More

    ಹೆಸರಿಗಷ್ಟೇ ವೀಕೆಂಡ್ ಲಾಕ್‌ಡೌನ್: ಬಳ್ಳಾರಿಯಲ್ಲಿ ಅಂಗಡಿ ಮುಂಗಟ್ಟು ಓಪನ್, ಅನಗತ್ಯ ಓಡಾಟಕ್ಕಿಲ್ಲ ಬ್ರೇಕ್

    ಬಳ್ಳಾರಿ: ವೀಕೆಂಡ್ ಲಾಕ್‌ಡೌನ್ ಜಾರಿಯಲ್ಲಿದ್ದರೂ ನಗರದಲ್ಲಿ ಶನಿವಾರ ಜನರ ಅನಗತ್ಯ ಓಡಾಟದ ಜತೆ ಕೆಲ ಅಂಗಡಿಗಳು ಸಹ ತೆರೆದಿದ್ದವು. ಇದರಿಂದ ವೀಕೆಂಡ್ ಲಾಕ್‌ಡೌನ್ ಹೆಸರಿಗೆ ಮಾತ್ರ ಎಂಬಂತಾಗಿತ್ತು.

    ಕಿರಾಣಿ, ದಿನಸಿ ಹಾಗೂ ತರಕಾರಿ, ಹಣ್ಣು ಬಂಡಿಗಳ ಮುಂದೆ ಜನರು ಮುಗಿಬಿದ್ದಿದದರು. ನಗರದ ಬೆಂಗಳೂರು ರಸ್ತೆ, ಅನಂತಪುರ ರಸ್ತೆ, ತಾಳೂರು ರಸ್ತೆ, ಇನ್ಫ್ಯಾಂಟ್ರಿ ರಸ್ತೆ, ಮೋಕಾ ರಸ್ತೆ, ತೇರು ಬೀದಿ, ಮೋತಿ ಸರ್ಕಲ್, ರಾಯಲ್ ವೃತ್ತ ಹಾಗೂ ಹೊಸಪೇಟೆ ರಸ್ತೆಗಳಲ್ಲಿ ಹೆಚ್ಚಿನ ವಾಹನ ಸಂಚಾರ ಇತ್ತು. ಇದರ ನಡುವೆ ಪೊಲೀಸರು, ಅನಗತ್ಯ ಓಡಾಡುವ ವಾಹನಗಳನ್ನು ತಪಾಸಣೆ ಮಾಡಿ ದಂಡ ವಿಧಿಸುತ್ತಿರುವುದು ಕಂಡುಬಂತು.

    ಗೊಂದಲದ ನಡುವೆ ತೆರೆದ ಅಂಗಡಿಗಳು: ಜಿಲ್ಲೆಯಲ್ಲಿ ಕರೊನಾ ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ ಜೂ.14ಕ್ಕೆ ಲಾಕ್‌ಡೌನ್ ಭಾಗಶಃ ತೆರವುಗಳಿಸಲಾಗಿತ್ತು. ರಾಜ್ಯ ಸರ್ಕಾರದ ನಿಯಮಾವಳಿ ಪ್ರಕಾರ ವಾರಂತ್ಯ ಸಂಪೂರ್ಣ ಲಾಕ್‌ಡೌನ್‌ಗೆ ಆದೇಶವಿದೆ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಪವನ್‌ಕುಮಾರ್ ಮಾಲಪಾಟಿ ಕೂಡ ಜಿಲ್ಲೆಯಲ್ಲಿ ಎರಡು ದಿನ ಕಾಲ ಸಂಪೂರ್ಣ ಲಾಕ್‌ಡೌನ್ ಇದೆ ಎಂದು ಶುಕ್ರವಾರ ಸ್ಪಷ್ಟಪಡಿಸಿದ್ದಾರೆ. ಆದರೆ, ಜನರು ಮಾತ್ರ ಎಂದಿನಂತೆ ಬೆಳಗ್ಗೆ 6 ರಿಂದ ಮಧ್ಯಾಹ್ನ 2ರ ವರೆಗೆ ಅವಕಾಶ ಇದೆ ಎಂಬ ಗೊಂದಲದ ನಡುವೆ ಕೆಲ ಅಂಗಡಿ ಮುಂಗಟ್ಟು ತೆರೆಯುವುದರ ಜತೆ ಓಡಾಟ ಹೆಚ್ಚಳವಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts