More

    ಟ್ರಂಪ್‌ಗೆ ಆಗಿರುವ ಸ್ಥಿತಿ ನೋಡಿಯಾದರೂ ಮಾಸ್ಕ್ ಹಾಕಿಕೊಳ್ಳಿ: ಬಿಡೆನ್

    ವಾಷಿಂಗ್ಟನ್: ಕರೊನಾ ಹಾವಳಿ ವಿಪರೀತವಾಗಿದ್ದರೂ ಮಾಸ್ಕ್ ಹಾಕಿಕೊಳ್ಳಲು ಇತ್ತೀಚಿನವರೆಗೂ ನಿರಾಕರಿಸುತ್ತಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ಕರೊನಾ ಸೋಂಕಿಗೆ ತುತ್ತಾಗಿ ಆಸ್ಪತ್ರೆ ಸೇರಿದ್ದಾರೆ. ಅವರ ಅಧ್ಯಕ್ಷೀಯ ಚುನಾವಣೆ ಪ್ರತಿಸ್ಪರ್ಧಿ ಜಾಯ್ ಬಿಡೆನ್, ಇದನ್ನೇ ತಮ್ಮ ಮಾತಿಗೆ ಬಂಡವಾಳ ಮಾಡಿಕೊಂಡಿದ್ದಾರೆ.

    ಮಾಸ್ಕ್ ಧರಿಸುವುದು ಎಷ್ಟು ಮುಖ್ಯವೆನ್ನುವುದನ್ನು ಟ್ರಂಪ್ ಉದಾಹರಣೆ ನೀಡಿ ಜಾಯ್ ಬಿಡೆನ್‌ಗಮನ ಸೆಳೆದಿದ್ದಾರೆ. ‘‘ನೀವೆಷ್ಟು ಕಠಿಣ ವ್ಯಕ್ತಿ ಎನ್ನುವುದು ಮುಖ್ಯವಾಗುವುದಿಲ್ಲ. ನೀವು ಮಾಸ್ಕ್ ಧರಿಸಿ ಕರ್ತವ್ಯ ಪಾಲಿಸಿದ್ದೀರಾ ಎನ್ನುವುದು ಮುಖ್ಯವಾಗುತ್ತದೆ’’ ಬಿಡೆನ್ ಟಾಂಗ್ ನೀಡಿದ್ದಾರೆ.

    ಇದನ್ನೂ ಓದಿ: ಚಾಹಲ್-ಪಡಿಕಲ್ ಸಾಹಸ, ಲಯ ಕಂಡ ಕೊಹ್ಲಿ, ಆರ್‌ಸಿಬಿಗೆ 3ನೇ ಗೆಲುವು

    ಈ ಮಧ್ಯೆ, ಟ್ರಂಪ್ ಮತ್ತು ಅವರ ಪತ್ನಿ ಮೆಲನಿಯಾ ಅವರಿಗೆ ಜ್ವರ, ನೆಗಡಿ ಮತ್ತು ಕೆಮ್ಮು ಕಾಣಿಸಿಕೊಂಡಿದೆ. ಉಸಿರಾಟದ ತೊಂದರೆಯೂ ಉಂಟಾಗಿದೆ. ಸದ್ಯ ಅವರಿಗೆ ವಾಷಿಂಗ್ಟನ್‌ನ ಹೊರವಲಯದಲ್ಲಿರುವ ವಾಲ್ಟರ್ ರೀಡ್ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕರೊನಾಕ್ಕೆ ಬಳಸಲಾಗುತ್ತಿರುವ ರೆಮೆಡೆಸಿವಿರ್ ಔಷಧವನ್ನು ಕೊಡಲಾಗಿದೆ. ಟ್ರಂಪ್‌ಗೆ ಸೋಂಕು ದೃಢವಾದ ಬೆನ್ನಲ್ಲೇ ಶ್ವೇತಭವನದ ಇತರ ಸಿಬ್ಬಂದಿಗೂ ಕರೊನಾ ಪರೀಕ್ಷೆ ಮಾಡಲಾಗುತ್ತಿದ್ದು, ಹಲವರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇಬ್ಬರು ಸೆನೆಟರ್‌ಗಳು, ಟ್ರಂಪ್‌ರ ಮಾಜಿ ಸಲಹೆಗಾರರು, ಪ್ರಚಾರ ವ್ಯವಸ್ಥಾಪಕರು ಮತ್ತು ಮೂವರು ಶ್ವೇತಭವನ ಪತ್ರಕರ್ತರಿಗೆ ಸೋಂಕು ದೃಢವಾಗಿದೆ. (ಏಜೆನ್ಸೀಸ್)

    ಅಮೆರಿಕ ಅಧ್ಯಕ್ಷ ಟ್ರಂಪ್‌ಗೆ ತೀವ್ರ ಉಸಿರಾಟದ ತೊಂದರೆ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts