More

    Web Exclusive: ಸ್ಮಾರ್ಟ್ ಸಿಟಿಗಳಲ್ಲಿ ಸೈಕಲ್ ಸವಾರಿ; ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿದ ಡಲ್ಟ್

    | ಗಿರೀಶ್ ಗರಗ, ಬೆಂಗಳೂರು

    ರಾಜ್ಯದ 7 ಸ್ಮಾರ್ಟ್ ಸಿಟಿ ಸೇರಿ, ಒಟ್ಟು 9 ನಗರಗಳಲ್ಲಿ ಇನ್ನೊಂದು ವರ್ಷದಲ್ಲಿ ಸೈಕಲ್ ಸವಾರಿ ಸಂಭ್ರಮ ಕಂಡುಬರಲಿದೆ. ಅದಕ್ಕೆ ಸಂಬಂಧಿಸಿದಂತೆ ನಗರ ಭೂಸಾರಿಗೆ ನಿರ್ದೇಶನಾಲಯ (ಡಲ್ಟ್) ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿದ್ದು, ಅದರ ಜಾರಿಗೆ ಕ್ರಮ ಕೈಗೊಳ್ಳುತ್ತಿದೆ.

    ವಾಹನದಟ್ಟಣೆ ಹೆಚ್ಚಿರುವ ಬೆಂಗಳೂರು, ಮೈಸೂರಿನಲ್ಲಿ ಸೈಕಲ್ ಪಥ ನಿರ್ವಿುಸಿ, ಸೈಕಲ್ ಸವಾರಿಗೆ ಒತ್ತು ನೀಡಲಾಗುತ್ತಿದೆ. ಅದೇ ರೀತಿ, ಹುಬ್ಬಳ್ಳಿ- ಧಾರವಾಡ ನಡುವೆ ‘ಬಸ್ ರ್ಯಾಪಿಡ್ ಟ್ರಾನ್ಸ್​ಪೋರ್ಟ್ ಸಿಸ್ಟಂ’ (ಬಿಆರ್​ಟಿಎಸ್) ವ್ಯವಸ್ಥೆ ಜಾರಿಗೊಳಿಸಲಾಗಿದೆ. ಜತೆಗೆ, ಇದೀಗ ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಯಾಗಿರುವ 7 ನಗರಗಳು ಹಾಗೂ ಇನ್ನೆರಡು ಮಹಾನಗರಗಳಲ್ಲಿ ಸೈಕಲ್ ಸವಾರಿಗೆ ಪೂರಕ ವಾತಾವರಣ ನಿರ್ವಣಕ್ಕೆ ಡಲ್ಟ್ ಯೋಜನೆ ರೂಪಿಸುತ್ತಿದೆ. ಅದಕ್ಕೂ ಮುನ್ನ ಆ ನಗರಗಳಲ್ಲಿ ಸೈಕಲ್ ಸವಾರಿಗೆ ಇರುವ ಸವಾಲುಗಳು, ಅದಕ್ಕೆ ಕಂಡುಕೊಳ್ಳಬೇಕಾದ ಪರಿಹಾರಗಳ ಕುರಿತು ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಲಾಗಿದೆ.

    ಸ್ಮಾರ್ಟ್ ಸಿಟಿಗಳಾದ ಬೆಂಗಳೂರು, ಬೆಳಗಾವಿ, ತುಮಕೂರು, ಶಿವಮೊಗ್ಗ, ಹುಬ್ಬಳ್ಳಿ-ಧಾರವಾಡ, ದಾವಣಗೆರೆ, ಮಂಗಳೂರು ಹಾಗೂ ಸ್ಮಾರ್ಟ್ ಸಿಟಿಗೆ ಆಯ್ಕೆಯಾಗದ ಮೈಸೂರು, ಕಲಬುರಗಿಗಳಲ್ಲಿ ಯೋಜನೆ ಅನುಷ್ಠಾನಗೊಳ್ಳಲಿದೆ. ಇದನ್ನೂ ಓದಿ: WEB EXCLUSIVE: ಮೃತ ವ್ಯಕ್ತಿಗಳಿಂದ ಕರೊನಾ ಸೋಂಕು ಹರಡಲ್ಲ; ಆದ್ರೆ ಅಂತ್ಯಸಂಸ್ಕಾರಕ್ಕೆ ಮುನ್ನೆಚ್ಚರಿಕೆ ಬೇಕು

    ಸೈಕಲ್ 4 ಚೇಂಜ್: :ಪರಿಸರ ಸಂರಕ್ಷಣೆ ದೃಷ್ಟಿಯಿಂದ ಮೋಟಾರುರಹಿತ ಸಾರಿಗೆ ವ್ಯವಸ್ಥೆ ಜಾರಿ ಅನಿವಾರ್ಯ ಎಂಬ ಕಾರಣಕ್ಕಾಗಿ ಕೇಂದ್ರ ಸರ್ಕಾರ ಸೈಕಲ್ ಸವಾರಿಗೆ ಅನುಕೂಲಕರ ವಾತಾವರಣ ನಿರ್ವಿುಸಲು ‘ಡಲ್ಟ್’ಗೆ ಸೂಚಿಸಿದೆ. ಅದಕ್ಕಾಗಿ ‘ಸೈಕಲ್4ಚೇಂಜ್’ ಎಂಬ ಹೊಸ ಯೋಜನೆ ರೂಪಿಸಿ, ಅದರ ರೂಪುರೇಷೆಗಳನ್ನು ಡಲ್ಟ್​ಗೆ ನೀಡಲಾಗಿದೆ. ಇದರಡಿ ರಾಜ್ಯದ 9 ನಗರಗಳಿಗೆ ಸ್ಮಾರ್ಟ್​ಸಿಟಿ ಮಿಷನ್ ಮೂಲಕ ಅನುದಾನ ಒದಗಿಸಲಾಗುತ್ತದೆ. ಯೋಜನೆ ಜಾರಿಗಾಗಿ ಈಗಾಗಲೇ ತಲಾ 3 ನಗರಗಳಿಗೆ ಒಬ್ಬ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ.

    ಸಾರ್ವಜನಿಕರ ಅಭಿಪ್ರಾಯ ಸಂಗ್ರಹ

    ಯೋಜನೆ ಅನುಷ್ಠಾನಗೊಳ್ಳಲಿರುವ ನಗರಗಳಲ್ಲಿ ಸೈಕಲ್ ಸವಾರಿಗೆ ಇರುವ ಸವಾಲುಗಳು ಮತ್ತು ಪರಿಹಾರದ ಕುರಿತು ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಲಾಗಿದೆ. ಡಲ್ಟ್, ಆಯಾ ನಗರಗಳ ಸ್ಥಳೀಯ ಆಡಳಿತದ ಟ್ವಿಟರ್ ಖಾತೆ ಮತ್ತು ಡಲ್ಟ್​ನ ವೆಬ್​ಸೈಟ್​ನಲ್ಲಿ ಸಾರ್ವಜನಿಕರು ಸೈಕ್ಲಿಂಗ್ ಕುರಿತು ತಮ್ಮ ಅಭಿಪ್ರಾಯ ನೀಡಿದ್ದಾರೆ. ನಗರದಲ್ಲಿ ಸೈಕ್ಲಿಂಗ್​ಗೆ ಇರುವ ಅಡೆತಡೆಗಳೇನು? ನಿಮ್ಮ ನಗರದಲ್ಲಿ ಸೈಕ್ಲಿಂಗ್ ಸುರಕ್ಷಿತವೇ?, ಅಸುರಕ್ಷಿತ ಎಂದಾದಲ್ಲಿ, ಅದು ಯಾವ ಕಾರಣಕ್ಕೆ? ಯಾವ ಉದ್ದೇಶಕ್ಕೆ ಸೈಕಲ್ ಸವಾರಿ ಮಾಡುತ್ತೀರಿ ಎಂಬಂತಹ ಪ್ರಶ್ನೆಗಳಿಗೆ ಜನರು ಉತ್ತರಿಸಿದ್ದಾರೆ. ಅದನ್ನಾಧರಿಸಿ ಯೋಜನೆ ಅನುಷ್ಠಾನ ಕುರಿತ ರೂಪುರೇಷೆ ಸಿದ್ಧಪಡಿಸಲು ಡಲ್ಟ್ ಮುಂದಾಗಿದೆ.

    25 ವಾರ್ಡ್​ಗಳಲ್ಲಿ ಅನುಷ್ಠಾನ

    ಸ್ಮಾರ್ಟ್​ಸಿಟಿಗೆ ಆಯ್ಕೆಯಾಗಿರುವ ಬೆಂಗಳೂರಿನ 25 ವಾರ್ಡ್​ಗಳಲ್ಲಿ ಸೈಕಲ್ ಸವಾರಿಗೆ ಪೂರಕ ವಾತಾವರಣ ನಿರ್ವಿುಸಲಾಗುತ್ತದೆ. ಅದರಂತೆ ಹೊರವರ್ತಲ ರಸ್ತೆಯ 34 ಕಿ.ಮೀ.ನಲ್ಲಿ ಸೈಕಲ್ ಪಥ ಸೇರಿ ಇನ್ನಿತರ ಅಗತ್ಯ ಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತದೆ. ಸಿಲ್ಕ್​ಬೋರ್ಡ್ ಜಂಕ್ಷನ್​ನಿಂದ ಕೆ.ಆರ್. ಪುರದ ಲೋವರ್ ಜಂಕ್ಷನ್​ವರೆಗೆ ಅದು ಜಾರಿಯಾಗಲಿದೆ. ಅದರ ಜತೆಗೆ 130ಕ್ಕೂ ಹೆಚ್ಚಿನ ಜನರು ಸೂಚಿಸಿರುವ ಮಾರ್ಗಗಳಲ್ಲೂ ಸೈಕಲ್ ಪಥ ನಿರ್ಮಾಣ ಸೆರಿ ಇನ್ನಿತರ ಕ್ರಮಗಳ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ.

    5 ವಿಭಾಗಗಳು

    ಡಲ್ಟ್ ನಿರ್ಧರಿಸಿದಂತೆ ಸೈಕಲ್ ಬಳಕೆಗೆ ಸೂಕ್ತವಾದ 5 ವಿಭಾಗವನ್ನು ಆಯ್ಕೆ ಮಾಡಲಾಗಿದೆ. ಅದರಂತೆ ಕಚೇರಿಗೆ ತೆರಳುವ ಮಾರ್ಗ, ಶಾಲೆಗಳಿಗೆ ಹೋಗುವ ಮಾರ್ಗ, ಸಮೂಹ ಸಾರಿಗೆ ಮಾರ್ಗ, ಈಗಾಗಲೇ ಇರುವ ಮಾರ್ಗದ ಪುನಶ್ಚೇತನ, ವಾಣಿಜ್ಯ ಮಳಿಗೆಗಳಿಗೆ ತೆರಳುವ ಮಾರ್ಗಗಳಲ್ಲಿ ಸೈಕಲ್ ಪಥ ನಿರ್ವಿುಸಲಾಗುತ್ತದೆ.

    WEB EXCLUSIVE: ‘ಮ್ಯೂಸಿಯಂ ಮಾಲ್ಗುಡಿ’ಗೆ ಪ್ರವಾಸಿಗರು ಫಿದಾ: ತಿಂಗಳಲ್ಲೇ 5 ಸಾವಿರಕ್ಕೂ ಅಧಿಕ ಮಂದಿ ವೀಕ್ಷಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts