More

    ಈ ರಾಶಿಯವರಿಗೆ ನಕಾರಾತ್ಮಕ ಕೆಲಸವೂ ಸಕಾರಾತ್ಮಕವಾಗಿ ಬಯಸಿದ ಫಲ ಸಿಗುತ್ತದೆ: ವಾರಭವಿಷ್ಯ

    ಈ ರಾಶಿಯವರಿಗೆ ನಕಾರಾತ್ಮಕ ಕೆಲಸವೂ ಸಕಾರಾತ್ಮಕವಾಗಿ ಬಯಸಿದ ಫಲ ಸಿಗುತ್ತದೆ: ವಾರಭವಿಷ್ಯಮೇಷ

    26 ಜೂನ್ ತಿಂಗಳಿಂದ ಕುಜನು ತನ್ನ ಸ್ವಕ್ಷೇತ್ರದಲ್ಲಿ ರಾಹುವಿನೊಂದಿಗೆ ಕುಳಿತಿದ್ದಾನೆ. ಅದು ಕುಜ ರಾಹು ಸಂಧಿಕಾಲ ಎಂದೇ ಹೇಳಬೇಕು. ಆಗಸ್ಟ್ ಗ್ರಹಸಂಧಿ ಇರುವುದರಿಂದ ಸುಬ್ರಹ್ಮಣ್ಯನನ್ನು ನಾಗದೇವರನ್ನು ಪೂಜಿಸಿದರೆ ಯಶಸ್ಸು ಪಡೆಯಬಹುದು. ಅಧಿಕ ವೆಚ್ಚ ಇರುತ್ತದೆ. ಮಾತಿನಲ್ಲಿ ಜಾಗರೂಕರಾಗಿದ್ದರೆ ಮುಂದೆ ನಿಮಗೆ ಅನುಕೂಲವಾದ ವಾತಾವರಣ ಸೃಷ್ಟಿಯಾಗುತ್ತದೆ.

    ವೃಷಭ

    ದ್ವಾದಶದಲ್ಲಿ ಮೇಷ ರಾಶಿಯಲ್ಲಿ ಕುಜ-ರಾಹು ಸಂಧಿಯು ಏಕಾದಶದಲ್ಲಿ ಗುರುವು ಇದ್ದು, ನಿಮ್ಮನ್ನು ಕೆಲವು ದುರ್ಘಟನೆಗಳಿಂದ ಕಾಪಾಡುತ್ತಾನೆ. ಉಪಕಾರ ಮಾಡದವರನ್ನು, ದೇವರನ್ನು ಸ್ಮರಿಸದವರನ್ನು, ಸಜ್ಜನರ ಸಹವಾಸ ಮಾಡದಿದ್ದವನು ಯಾರಿಗೂ ಬೇಕಾದವನು ಆಗುವುದಿಲ್ಲ. ಸಮಸ್ಯೆಗಳಿಗೆ ಪರಿಹಾರ ಸಿಗುವುದಿಲ್ಲ. ಆರೋಗ್ಯ ಪೂರಕ ಆಯುಷ್ಯವು, ಧೈರ್ಯ ಕೀರ್ತಿ ಯಶೋ ಲಾಭವೂ ಅನುಗ್ರಹಿಸೆಂದು ಬೇಡಿದರೆ ಎಲ್ಲ ಪ್ರಾರ್ಥನೆ ದೇವರಿಗೆ ಸಂದು ನಿಮ್ಮನ್ನು ಕಾಪಾಡುತ್ತಾನೆ.

    ಮಿಥುನ

    ಮೀನಾಧಿಪತಿ ದಶಮದಲ್ಲಿದ್ದು, ಶನಿಯು ಒಂಭತ್ತರಲ್ಲಿದ್ದು, ಕೆಲವೊಂದು ಬದಲಾವಣೆಗಳನ್ನು ಕಾಣಬಹುದು. ಪುಣ್ಯವಿದ್ದಷ್ಟು ಮಾತ್ರವೇ ದೇವರು ನಮಗೆ ನಾವು ಬೇಡಿದ್ದನ್ನು ಕೊಡಲು ಸಾಧ್ಯ. ಜುಲೈ 10ರಿಂದ ಶನಿಯು ಅಷ್ಟಮಕ್ಕೆ ಮತ್ತೆ ಬರುತ್ತಾನೆ. ಎಚ್ಚರದಿಂದಿರಿ. ಪಿತೃ ಪುಣ್ಯದಿಂದ ಒಂದು-ವ್ಯವಹಾರವು ನಡೆದು ನಿಮ್ಮನ್ನು ಸಂತೋಷಗೊಳಿಸುತ್ತದೆ.

    ಕಟಕ

    ಕಟಕ ರಾಶಿಗೆ ಉಚ್ಚ ಗುರು ಮೀನದಲ್ಲಿದ್ದು, ನಿಮ್ಮನ್ನು ವಿಶೇಷವಾಗಿ ಅನುಗ್ರಹಿಸುತ್ತಾನೆ. ಕಷ್ಟ-ಕಾರ್ಪಣ್ಯಗಳು, ದೇಹಾಲಸ್ಯವು ಬಂದರೂ ಗುರುವಿನ ಶ್ರೀರಕ್ಷೆಯೇ ಸಾಕು ನೀವು ಮುಂದೆ ಸಾಗಲು. ಗುರುಚರಿತ್ರೆಯ 14ನೇ ಅಧ್ಯಾಯ ಪಾರಾಯಣ ಮಾಡಿ. ಈಶ್ವರನ ಪ್ರಾರ್ಥನೆ ಇರಲಿ. ಸಾಕ್ಷಾತ್ ಮಹಾದೇವನೇ ಪಾರ್ವತಿಯ ಬೇಡಿಕೆಯಿಂದ ರಾಮಾಯಣವನ್ನು ಉಪದೇಶಿಸಿದ್ದಾನೆ. ಆದ್ದರಿಂದ ಅವನನ್ನು ಧ್ಯಾನಿಸಿ. ರಾಮನನ್ನು ಪೂಜಿಸಿ. ಒಳ್ಳೆಯದಾಗುತ್ತದೆ.

    ಸಿಂಹ

    ಅಷ್ಟಮದಲ್ಲಿ ಗುರುವು ಸ್ವಕ್ಷೇತ್ರದಲ್ಲಿ ಇರುವುದರಿಂದ ಯಾವ ಕೆಡಕು ತೊಂದರೆ ಕೊಡುವುದಿಲ್ಲ. ಮನಃ ಶಾಂತಿಯನ್ನು ಪಡೆಯಲು ಆದಿತ್ಯಹೃದಯ ಪಾರಾಯಣ ಮಾಡಿ. ಪ್ರಾತಃ ಸೂರ್ಯನನ್ನು ಪೂಜಿಸಿ ದ್ವಾದಶ ನಮಸ್ಕಾರ ಮಾಡಿದರೆ ಶರೀರಕ್ಕೂ ಒಳ್ಳೆಯದು. ನಿಮ್ಮ ಉನ್ನತಿ ಯಾವ ತೊಡಕು ಇಲ್ಲದೆ ಸಿಗುತ್ತದೆ.

    ಕನ್ಯಾ

    ಸಪ್ತಮದಲ್ಲಿ ಗುರುವಿದ್ದು, ಇನ್ನು ಕೇವಲ ಹತ್ತು ದಿನಗಳಲ್ಲಿ ಶನಿಯು ಮತ್ತೆ ಬಂದು ಪಂಚಮಕ್ಕೆ ಬರುತ್ತಾನೆ. ಅವನ ಬರುವಿಕೆ ಹಾಗೂ ಇರುವಿಕೆ ಜನವರಿ 2023ರವರೆಗೆ ಇದ್ದು, ಅಲ್ಲಿಯವರೆಗೂ ಮಹಾದೇವರಾದ ಈಶ್ವರನನ್ನು ಪೂಜಿಸಿ. ನಿಮ್ಮ ನಿಲುವುಗಳನ್ನು ಕಾಪಾಡಿಕೊಂಡು ಕಾಪಾಡುತ್ತಾನೆ. ಸಪ್ತಮ ಗುರುವು ಒಬ್ಬನೇ ಸಾಕು ನಿಮ್ಮನ್ನು ಮೇಲೆತ್ತಲು. ಸಂತಸ ತರುವನು. ಆಧ್ಯಾತ್ಮ ರಾಮಾಯಣದ ರಾಮಗೀತೆ ಪಾರಾಯಣ ಮಾಡಿರಿ. ಹೆಚ್ಚಿನ ಸುಖ ಪಡೆಯಬಹುದು.

    ತುಲಾ

    ಗುರುವು ಸ್ವಕ್ಷೇತ್ರದಲ್ಲಿ ಇರುವುದು ನಿಮಗೆ ಯಾವ ನೋವು ಕಷ್ಟ-ಕಾರ್ಪಣ್ಯ ಬರುವುದಿಲ್ಲ. ಶನಿಯ ಪಂಚಮ ಸ್ಥಾನದಲ್ಲಿದ್ದಾಗ ನಿಮಗೆ ತುಂಬ ಒತ್ತಡವಿತ್ತು. ಅದರಿಂದ ಹೊರಬರಲು ದೇವರ ಆಶೀರ್ವಾದ ಬೇಕೇ ಬೇಕು. ಜಗನ್ಮಾತೆ ಸರಸ್ವತಿ ಸ್ವರೂಪಳಾದ ದುರ್ಗೆಯನ್ನು ಪೂಜಿಸಿ, ಎಲ್ಲ ನೋವುಗಳು ಮಾಯವಾಗಿ ನೀವು ನಿಮ್ಮ ನಿಲುವಿನಲ್ಲಿ ನಿಮ್ಮ ಆದ್ಯತೆ ಕಾಪಾಡಿಕೊಂಡು ಬಾಳುತ್ತೀರಿ.

    ವೃಶ್ಚಿಕ

    ಮನುಷ್ಯನು ಬಯಸುವುದು ಅಂದ-ಚೆಂದಗಳನ್ನು, ಸುಖವು ಬಂದು ಹಿತವನ್ನು ಕೊಡುವುದನ್ನು. ಎಲ್ಲ ಕಾರ್ಯದಲ್ಲಿಯೂ ಜಯಶೀಲರಾಗಬೇಕೆಂಬ ಆಸೆ ಇರುತ್ತದೆ. ಪಂಚಮ ಗುರು, ಜುಲೈ12ರಿಂದ ತೃತೀಯ ಶನಿಯು ನಿಮಗೆ ಎಲ್ಲವನ್ನು ನೀಡುವುದರಲ್ಲಿ ಸಂದೇಹವಿಲ್ಲ. ನಿಮ್ಮ ವ್ಯವಹಾರ-ವಿವಾದಗಳನ್ನು ಪರಿಹರಿಸಿಕೊಂಡು ಸಂತೋಷ ಸೃಷ್ಟಿಸಿಕೊಳ್ಳುವುದು ನಿಮ್ಮ ಕೈಲಿರುತ್ತದೆ. ಗುರುವಿನ ಸಲಹೆ ಇರಲಿ. ಕೆಲಸದಲ್ಲಿ ಶ್ರದ್ಧೆ, ಸಾಧಿಸುವ ಗುರಿ ಇದ್ದರೆ ಗುರುವಿನ ಅನುಗ್ರಹದಿಂದ ಬೇಕಾದ್ದನ್ನು ಪಡೆಯಬಹುದು.

    ಧನು

    ಹನ್ನೆರಡರಲ್ಲಿ ಕೇತುವು, ರಾಹುವು ಇರುವುದು ತಾಳ-ಮೇಳದಂತೆ. ರಾಹುವು ಪಂಚಮದಲ್ಲಿ ಇರುವುದರಿಂದ ಎಲ್ಲಾ ಕಾರ್ಯಗಳಲ್ಲೂ ಜಯಶೀಲರಾಗಿರುತ್ತೀರಿ. 9 ಮಂಗಳವಾರ ವಿನಾಯಕನ ಗುಡಿಗೆ ತೆರಳಿ ಫಲ ಸಮರ್ಪಣೆ ಮಾಡಿ. ನಿಮಗೆ ಬೇಕಾದ್ದನ್ನು ಬೇಡಿರಿ. ವರ ನೀಡುತ್ತಾನೆ.

    ಮಕರ

    ಮಕರ ರಾಶಿಯಲ್ಲಿ ಜನಿಸಿದವರಿಗೆ ತಾತ್ಕಾಲಿಕವಾಗಿ ಕೆಲವೊಂದು ಕಾರ್ಯಗಳಲ್ಲಿ ಅಡಚಣೆ ಉಂಟಾಗಿ ನಿಮಗೆ ಮನಸ್ಸಿಗೆ ನೋವು, ಒತ್ತಡ ಉಂಟಾಗಬಹುದು. ದೇಹಾಲಸ್ಯದಿಂದ ಉತ್ಸಾಹ ಕಳೆದುಕೊಳ್ಳಬಹುದು. ಎಲ್ಲಾ ಕ್ಷೇತ್ರದಲ್ಲೂ ನಿಮ್ಮನ್ನು ದೇವರು ಕಟ್ಟಿಹಾಕುವ ಪ್ರಯತ್ನ ಮಾಡುತ್ತಾನೆ. ನೀವು ದಶರಥ ವಿರಚಿತ ಶನಿಸ್ತೋತ್ರ ಪಠಿಸಿ. ಶ್ರೀಕೃಷ್ಣನನ್ನು ಧ್ಯಾನಿಸಿ. ಪೂಜಿಸಿ.

    ಕುಂಭ

    ದ್ವಿತೀಯ ಗುರುವು ಜನ್ಮದಲ್ಲಿ ಶನಿಯಿರುವುದು ನಿಮ್ಮ ಜೀವನವು ಸಮತೋಲನವಾಗಿ ಸಾಗುತ್ತದೆ. ಸಾಡೇಸಾತಿ ಶನಿಯು ಕೆಡಕನ್ನು ಕೊಡುತ್ತಾನೆಯಾದರೂ ದ್ವಿತೀಯದ ಗುರುವು ಸುಖವನ್ನು ನೀಡುತ್ತಾನೆ. ಜೀವನದಲ್ಲಿ ಅಲ್ಪ ಸಂತೋಷ ಕಾಣಬಹುದು. 12 ಜುಲೈನಿಂದ ಶನಿಯು 12ನೇ ಮನೆಗೆ ಸರಿದು ನಿಮ್ಮ ಕೆಲವೊಂದು ಕಾರ್ಯಗಳಲ್ಲಿ ಅಡಚಣೆಯು ಉಂಟಾಗಿ ನಿಧಾನವಾಗುತ್ತದೆ. ಗುರುಚರಿತ್ರೆಯ 35ನೇ ಅಧ್ಯಾಯ ಪಾರಾಯಣ ಮಾಡಿ 5 ಶನಿವಾರದಂದು ಶನಿದೇವರಿಗೆ ಎಳ್ಳು-ಬೆಲ್ಲ-ತುಪ್ಪ ಕೈಲಾದಷ್ಟು ಕೊಟ್ಟು ಒಳ್ಳೆಯ ಫಲ ಪಡೆಯಿರಿ.

    ಮೀನ

    ಲಗ್ನದಲ್ಲಿ ಗುರುವಿದ್ದು, ದ್ವಾದಶದಲ್ಲಿ ಶನಿಯು ಜುಲೈ 12ರಿಂದ ಏಕಾದಶಕ್ಕೆ ಬಂದು ಮತ್ತೆ ನಿಮ್ಮಮುಖದಲ್ಲಿ ನಗು ಮೂಡಿಸುತ್ತಾನೆ. ಚಿಂತೆಗೂ ಚಿತೆಗೂ ಒಂದು ಶೂನ್ಯವೇ ವ್ಯತ್ಯಾಸ. ಚಿಂತಿಯೆಲ್ಲವ ಮರೆತು ಶನಿಯು ಕೊಟ್ಟಿದ್ದನ್ನೆಲ್ಲಾ ಸ್ವೀಕರಿಸಿ, ನಿಮ್ಮ ಆತ್ಮಮಂದಿರದಲ್ಲಿ ಗುರುವನ್ನು ನೆನೆಯಿರಿ. ಜೀವನ ಸುಖವಾಗಿರಬಹುದು. ನಕಾರಾತ್ಮಕ ಕೆಲಸವೂ ಕೂಡ ಸಕಾರಾತ್ಮಕವಾಗಿ ನೀವು ಬಯಸಿದ ಫಲ ಸಿಗುತ್ತದೆ. ಪಂಚಫಲಗಳನ್ನು ಬ್ರಾಹ್ಮಣ-ಸುಹಾಸಿನಿಗೆ ಕೊಟ್ಟು ಅನುಗ್ರಹ ಪಡೆದುಕೊಳ್ಳಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts