More

    ಮುಂಬೈ, ಪುಣೆಯಲ್ಲಿ ಲಾಕ್​ಡೌನ್​ ವಿಸ್ತರಣೆ: ಮಾಸ್ಕ್​ ಧರಿಸದೇ ಹೊರಬಂದ್ರೆ ಶಿಕ್ಷೆ ಕಾದಿದೆ…

    ಮುಂಬೈ: ಅಗತ್ಯ ಸೇವೆ ಪಡೆಯಲು ಅಥವಾ ನೀಡಲು, ಇಲ್ಲವೇ ಇನ್ಯಾವುದೇ ಕಾರಣಕ್ಕೆ ಮನೆಯಿಂದ ಹೊರಬರಬೇಕಾದರೆ ಮುಖಕ್ಕೆ ಮಾಸ್ಕ್​ ಧರಿಸಿರಲೇಬೆಕು. ಇಲ್ಲದಿದ್ದರೆ ಶಿಕ್ಷೆಗೆ ಗುರಿಯಾಗುತ್ತೀರಿ….

    ಹೌದು… ಇಂಥದ್ದೊಂದು ಕಾನೂನನ್ನು ಮುಂಬೈನಲ್ಲಿ ಜಾರಿಗೆ ತರಲಾಗಿದೆ. ಸ್ವತಃ ಸಿಎಂ ಉದ್ಧವ್​ ಠಾಕ್ರೆ ಮಾಸ್ಕ್​ ಧರಿಸಿಯೇ ಹೊರಬರುವ ಮೂಲಕ ಜನರಿಗೂ ಇದನ್ನು ಪಾಲಿಸುವಂತೆ ಮನವಿ ಮಾಡಿದ್ದಾರೆ.

    ಕರೊನಾ ಸೋಂಕಿತರ ಸಂಪರ್ಕದಲ್ಲಿ ಅಥವಾ ಸೋಂಕಿತರಿರುವ ಪ್ರದೇಶದಲ್ಲಿದ್ದವರು ಮಾತ್ರ ಮಾಸ್ಕ್​ ಧರಿಸಿದರೆ ಸಾಕು ಎಂದು ಈವರೆಗೆ ವೈದ್ಯರೂ ಕೂಡ ಹೇಳುತ್ತಿದ್ದರು. ಆದರೆ, ಈಗ ಸೋಂಕು ವ್ಯಾಪಕವಾಗಿ ಹಬ್ಬುತ್ತಿರುವುದರಿಂದ ಮಾಸ್ಕ್​ ಧರಿಸುವುದು ಅನಿವಾರ್ಯವಾಗಿದೆ. ಆದರೆ, ಜನರಲ್ಲಿ ಈ ಬಗ್ಗೆ ಅರಿವು ಮೂಡದಿರುವುದರಿಂದ ಕಾನೂನು ರೂಪಿಸುವುದು ಅನಿವಾರ್ಯವಾಗಿದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಮುಂಬೈ, ಪುಣೆಯಲ್ಲಿ ಲಾಕ್​ಡೌನ್​ ವಿಸ್ತರಣೆ
    ಮಹಾರಾಷ್ಟ್ರದಲ್ಲಿ ಕೋವಿಡ್​-19 ಪೀಡಿತರ ಸಂಖ್ಯೆ ಒಂದು ಸಾವಿರದ ಗಡಿ ದಾಟಿದೆ. ಪ್ರಸ್ತುತ 1,018 ಜರು ಸೋಂಕಿತರು ರಾಜ್ಯದಲ್ಲಿದ್ದಾರೆ. 64 ಜನರು ಈವರೆಗೆ ಮೃತಪಟ್ಟಿದ್ದಾರೆ. ಈ ಪೈಕಿ ಮುಂಬೈವೊಂದರಲ್ಲಿಯೇ 650 ಜನರಿದ್ದರೆ, ಪುಣೆಯಲ್ಲಿನ ಸೋಂಕಿತರ ಸಂಖ್ಯೆ 160. ಈ ಕಾರಣಕ್ಕಾಗಿ ಮುಂಬೈ ಹಾಗೂ ಪುಣೆಯಲ್ಲಿ ಲಾಕ್​ಡೌನ್​ ಅವಧಿಯನ್ನು ಇನ್ನೂ ಎರಡು ವಾರಗಳ ವಿಸ್ತರಿಸಲಾಗುತ್ತಿದೆ. (ಏಜೆನ್ಸೀಸ್​)

    ಏಪ್ರಿಲ್​ 14ರ ನಂತರವೂ ಲಾಕ್​ಡೌನ್​ ಮುಂದುವರಿಕೆ ಬಹುತೇಕ ಖಚಿತ: ಸರ್ವಪಕ್ಷ ಸಭೆಯಲ್ಲಿ ಪ್ರಧಾನಿ ಮೋದಿ ಇಂಗಿತ

    ಸೋಂಕಿತರ ಆರೈಕೆಯಲ್ಲಿ ತೊಡಗಿದ ಅಮ್ಮನಿಗಾಗಿ ಕಂದಮ್ಮನ ಕಣ್ಣೀರು: ನರ್ಸ್‌ಗೆ ಕರೆ ಮಾಡಿ ಧೈರ್ಯ ತುಂಬಿದ ಮುಖ್ಯಮಂತ್ರಿ ಬಿಎಸ್‌ವೈ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts