More

    ರಾಜ್ಯದಲ್ಲಿ ಇಂದಿನಿಂದ ನ. 26ರವರೆಗೆ ನಿರಂತರ ಮಳೆ; ಹವಾಮಾನ ಇಲಾಖೆಯ ಎಚ್ಚರಿಕೆ..!

    Weather Update 23-11-2023 ಬೆಂಗಳೂರು: ಮುಂದಿನ ಮೂರು ದಿನಗಳ ಕಾಲ ಬೆಂಗಳೂರು ನಗರದಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಒಳನಾಡು ಹಾಗೂ ಕರಾವಳಿ ಸೇರಿದಂತೆ ಒಟ್ಟು 7 ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ನಿರೀಕ್ಷೆ ಇದ್ದು ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ.


    ಬುಧವಾರ ಸಂಜೆ ಹೊತ್ತಿಗೆ ಶುರುವಾದ ಮಳೆ, ರಾತ್ರಿಯವರೆಗೂ ಮಳೆಯಾಗಿದ್ದು, ಬೆಂಗಳೂರಿನ ಜಯನಗರ, ಕೆಆರ್.ಪುರ, ವೈಟ್ ಫೀಲ್ಡ್, ಬೈಯಪ್ಪನಹಳ್ಳಿ, ಕಂಟೋನ್ಮೆಂಟ್, ಶಿವಾಜಿನಗರ, ಅಂಜನಾಪುರ, ವಸಂತ ನಗರ, ಪೀಣ್ಯ, ಸಿವಿ ರಾಮನ್ ನಗರ, ಬಸವನಗುಡಿ, ಕೊತ್ನೂರು, ಮಾರತ್ತಹಳ್ಳಿ, ಹೂಡಿ, ಮಹದೇವಪುರ, ಕೋರಮಂಗಲ, ಹೂಡಿ, ಮಹದೇವಪುರ, ವರ್ತೂರು, ಕಲ್ಯಾಣ ನಗರ, ಬನಶಂಕರಿ, ಕುಮಾರ ಸ್ವಾಮಿ ಬಡಾವಣೆ, ಬಿಇಎಲ್, ಉತ್ತರಹಳ್ಳಿ, ಕೆಂಗೇರಿ, ನಾಗರಭಾವಿ, ವಿಜಯನಗರ ಸೇರಿದಂತೆ ಅನೇಕ ಕಡೆಗಳಲ್ಲಿ ಮಳೆಯಾಗಿದೆ.


    ನವೆಂಬರ್‌ 24ರಂದು ಕರಾವಳಿಯ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಯೆಲ್ಲೊಅಲರ್ಟ್‌ ಘೋಷಿಸಲಾಗಿದೆ.
    ಇಂದು ಹಾಗೂ ನಾಳೆ ತಮಿಳುನಾಡು, ಕೇರಳದ ಮಾಹೆ, ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆಯಾಗದ್ದು, ಹಲವೆಡೆ ಮೋಡ ಕವಿದ ವಾತಾವರಣ ಇರಲಿದೆ.


    ನ. 27 ರಿಂದ 28 ರವರೆಗೆ ಭಾರತದ ವಾಯುವ್ಯ, ಹಿಮಾಲಯ ಪ್ರದೇಶದ ಪ್ರತ್ಯೇಕ ಸ್ಥಳಗಳಲ್ಲಿ ಲಘು ಮಳೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಪೂರ್ವ ಮಾರುತಗಳ ಪರಿಣಾಮ ವಾಯುವ್ಯ ಮತ್ತು ಪಶ್ಚಿಮ ಭಾರತದ ಮೇಲೆ ಹವಾಮಾನದಲ್ಲಿ ಬದಲಾವಣೆ ಆಗಲಿದೆ. ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಮಳೆಯಾಗುವ ನಿರೀಕ್ಷೆಗಳಿವೆ ಎಂದು ಭಾರತೀಯ ಹಮಾಮಾನ ಇಲಾಖೆ ಹೇಳಿದೆ.


    ದೆಹಲಿ-ಎನ್​ಸಿಆರ್ ಪ್ರದೇಶದ ಹವಾಮಾನ ಬದಲಾವಣೆ ಆಗಬಹುದು ಎಂದು ಅಂದಾಜಿಸಲಾಗಿದೆ. ಅಲ್ಲದೇ ನವೆಂಬರ್​ 24 ರಿಂದ 27ರವರೆಗೆ ಮೋಡ ಕವಿದ ವಾತಾವರಣ ಇರಲಿದ್ದು, ಇಂದಿನಿಂದ ಮುಂದಿನ ಮೂರು ದಿನ ಮಂಜು ಕಾಣಿಸಿಕೊಳ್ಳಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts