More

    ಸಂಪತ್ತಿನ ಹೆಚ್ಚಿನ ಆಸೆ ಸಲ್ಲದು

    ಮಾನ್ವಿ: ಪ್ರತಿಯೊಬ್ಬರು ಭೌತಿಕ ಸಂಪತ್ತಿನ ಮೇಲೆ ಆಸೆ ಪಡೆಯುವುದರಿಂದ ಬದುಕಿನಲ್ಲಿ ಶಾಂತಿ, ನೆಮ್ಮದಿಯನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಬ್ರಹ್ಮಕುಮಾರಿ ಅಕ್ಕಮ್ಮ ಹೇಳಿದರು.

    ಇದನ್ನೂ ಓದಿ: ಮಕರ ಸಂಕ್ರಾಂತಿ 2024: ಸಂಕ್ರಾಂತಿಯಂದು ಈ 6 ವಸ್ತುಗಳನ್ನು ದಾನ ಮಾಡಿ, ಅಪಾರ ಸಂಪತ್ತಿನ ಒಡೆಯರಾಗುತ್ತೀರಿ…

    ಪಟ್ಟಣದ ಬ್ರಹ್ಮಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲಯ ಶಾಖೆಯ ಸೇವಾ ಕೇಂದ್ರದಲ್ಲಿ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಸಂಸ್ಥಾಪಕ ಬ್ರಹ್ಮಬಾಬಾ 55ನೇ ಸ್ಮತಿದಿನ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದರು.

    ರಾಜಸ್ಥಾನದಲ್ಲಿನ ಮೌಂಟ್ ಅಬುವಿನಲ್ಲಿ ವಿಶ್ವದ ಎಲ್ಲ ಜನರಿಗೆ ಒಳಿತಾಗಲಿ ಎನ್ನುವ ಉದ್ದೇಶದಿಂದ ಬ್ರಹ್ಮಬಾಬಾಬ್ರಹ್ಮಾಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲಯವನ್ನು ಸ್ಥಾಪನೆ ಮಾಡಿದ್ದರೆ.

    ಭೌತಿಕವಾದ ಸಂಪತ್ತನ್ನು ಜಗತ್ತಿನ ಉದ್ದರಕ್ಕಾಗಿ ತ್ಯಾಗ ಮಾಡಿ 1969ರಲ್ಲಿ ಪಾರಮಾತ್ಮಿಕವಾದ ಸೂಕ್ಷ್ಮ ಶಾರೀರವನ್ನು ಹೊಂದಿ ನಮ್ಮೇಲರಿಗೂ ಮಾರ್ಗದರ್ಶನ ಮಾಡುತ್ತಿದ್ದಾರೆ.

    ಇಂದು ವಿಶ್ವದಾದ್ಯಂತ ಬ್ರಹ್ಮಾಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಶಾಖೆಗಳು ಜನರಿಗೆ ಉತ್ತಮವಾದ ಮಾರ್ಗದರ್ಶನ ನೀಡುತ್ತಿವೆ ಎಂದರು.
    ಉಮೇಶ, ಗಿರಿಜಮ್ಮ, ಉಮಾದೇವಿ, ಬಸ್ಸಮ್ಮ, ಪಾರ್ವತಮ್ಮ, ವಿಶಾಲಾಕ್ಷಿ, ಶಂಕ್ರಮ್ಮ, ಪಾರ್ವತಿ ಇನ್ನಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts