊಂದುವಿರಿ. ದುರ್ಗೆಯು ಸಿಂಹವಾಹಿನಿ, ಧರ್ಮ, ಸತ್ಯ, ನಿಷ್ಠೆಯಿಂದ ಸಂತೋಷದಿಂದಿರಿ. ದೇವರು ಕೊಟ್ಟಿದ್ದನ್ನು ಸ್ವೀಕರಿಸಿ. ಎಲ್ಲವೂ ಒಳ್ಳೆಯದಾಗುತ್ತದೆ.

    ಕನ್ಯಾ

    ಚತುರ್ಥದಲ್ಲಿ ರವಿ ಬುಧರು ಗುರು ಮನೆಯಲ್ಲಿ ಇದ್ದರೂ ಕೆಲವೊಮ್ಮೆ ಅಕಾಲಿಕ ನಿರ್ಧಾರದಿಂದ ಮನಸ್ಸಿಗೆ ಕ್ಲೇಶ, ಅತೃಪ್ತಿ ಉಂಟಾಗುತ್ತದೆ. ಆದರೆ ಪಂಚಮ ಗುರುವು ಶನಿಯ ಮನೆಯಲ್ಲಿದ್ದರೂ ನಿಮಗೆ ಸಂತೋಷಕೊಟ್ಟು ಕಾಪಾಡುತ್ತಾನೆ. ವ್ಯಾಧಿಗೆ ಮೂಲ ನಾವು ಜನ್ಮ ಜನ್ಮಾಂತರದಲ್ಲಿ ಮಾಡಿದ ಪಾಪಗಳು. ಧನ್ವಂತರಿಯನ್ನು ಪ್ರಾರ್ಥಿಸಿ. ಸೂರ್ಯಕವಚ ಪಾರಾಯಣ ಮಾಡಿ. ಸ್ತ್ರೀಯರ ಬಗ್ಗೆ ಅವಹೇಳನ ಸಲ್ಲದು.

    ತುಲಾ

    ತುಲಾರಾಶಿಯವರಿಗೆ ಮೂರರಲ್ಲಿ ರವಿ-ಬುಧರಿದ್ದು ಕೆಲಸದಲ್ಲಿ ಯಶಸ್ಸು ತರುತ್ತಾರೆ. ಎರಡರ ಕೇತು-ಶುಕ್ರ ಅಧಿಕ ವೆಚ್ಚ ತೋರಿಸುತ್ತಾರೆ. ಲಕ್ಷ್ಮೀ ಅಷ್ಟಕವನ್ನು ಓದಿ. ಶಾಖಾಂಬರಿ ದೇವಿಯನ್ನು ಪೂಜಿಸಿ ಅಷ್ಟೋತ್ತರ ಪಠಿಸಿ. ಕಾಲಕ್ಕೆ ತಕ್ಕಂತೆ ಸಾಗಬೇಕು. ಕಳೆದ ಕಾಲವನ್ನು ಮತ್ತೆ ತರಲಾಗುವುದಿಲ್ಲ. ಕೊಟ್ಟ ಮಾತನ್ನು ಮರೆಯದಿರಿ. ಇದು ಈ ವಾರ ನಡೆಯುವ ಸಂಘರ್ಷ.

    ವೃಶ್ಚಿಕ

    ಲಗ್ನದಲ್ಲಿ ಶುಕ್ರನಿದ್ದು ದ್ವಿತೀಯದಲ್ಲಿ ರವಿ-ಬುಧರಿರುವುದರಿಂದ ನಿಮ್ಮ ವಿಶಾಲ ಹೃದಯ, ನೈಪುಣ್ಯ, ದಾನ ಧರ್ಮಗಳ ಪುಣ್ಯದಿಂದ ಜನಕ್ಕಾಗಿ ಉಂಟಾಗಿದ್ದ ಅಡೆತಡೆಗಳು ದೂರವಾಗಿ ನಿಮ್ಮನ್ನು ಹುಡುಕಿ ಬರುತ್ತಾರೆ. ಆತುರ ಪಡಬೇಡಿ. ಧನ ನಷ್ಟವಾಗಬಹುದು. ಯಾವುದೇ ವಿಚಾರದಲ್ಲಿ ಯೋಚಿಸದೆ, ದೀರ್ಘಾಲೋಚನೆ ಮಾಡದೆ ಮುಂದುವರಿಯಬೇಡಿ. ಭೂಮಿಯಿಂದ ಈ ವಾರ ಗಳಿಕೆ ಇದೆ.

    ಧನು

    ಮಂಡೋದರಿಯು ರಾವಣನಿಗೆ ಬುದ್ಧಿ ಹೇಳಿ ‘ನಾರಾಯಣನಿಗೆ ಶರಣಾಗಿ ಬಾಳನ್ನು ಸರಿಪಡಿಸಿಕೋ, ದುಡ್ಡಿನ ಮದ, ಹೆಣ್ಣಿನ ಸೌಂದರ್ಯ, ಮನುಷ್ಯನನ್ನು ಕೆಡವುತ್ತದೆ’ ಎಂದಳು. ನೀವು ಹನ್ನೆರಡರ ಕೇತುವಿನಿಂದ ಅಪರಿಚಿತ ಹೆಣ್ಣು ನಿಮ್ಮನ್ನು ನಿರಾಶೆಗೊಳಿಸುವ, ಕೆಲಸ ಹಾಳುಮಾಡಬಹುದೆಂಬ ಭ್ರಮೆಯಲ್ಲಿರುತ್ತಾಳೆ. ವಿಷಯಕ್ಕೆ ಸಂಬಂಧಿಸಿದ ವ್ಯಕ್ತಿಯನ್ನು ಕಂಡು ಸತ್ಯವನ್ನು ಪರಿಪಾಲನೆ ಮಾಡಿ. ರಾಮಾಷ್ಟೋತ್ತರ ಪಠಿಸಿ. ಹನುಮಂತನ ಗುಡಿಗೆ ತುಳಸಿ ನೀಡಿ.

    ಮಕರ

    ಮಕರಾಧಿಪತಿ ಶನಿ ದುಃಖವನ್ನು ಕೊಟ್ಟರೆ ಗುರು ಕ್ಷಮೆಯನ್ನು ಕೊಡುತ್ತಾನೆ. ಕ್ಷಮೆ, ದಯೆಯು ಮದ ಮಾತ್ಸರ್ಯಗಳನ್ನು ದೂರವಿಟ್ಟಾಗ ಮಾತ್ರ ಫಲ ಕೊಡುತ್ತದೆ. ಹನ್ನೆರಡರಲ್ಲಿ ರವಿ-ಬುಧರಿದ್ದಾರೆ. ಬೆಳಕು ಬಂದರೂ ನಿಮಗೆ ಕತ್ತಲಾಗಿ ಕಾಣುತ್ತದೆ. ನಿಮ್ಮೊಳಗೇ ಕವಿದಿರುವ ಧೂಳನ್ನು ತೆಗೆದರೆ ಸುಖ ಕಾಣಬಹುದು. ಶಿವನ ಆರಾಧನೆ ಮಾಡಿ.

    ಕುಂಭ

    ದ್ವಾದಶದಲ್ಲಿ ಗುರು-ಶನಿಯಿದ್ದು ನಿಮ್ಮ ಪುಣ್ಯ ಪಾಪ ಒರೆಹಚ್ಚಿ ಫಲ ನೀಡುತ್ತಾರೆ. ಆದರೆ ಹನ್ನೊಂದರ ರವಿ-ಬುಧ ಸ್ವಲ್ಪಮಟ್ಟಿಗೆ ಫಲ ಕೊಡುತ್ತಾರೆ. ಆಗದ ಕಾರ್ಯವು ಮುಕ್ತಾಯಕ್ಕೆ ಬರುತ್ತದೆ. ವ್ಯವಹಾರದಲ್ಲಿ ಅತಿ ಜಾಣ್ಮೆ ಪ್ರದರ್ಶಿಸಿದರೆ ನಷ್ಟ ಕಾಣುತ್ತೀರ. ಆದಿತ್ಯ ಹೃದಯ ಪಾರಾಯಣ ಮಾಡಿ. ಪ್ರತಿ ಗುರುವಾರ ಉಮಾಮಹೇಶ್ವರನನ್ನು ಪೂಜಿಸಿ. ಕಡಲೆಯನ್ನು ನೈವೇದ್ಯ ಮಾಡಿ.

    ಮೀನ

    ಗುರುವು ಲಗ್ನ, ಪಂಚಮ, ಸಪ್ತಮ, ಏಕಾದಶದಲ್ಲಿದ್ದರೆ ಯಾವ ಭಯವೂ ಇಲ್ಲ, ಯಾರ ಹಂಗೂ ಇಲ್ಲ. ಹಾಗಾಗಿ ನೀವು ಉದ್ಧಟತನದಿಂದ ವರ್ತಿಸಬಾರದು. ಮಡದಿಯನ್ನು ನೋಯಿಸದಿರಿ. ಹೆಣ್ಣಿನ ಶಾಪ ಕೊಳೆತ ಹಣ್ಣು ತಿಂದಂತೆ. ಎಚ್ಚರ. ಸಾಧ್ಯವಿದ್ದಲ್ಲಿ ನಿಮಿಷಾಂಬಾ ದೇವಿಯ(ಗಂಜಾಂ) ದರ್ಶನ ಪಡೆಯಿರಿ. ಕುಲಪುರೋಹಿತರಿಂದ ಪೌರ್ಣಮಿಯಂದು ಚಂಡಿಕಾ ಪಾರಾಯಣ ಮಾಡಿಸಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts