More

    ವಾರ ಭವಿಷ್ಯ | ಶನಿಯಾದರೂ ಈ ರಾಶಿಯವರು ಈ ವಾರ ಚಿಂತೆ ಮಾಡ್ಬೇಕಾಗಿಲ್ಲ

    ವಾರ ಭವಿಷ್ಯ | ಶನಿಯಾದರೂ ಈ ರಾಶಿಯವರು ಈ ವಾರ ಚಿಂತೆ ಮಾಡ್ಬೇಕಾಗಿಲ್ಲ

    ಮೇಷ
    ಅಧಿಕ ಮಾಸದ ಕಡೆಯಲ್ಲಿದ್ದು ಅಂಗಾರಕನ ಆಧಿಪತ್ಯವುಳ್ಳ ಮೇಷ ರಾಶಿಯವರು ಮಹಾವಿಷ್ಣು ಸ್ವರೂಪನಾದ ವಾಸುದೇವನನ್ನು ಪೂಜಿಸಿ. ಅಂಗಾರಕನು ವಕ್ರವಾಗಿದ್ದು ಕೆಲಸಗಳು ಮಂದಗತಿಯಲ್ಲಿ ಸಾಗುತ್ತವೆ. ಒಂಬತ್ತರ ಗುರು, ದಶಮದ ಶನಿ ಪೂರ್ತಿಯಾಗಲ್ಲದಿದ್ದರೂ ನಿಮಗೆ ತೃಪ್ತಿಯಾಗುವಷ್ಟು ಕಾರ್ಯಸಾಧನೆ, ಧೈರ್ಯ, ಭಾಗ್ಯ ತರುತ್ತಾರೆ. ನಾಗರಾಜನ ಅಷ್ಟೋತ್ತರ ಪಠಿಸಿ.
    ವೃಷಭ
    ರಾಹುವಿಗೆ ಶುಕ್ರನ ಮನೆಯಲ್ಲಿ ಆಧಿಪತ್ಯವು -ಶುಕ್ರನಷ್ಟೇ ಬಲಿಷ್ಠವಾಗಿರುತ್ತದೆ. ಬಂದ ಹಣವು ಬೇಡಿಕೆಗೆ ಸಾಕಾಗುವುದಿಲ್ಲ. ಆದರೆ ನಿಮಗೆ ದೈವಬಲದ ಕೊರತೆಯಿಂದ ಅಲ್ಪವೇ ಸಿಗುತ್ತದೆ. ಒಂಬತ್ತರ ಶನಿ ನಿಮಗೆ ಸ್ವತಂತ್ರವಾದ ಆಲೋಚನೆಯನ್ನು ಕೊಟ್ಟು ಯಶಸ್ಸಿನ ಹಾದಿಯಲ್ಲಿ ಕೊಂಡೊಯ್ಯುತ್ತಾನೆ. ದುರ್ಗೆಯನ್ನು ಆರಾಧಿಸಿ, ದುರ್ಗಾ ದೇವಾಲಯಕ್ಕೆ ಹೋಗಿ ಪ್ರಾರ್ಥನೆ ಸಲ್ಲಿಸಿ.
    ಮಿಥುನ
    ದ್ವಾದಶದಲ್ಲಿ ರಾಹು ಅಧಿಕ ವೆಚ್ಚವನ್ನು ಸೂಚಿಸುತ್ತಾನೆ. ಸಪ್ತಮ ಗುರುವು ನಿಮ್ಮನ್ನು ಕೈಹಿಡಿದು ನಡೆಸುತ್ತಾನೆ. ಅಷ್ಟಮ ಶನಿ ಕೆಲಸಕಾರ್ಯಗಳಿಗೆ ವಿಘ್ನವನ್ನು ತಂದು ಲಾಭವನ್ನು, ಯಶಸ್ಸನ್ನು ತಡೆಯುತ್ತಾನೆ. ಅದಕ್ಕಾಗಿ ಜನಾರ್ದನ ದೇವರನ್ನು ಪೂಜಿಸಿ. ಬೆಣ್ಣೆಯನ್ನು ದಾನಮಾಡಿ ಅಂಬಾವಡೆಯನ್ನು( ಸಮಭಾಗದ ಕಡಲೆಬೇಳೆ, ಉದ್ದಿನ ಬೇಳೆಯಲ್ಲಿ) ನೈವೇದ್ಯ ಮಾಡಿ.
    ಕಟಕ
    ಶರೀರಕ್ಕೆ ಆಲಸ್ಯ ಬಂದಾಗ ಅದನ್ನು ಪರಿಹರಿಸಲು ವಿಶ್ರಾಂತಿಯ ಅಗತ್ಯವಿರುತ್ತದೆ. ವಿಪರೀತ ಕೆಲಸ-ಕಾರ್ಯಗಳನ್ನು ಮಾಡಿ ಆಯಾಸ ಪಡಬೇಡಿ. ಗಂಗಾಧರನನ್ನು ಪೂಜಿಸಿ. ಈ ಸಮಯದಲ್ಲಿ ದೈವಭಕ್ತಿಯಿಂದ ನಿಮ್ಮನ್ನು ಕಾಪಾಡಿಕೊಳ್ಳಿ. ನವೆಂಬರ್ 20ರ ನಂತರ ಶುಭವಿದೆ.
    ಸಿಂಹ
    ಕುಜನು ವಕ್ರನಾಗಿದ್ದರೂ ಶುಕ್ರನು ನಿಮ್ಮ ಮನೋಕಾಮನೆಯನ್ನು ಪೂರೈಸುತ್ತಾನೆ. ಪಂಚಮದಲ್ಲಿ ಗುರುವೂ ಇದ್ದಾನೆ. ಆರರ ಶನಿ ಧೈರ್ಯವನ್ನು ಸೂಚಿಸುತ್ತಾನೆ. ಸೂಯರ್åನಾರಾಯಣ ಅಷ್ಟೋತ್ತರ, ಆದಿತ್ಯ ಹೃದಯ ಪಾರಾಯಣ, ಸುಬ್ರಹ್ಮಣ್ಯ ಪ್ರಾರ್ಥನೆಯಿಂದ ಎಲ್ಲ ವಿಚಾರದಲ್ಲೂ ಶುಭವಿದೆ.
    ಕನ್ಯಾ
    ಗುರುವು ಚತುರ್ಥದಲ್ಲಿ ಸ್ವಂತ ಮನೆಯಲ್ಲಿರುವುದರಿಂದ ದೈವಬಲವು ತಾನಾಗಿಯೇ ಬಂದು ಸೇರುತ್ತದೆ. ಆದರೆ ಪಂಚಮಶನಿಯು ಏಕಾಗ್ರತೆಯನ್ನು ಕೆಡಿಸಿ ನಿಮಗೆ ಕುಂದುಕೊರತೆಯನ್ನು ತರುತ್ತಾನೆ. ದೈವವನ್ನು ದೃಢಭಕ್ತಿಯಿಂದ ಪೂಜಿಸಿದಲ್ಲಿ ಕಷ್ಟವೇ ಬರುವುದಿಲ್ಲ. ಶ್ರೀರಾಮರಕ್ಷಾಕವಚ, ರಾಮಾಯಣದ ಪಾರಾಯಣ ಮಾಡಿ. ಪ್ರತಿ ಮಾಸದ ಪುನರ್ವಸು ನಕ್ಷತ್ರದಂದು ರಾಮನ ಪೂಜೆ ಮಾಡಿ.
    ತುಲಾ
    ತೃತೀಯ ಗುರುವು ಸ್ವಕ್ಷೇತ್ರದಲ್ಲಿದ್ದು, ಯಾವುದನ್ನೂ ಕಡಿಮೆ ಮಾಡುವುದಿಲ್ಲ. ಕೈತುಂಬ ಕೆಲಸ, ಹೊಟ್ಟೆ ತುಂಬಾ ಅನ್ನ, ನಿರೀಕ್ಷೆಗೂ ಮೀರಿದ ಹಣ ಮೂರನ್ನೂ ಕೊಡುತ್ತಾನೆ. ಚತುರ್ಥ ಶನಿಯು ಬಾಧಿಸುವುದಿಲ್ಲ. ನೀವು ಅನನ್ಯವಾಗಿ ಗುರುಪರಂಪರಾ ಸ್ತೋತ್ರವನ್ನು ಪಠಿಸಿ. ನಿಮ್ಮ ಗುರುವನ್ನು ವಂದಿಸಿ, ಭಿಕ್ಷಾ ಕಾಣಿಕೆಯನ್ನು ಮಾಡಿಸಿ. ಅಗೋಚರ ಫಲಗಳನ್ನು ಕಾಣಿರಿ.
    ವೃಶ್ಚಿಕ
    ವೃಶ್ಚಿಕ ರಾಶಿಗೆ ಎರಡನೇ ಮನೆಯ ಗುರುವು ಭಾಗ್ಯಕಾರಕನಾಗಿರುತ್ತಾನೆ. ಭಾಗ್ಯದ ಬಾಗಿಲು ತೆಗೆದೇ ತೆಗೆಯುತ್ತದೆ. ಶ್ರೀಸೂಕ್ತ ಪಾರಾಯಣವನ್ನು ಮಾಡಿ. ಪ್ರತಿ ಶುಕ್ರವಾರ ಸಂಜೆಯಲ್ಲಿ ಲಕ್ಷ್ಮೀ ಕಲಶ ಸ್ಥಾಪನೆಮಾಡಿ ಪೂಜೆಮಾಡಿ. ನಿಮ್ಮ ಅದೃಷ್ಟದ ಬಾಗಿಲು ತೆರೆಯುತ್ತದೆ. ಮಹಾವಿಷ್ಣು (ನರಸಿಂಹ ಸತ್ಯನಾರಾಯಣ)ನ ಯಾವುದೇ ಹರಕೆ ಇದ್ದಲ್ಲಿ ಕೂಡಲೇ ಸಲ್ಲಿಸಿ.
    ಧನಸ್ಸು
    ಸ್ವಕ್ಷೇತ್ರಿಕನಾದ ಗುರುವು ಮಕರದಲ್ಲಿ ಶನಿಯು ನಿಮ್ಮನ್ನು ಸರಿಯಾದ ಮಾರ್ಗದಲ್ಲಿ ಕೊಂಡೊಯ್ಯುತ್ತಾನೆ. ಧನಸ್ಸಿನ ಅಧಿಪತಿ ಗುರು. ನಿಮ್ಮ ತಂದೆ ತಾಯಿಯಲ್ಲಿ ಅನನ್ಯ ಭಕ್ತಿಯಿರಲಿ. ಅವರು ತೋರಿದ ಮಾರ್ಗದಲ್ಲಿ ನಡೆದಲ್ಲಿ ಶ್ರೇಯವಂತರಾಗುತ್ತೀರಿ. ಗಾಯತ್ರೀ ಮಂತ್ರೋಪಾಸನೆ ಮಾಡಿರಿ. ದಕ್ಷಿಣಾಮೂರ್ತಿ ಅಷ್ಟಕವನ್ನು ಪಠಿಸಿ. ಧನ್ವಂತರಿಯನ್ನು ಪೂಜಿಸಿ, ಆರಾಧಿಸಿ.
    ಮಕರ
    ಜನ್ಮಶನಿ ಏನು ಕೆಲಸವನ್ನೂ ಮಾಡಲು ಬಿಡುವುದಿಲ್ಲ. ಮಾಡಿದರೂ ಸಮರ್ಪಕವಾಗಿರುವುದಿಲ್ಲ. ಶನಿಯು ಮಕರದಲ್ಲಿರುವಾಗ ಅಲ್ಪಮಾತು ಒಳ್ಳೆಯದು. ಬೇರೆಯವರ ಅಪಹಾಸ್ಯ, ತೇಜೋವಧೆ ಮಾಡುವುದು ನಿಲ್ಲಿಸಿ. ನಿಮಿಷಾಂಬಾ ದೇವಿಯನ್ನು ಪೂಜಿಸಿ. ಮುಂದೆ ದೈವವೇ ನಿಮ್ಮನ್ನು ಸಲಹುತ್ತದೆ. ಆರೋಗ್ಯದ ಬಗ್ಗೆ ಎಚ್ಚರವಿರಲಿ. ಅತಿಯಾದ ವಾಹನ ಚಾಲನೆ ಬೇಡ.
    ಕುಂಭ
    ಏಕಾದಶ ಗುರು, ದ್ವಾದಶ ಶನಿ ನಿಮಗೆ ಏನು ತೊಂದರೆಯನ್ನು, ಹಾಳನ್ನೂ ಮಾಡಿಲ್ಲ. ಕೆಲವೊಂದು ನಿರ್ಧಾರಗಳಿಂದ ಕೆಲವೊಂದು ತಪ್ಪನ್ನು ಎಸಗಿದ್ದೀರಿ. ಅದು ಹನ್ನೆರಡರ ಶನಿಯ ಲಕ್ಷಣ. ಬ್ರಹ್ಮಾಂಡದಲ್ಲಿ ದೈವಕ್ಕೆ ವಿಶೇಷವಾದ ಸ್ಥಾನವಿದೆ. ದುರ್ಗಾ ಸಹಸ್ರನಾಮ ಪಾರಾಯಣ ಮಾಡಿ. ದೇವಿ ಮಹಾತ್ಮೆಯನ್ನು ಪಾರಾಯಣ ಮಾಡಿ. ಜೀವನವನ್ನು ಗೆಲ್ಲಬಹುದು.
    ಮೀನ
    ಏಕಾದಶ ಶನಿಯು ನೀವು ಬಯಸಿದ್ದೆಲ್ಲ ಕೊಡುತ್ತಾನೆ. ನ. 20ರಂದು ಗುರುವು ಹನ್ನೊಂದನೆ ಮನೆಗೆ ಬಂದು ಸೇರುವುದು ನಿಮಗೆ ಲಾಭದಾಯಕ. ಮಾತಾಪಿತೃಗಳ ಸ್ಮರಣೆಯನ್ನು ಮರೆಯಬೇಡಿ. ತುಲಾ ಮಾಸದಲ್ಲಿ ಶ್ರೀಶೈಲ ಮಲ್ಲಿಕಾರ್ಜುನನನ್ನು ಪ್ರಾರ್ಥಿಸಿ. ವೈಕುಂಠ ಚತುರ್ದಶಿ ವ್ರತಕತೆಯನ್ನು ಓದಿ. ರಾಷ್ಟ್ರಕ್ಕೆ ವ್ಯಾಧಿಯ ಸೋಂಕು ಬೇಡವೆಂದು ರಾಜಗಣಪತಿ-ಶ್ರೀ ಇಡಗುಂಜಿ ಗಣಪತಿಗೆ ಪ್ರಾರ್ಥನೆ ಸಲ್ಲಿಸಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts