More

    ಧೋನಿ ಸಿಕ್ಸರ್​ನಿಂದಲೇ ಗೆದ್ದೆವು; ಮಾಜಿ ನಾಯಕನನ್ನು ಹೊಗಳಿದ ಸಿಎಸ್​ಕೆ ನಾಯಕ ಋತುರಾಜ್​ ಗಾಯಕ್ವಾಡ್​

    ಮುಂಬೈ: “ನಮ್ಮ ಯುವ ವಿಕೆಟ್​ ಕೀಪರ್​ (ನಗುತ್ತ) ಕೊನೆಯಲ್ಲಿ 3 ಸಿಕ್ಸರ್​ ಸಿಡಿಸಿದ್ದು ನೆರವಾಯಿತು. ಅದೇ ಉಭಯ ತಂಡಗಳ ನಡುವೆ ವ್ಯತ್ಯಾಸ ತಂದಿತು. ನಮಗೆ 10-15 ಹೆಚ್ಚುವರಿ ರನ್​ ಅಗತ್ಯವಿತ್ತು’ ಎಂದು ಸಿಎಸ್​ಕೆ ನಾಯಕ ಋತುರಾಜ್​ ಗಾಯಕ್ವಾಡ್​ ಮುಂಬೈ ಇಂಡಿಯನ್ಸ್​ ವಿರುದ್ಧದ 20 ರನ್​ ಗೆಲುವಿನ ಬಳಿಕ ಮಾಜಿ ನಾಯಕ ಎಂಎಸ್​ ಧೋನಿ ಬಗ್ಗೆ ವಿಶೇಷ ಮೆಚ್ಚುಗೆ ಸೂಚಿಸಿದರು.

    ಹಾರ್ದಿಕ್​ ಪಾಂಡ್ಯ ಎಸೆದ ಸಿಎಸ್​ಕೆ ಇನಿಂಗ್ಸ್​ನ ಕೊನೇ ಓವರ್​ನಲ್ಲಿ 42 ವರ್ಷದ ಧೋನಿ 3 ಸಿಕ್ಸರ್​ ಸಹಿತ 20 ರನ್​ ಗಳಿಸಿದರು ಮತ್ತು ಕೊನೆಗೆ ಸಿಎಸ್​ಕೆ ಇಷ್ಟೇ ರನ್​ ಅಂತರದಿಂದ ಜಯಿಸಿದ್ದು ವಿಶೇಷವೆನಿಸಿತು.

    “ನಾವು 215-220 ರನ್​ ನಿರೀೆಯಲ್ಲಿದ್ದೆವು. ಆದರೆ ಬುಮ್ರಾ ಅತ್ಯುತ್ತಮ ಬೌಲಿಂಗ್​ ಮಾಡಿ ನಿಯಂತ್ರಣ ಹೇರಿದರು. ಬೌಲಿಂಗ್​ನಲ್ಲಿ ನಮ್ಮ ಕಾರ್ಯತಂತ್ರವೂ ಲಿಸಿತು. ನಮ್ಮ ಮಾಲಿಂಗ (ಪಥಿರಣ) ಅತ್ಯುತ್ತಮ ಯಾರ್ಕರ್​ ಎಸೆತಗಳನ್ನು ಎಸೆದರು’ ಎಂದು ಋತುರಾಜ್​ ಹೇಳಿದರು.
    ಸಿಎಸ್​ಕೆ ತಂಡ 207 ರನ್​ ಸವಾಲಿಗೆ ಪ್ರತಿಯಾಗಿ ರೋಹಿತ್​ ಶರ್ಮ (105*) ಭರ್ಜರಿ ಶತಕ ಸಿಡಿಸಿದರೂ, ಮುಂಬೈಗೆ ಗೆಲುವು ತಂದುಕೊಡಲಾಗಲಿಲ್ಲ. ಇಶಾನ್​ ಕಿಶನ್​ (23) ಜತೆಗೂಡಿ ಮೊದಲ ವಿಕೆಟ್​ಗೆ 70 ಮತ್ತು 3ನೇ ವಿಕೆಟ್​ಗೆ ತಿಲಕ್​ ವರ್ಮ (31) ಜತೆ 50 ರನ್​ ಸೇರಿಸಿದ ರೋಹಿತ್​ಗೆ ಇತರ ಬ್ಯಾಟರ್​ಗಳಿಂದ ಸಮರ್ಥ ಬೆಂಬಲ ಸಿಗಲಿಲ್ಲ. ಹೀಗಾಗಿ ರೋಹಿತ್​ ಗೆಲುವಿಲ್ಲದೆ, ಶತಕಕ್ಕೆ ತೃಪ್ತಿಪಟ್ಟರು. ಮಥೀಶ ಪಥಿರಣ (28ಕ್ಕೆ 4) ದಾಳಿಗೆ ನಲುಗಿದ ಮುಂಬೈ 6 ವಿಕೆಟ್​ಗೆ 186 ರನ್​ ಗಳಿಸಲಷ್ಟೇ ಶಕ್ತವಾಯಿತು.

    *ಸಿಎಸ್​ಕೆ ಯೋಜನೆ ಉತ್ತಮವಾಗಿತ್ತು ಮತ್ತು ಸಣ್ಣ ಬೌಂಡರಿ ಗೆರೆಯನ್ನು ಉತ್ತಮವಾಗಿ ಬಳಸಿಕೊಂಡಿತು. ವಿಕೆಟ್​ ಹಿಂದೆ ನಿಂತು ಸಲಹೆ ನೀಡುವ ಧೋನಿ ಕೂಡ ಸಿಎಸ್​ಕೆ ಯಶಸ್ಸಿಗೆ ನೆರವಾಗುತ್ತಿದ್ದಾರೆ ಎಂದು ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್​ ಪಾಂಡ್ಯ ಹೇಳಿದರು.

    *2: ರೋಹಿತ್​ ಶರ್ಮ ಮುಂಬೈ ಇಂಡಿಯನ್ಸ್​ ಪರ 2 ಶತಕ ಸಿಡಿಸಿದ ಮೊದಲ ಬ್ಯಾಟರ್​ ಎನಿಸಿದರು.

    3: ರೋಹಿತ್​ ಶರ್ಮ ಹಾಲಿ ಐಪಿಎಲ್​ನ 3ನೇ ಶತಕವೀರ. ವಿರಾಟ್​ ಕೊಹ್ಲಿ ಮತ್ತು ಜೋಸ್​ ಬಟ್ಲರ್​ ಮೊದಲಿಬ್ಬರು.

    *5: ರೋಹಿತ್​ ಶರ್ಮ ಟಿ20 ಕ್ರಿಕೆಟ್​ನಲ್​ಇ 500 ಸಿಕ್ಸರ್​ ಸಿಡಿಸಿದ ಮೊದಲ ಭಾರತೀಯ ಮತ್ತು ವಿಶ್ವದ 5ನೇ ಬ್ಯಾಟರ್​ ಎನಿಸಿದರು. ಕಾಲಿನ್​ ಮುನ್ರೊ (548), ಆಂಡ್ರೆ ರಸೆಲ್​ (648), ಕೈರಾನ್​ ಪೊಲ್ಲಾರ್ಡ್​ (860), ಕ್ರಿಸ್​ ಗೇಲ್​ (1056) ಮೊದಲ ನಾಲ್ವರು.

    IPL 2024: ತವರಿನಲ್ಲೂ ಸೋಲಿನ ಸರಪಳಿ ಕಳಚದ ಆರ್​ಸಿಬಿ; ರನ್​ಮಳೆಯಲ್ಲಿ ಸನ್​ರೈಸರ್ಸ್ ಎದುರು ವೀರೋಚಿತ ಸೋಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts