More

    ಬುಧವಾರ ಒಂದೇ ದಿನ ಕರೊನಾ ದ್ವಿಶತಕ!

    ಬೆಳಗಾವಿ: ಜಿಲ್ಲೆಯಲ್ಲಿ ಬುಧವಾರ ಕರೊನಾ ಅಬ್ಬರಿಸಿದೆ. ಒಂದೇ ದಿನ 219 ಜನರಲ್ಲಿ ವೈರಸ್ ದೃಢವಾಗಿದ್ದು, ಜನರನ್ನು ಬೆಚ್ಚಿ ಬೀಳಿಸಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1,321ಕ್ಕೆ ಏರಿಕೆಯಾಗಿದೆ. ಅಥಣಿ ಒಂದೇ ತಾಲೂಕಿನ 94 ಜನರಲ್ಲಿ ಸೋಂಕು ಪತ್ತೆಯಾಗಿದೆ.

    ಬೆಳಗಾವಿ ತಾಲೂಕಿನಲ್ಲಿ 73 ಜನರಿಗೆ ಸೋಂಕು ತಗುಲಿದೆ. ರಾಯಬಾಗ ತಾಲೂಕಿನಲ್ಲಿ 14, ಹುಕ್ಕೇರಿ ತಾಲೂಕಿನಲ್ಲಿ 10, ಗೋಕಾಕ ತಾಲೂಕಿನಲ್ಲಿ 7, ಚಿಕ್ಕೋಡಿ ಮತ್ತು ಖಾನಾಪುರ ತಾಲೂಕಿನಲ್ಲಿ ತಲಾ 5, ಸವದತ್ತಿ ತಾಲೂಕಿನಲ್ಲಿ 4, ಬೈಲಹೊಂಗಲ ತಾಲೂಕಿನಲ್ಲಿ 3, ರಾಮದುರ್ಗ ತಾಲೂಕಿನಲ್ಲಿ 2 ಹಾಗೂ ನಗರದಲ್ಲಿ ಕ್ವಾರಂಟೈನ್ ಆಗಿದ್ದ ವಿಜಯಪುರ ಮತ್ತು ಧಾರವಾಡ ಜಿಲ್ಲೆಯ ತಲಾ ಒಬ್ಬರಿಗೆ ಕರೊನಾ ದೃಢವಾಗಿದೆ.

    ಸೋಂಕಿತರಲ್ಲಿ 2 ವರ್ಷದ ಇಬ್ಬರು ಹಾಗೂ 3, 4 ಮತ್ತು 5 ವರ್ಷದ ಹೆಣ್ಣು ಮಕ್ಕಳಿಗೆ ಸೋಂಕು ತಗುಲಿದೆ. 8 ವರ್ಷದ ಇಬ್ಬರು ಹಾಗೂ 9 ವರ್ಷದ ಬಾಲಕಿಗೆ ಕರೊನಾ ವಕ್ಕರಿಸಿದೆ. ಬೆಳಗಾವಿಯಲ್ಲಿ ಕೆಎಸ್‌ಆರ್‌ಪಿ ಪೊಲೀಸರು ಹಾಗೂ ಕೆಲ ವೈದ್ಯಕೀಯ ಸಿಬ್ಬಂದಿಗೆ ಕರೊನಾ ಸೋಂಕು ತಗುಲಿದೆ ಎಂದು ತಿಳಿದು ಬಂದಿದೆ.

    ಆಸ್ಪತ್ರೆ ಆವರಣದಲ್ಲಿ ಸೋಂಕಿತರ ಓಡಾಟ?: ಬಿಮ್ಸ್‌ನ ಕೋವಿಡ್ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕರೊನಾ ಸೋಂಕಿತರು ಆಸ್ಪತ್ರೆ ಆವರಣದಲ್ಲಿ ಓಡಾಡಿದ ಘಟನೆ ಬುಧವಾರ ನಡೆದಿದೆ. ಕೋವಿಡ್ ವಾರ್ಡ್‌ನಿಂದ ಮತ್ತೊಂದು ವಾರ್ಡ್‌ಗೆ ಸೋಂಕಿತರನ್ನು ಸ್ಥಳಾಂತರ ಮಾಡುವ ವೇಳೆ ಈ ಘಟನೆ ನಡೆದಿದೆ.

    ಕೋವಿಡ್ ವಾರ್ಡ್‌ನಿಂದ ಹೊರ ಬಂದಿದ್ದ ಸೋಂಕಿತರು, ತಮ್ಮ ಸಂಬಂಧಿಕರ ಜತೆಗೆ ಗುಂಪು ಗುಂಪಾಗಿ ನಿಂತಿದ್ದರು ಎನ್ನಲಾಗಿದೆ. ಸೋಂಕಿತರನ್ನು ಒಂದು ಕಟ್ಟಡದಿಂದ ಮತ್ತೊಂದು ಕಟ್ಟಡಕ್ಕೆ ಸ್ಥಳಾಂತರಿಸುವ ವೇಳೆ ಬಿಮ್ಸ್ ಸಿಬ್ಬಂದಿ ದೈಹಿಕ ಅಂತರ ಮರೆತಿದ್ದಲ್ಲದೆ, ಅವರನ್ನು ಆಂಬುಲೆನ್ಸ್‌ನಲ್ಲಿ ಕುರಿಗಳಂತೆ ತುಂಬಿ ಸಾಗಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts