More

    ನಾವು ಕಾಂಗ್ರೆಸ್​ನವರಂತೆ ವಾದ ಮಾಡಲ್ಲ; ಜನರ ಮನಸು ಗೆದ್ದೇ ಚುನಾವಣೆಯಲ್ಲಿ ಗೆಲ್ಲುತ್ತೇವೆ: ಸಿಎಂ ವಿಶ್ವಾಸದ ನುಡಿ

    ಹಾವೇರಿ: ಕಾಂಗ್ರೆಸ್ ನಾಯಕರು ವಾಸ್ತವತೆಯನ್ನು ಅರ್ಥ ಮಾಡಿಕೊಳ್ಳದೆ ವಾದ ಮಾಡಿ ಚುನಾವಣೆ ಗೆಲ್ಲಲು ಹೊರಟಿದ್ದಾರೆ. ಆದರೆ ನಾವು ಅವರಂತಲ್ಲ.. ನಾವು ವಾದ ಮಾಡದೆ ಜನರ ಮನಸ್ಸನ್ನು ಗೆಲ್ಲುವ ಮೂಲಕ ಉಪ ಚುನಾವಣೆಯನ್ನು ಗೆಲ್ಲುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸದ ನುಡಿಗಳನ್ನು ಆಡಿದ್ದಾರೆ. ಕಾಂಗ್ರೆಸ್ ಮುಖಂಡರು ಚುನಾವಣಾ ಪ್ರಚಾರದಲ್ಲಿ ನಡೆಸುತ್ತಿರುವ ವಾಕ್ಸಮರಕ್ಕೆ ಅವರು ಈ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.

    ಹಾನಗಲ್ ವಿಧಾನಸಭಾ ಕ್ಷೇತ್ರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಾವು ವಾದವನ್ನು ಮಾಡದೆ ಜನರ ಮನಸ್ಸನ್ನು ಗೆಲ್ಲುವ ಪ್ರಯತ್ನ ಮಾಡುತ್ತಿದ್ದೇವೆ. ಹಾನಗಲ್ ಹಾಗೂ ಸಿಂದಗಿಯಲ್ಲಿ ಜನರ ಪ್ರೀತಿ ವಿಶ್ವಾಸ ಹಾಗೂ ಅಭಿವೃದ್ಧಿಯನ್ನು ಮುಂದಿಟ್ಟುಕೊಂಡು ನಾವು ಚುನಾವಣೆ ಎದುರಿಸುತ್ತಿದ್ದೇವೆ. ಅದೇ ನಮಗೆ ಶಕ್ತಿ ಎಂದು ಹೇಳಿದರು.

    ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಉತ್ತರ ಕರ್ನಾಟಕದ ಬಗ್ಗೆ ಇರದ ಕಾಳಜಿ ಈಗ ತೋರಿಸುತ್ತಿದ್ದಾರೆ. ಅವರ ಬಣ್ಣದ ಮಾತುಗಳಿಗೆ ಜನ ಮರುಳಾಗಬಾರದೆಂದು ತೀರ್ಮಾನ ಮಾಡಿದ್ದಾರೆ. ಆದರೆ ವಾಸ್ತವತೆಯನ್ನು ಅರ್ಥಮಾಡಿಕೊಳ್ಳದೆ ಕಾಂಗ್ರೆಸ್​ನವರು ವ್ಯರ್ಥವಾಗ ವಾದ ಮಾಡುತ್ತಿದ್ದಾರೆ ಎಂದರು.

    ಇದನ್ನೂ ಓದಿ: ಕರ್ತವ್ಯದಲ್ಲಿರುವಾಗ, ಸಮವಸ್ತ್ರ ಧರಿಸಿಕೊಂಡೇ ಪೊಲೀಸರ ಡ್ರಿಂಕ್ಸ್​ ಪಾರ್ಟಿ; ಬಾರ್​ವೊಂದರ ಕೊಠಡಿಯಲ್ಲಿ ಕುಡಿಯುತ್ತಿದ್ದ ವಿಡಿಯೋ ವೈರಲ್​

    ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಹಾವೇರಿ ಬಗ್ಗೆ ಯಾವುದೇ ಕಾಳಜಿಯನ್ನು ತೋರಿಸಲಿಲ್ಲ. ಇಲ್ಲಿಯ ಜನತೆಯ ಬಗ್ಗೆ ಇಲ್ಲಿಯ ಆರೋಗ್ಯ ಕ್ಷೇತ್ರದ ಬಗ್ಗೆ ಸ್ವಲ್ಪವೂ ಕಾಳಜಿ ತೋರದೆ ಈಗ ಉತ್ತರ ಕರ್ನಾಟಕದ ಬಗ್ಗೆ ಮಾತನಾಡುತ್ತಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಾವೇರಿ ಜಿಲ್ಲೆಗೆ ಮೆಡಿಕಲ್ ಕಾಲೇಜ್ ದೊರಕಿತ್ತು. ನಂತರದಲ್ಲಿ ಬಂದ ಕಾಂಗ್ರೆಸ್ ಸರ್ಕಾರ ಇದಕ್ಕೆ ಆರ್ಥಿಕವಾಗಿ ನೆರವು ನೀಡುತ್ತೇವೆ ಎಂದು ಹೇಳಿದ್ದರೆ ಸಾಕಿತ್ತು. ಹಾವೇರಿಯಲ್ಲಿ ಮೆಡಿಕಲ್ ಕಾಲೇಜು ಆರಂಭವಾಗುತ್ತಿತ್ತು. ಆದರೆ ಸಿದ್ದರಾಮಯ್ಯ ಆಸಕ್ತಿ ತೋರಲಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾಲೆಳೆದರು.

    ನಾಯಕತ್ವ ಜನರ ತೀರ್ಮಾನ

    ಬಿಜೆಪಿಯನ್ನು ಸೋಲಿಸುವುದು ಅವರ ಕೆಲಸ, ಆದರೆ ಅದು ಅವರ ಕೈಯಲ್ಲಿ ಇಲ್ಲ. ಜನರು ನಾಯಕತ್ವವನ್ನು ತೀರ್ಮಾನ ಮಾಡುತ್ತಾರೆ. ಜನರ ನಾಡಿಮಿಡಿತ ನಮಗೆ ಗೊತ್ತಿದೆ. ಎರಡು ಕ್ಷೇತ್ರದಲ್ಲಿ ನಮಗೆ ನಿಶ್ಚಿತವಾಗಿ ಜಯ ಸಿಕ್ಕೇ ಸಿಗುತ್ತದೆ. ಹಾನಗಲ್ ಮತಕ್ಷೇತ್ರದಲ್ಲಿ ಶಿವರಾಜ ಸಜ್ಜನ್ ಅತ್ಯಧಿಕ ಮತಗಳಿಂದ ಜಯಶಾಲಿ ಆಗಲಿದ್ದಾರೆ. ಚುನಾವಣೆಯ ನಾಡಿಮಿಡಿತ ನೋಡಿದರೆ ಭಾರತೀಯ ಜನತಾ ಪಕ್ಷಕ್ಕೆ ದಿನೇದಿನೆ ಬೆಂಬಲ ಹೆಚ್ಚುತ್ತಿದೆ. ನಾವು ಜನರ ಪರವಾಗಿ ಇದ್ದೇವೆ, ಜನರು ನಮ್ಮ ಪರವಾಗಿದ್ದಾರೆ. ನಿರಂತರವಾಗಿ ಜನರ ಬೇಕು-ಬೇಡಗಳಿಗೆ ಸ್ಪಂದಿಸುವಂತಹ ಕೆಲಸವನ್ನು ಮಾಡುತ್ತಿದ್ದೇವೆ. ಜನರು ನಮ್ಮ ಕೈ ಬಿಡುವುದಿಲ್ಲ, ನಾವು ಜನರ ಕೈಬಿಡುವುದಿಲ್ಲ ಎಂದು ಮುಖ್ಯಮಂತ್ರಿಗಳು ಅಭಿಪ್ರಾಯಪಟ್ಟರು.

    ನಾವು ಕಾಂಗ್ರೆಸ್​ನವರಂತೆ ವಾದ ಮಾಡಲ್ಲ; ಜನರ ಮನಸು ಗೆದ್ದೇ ಚುನಾವಣೆಯಲ್ಲಿ ಗೆಲ್ಲುತ್ತೇವೆ: ಸಿಎಂ ವಿಶ್ವಾಸದ ನುಡಿ

    ಅವರ ‘ಕೈ’ವಾಡ ವರ್ಕ್​ ಆಗಲ್ಲ

    ಎಲ್ಲ ಸಚಿವರು ಉಪ ಚುನಾವಣೆಯಲ್ಲಿ ಬೀಡುಬಿಟ್ಟು ದುಡ್ಡನ್ನು ಹಂಚುತ್ತಿದ್ದಾರೆ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಡಿ.ಕೆ. ಶಿವಕುಮಾರ್ ತಮ್ಮ ಅನುಭವದ ಮಾತುಗಳು ಆಡುತ್ತಿದ್ದಾರೆ. ಅಧಿಕಾರದಲ್ಲಿದ್ದಾಗ ಕುಂದಗೋಳ, ಗುಂಡ್ಲುಪೇಟೆ, ನಂಜನಗೂಡು ಉಪಚುನಾವಣೆಯಲ್ಲಿ ಏನೆಲ್ಲ ಮಾಡಿದ್ದಾರೆ ಎಂದು ನಾವು ನೋಡಿದ್ದೇವೆ. ಅವರು ತಮ್ಮ ಅನುಭವ ನಮ್ಮ ಮೇಲೆ ಹೇಳುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಯಾವುದೇ ಸ್ಟ್ರ್ಯಾಟಜಿ-ಷಡ್ಯಂತ್ರ ಯಶಸ್ವಿಯಾಗುವುದಿಲ್ಲ ಎಂದು ಅವರು ಲೇವಡಿ ಮಾಡಿದರು.

    ಬೆಲೆ ಏರಿಕೆಯಾಗಿದ್ದು ಕಾಂಗ್ರೆಸ್​​ನವರಿಂದಲೇ

    ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣ್​ದೀಪ್​ ಸಿಂಗ್ ಸುರ್ಜೆವಾಲಾ ಅವರ ಹೇಳಿಕೆಗೆ ಉತ್ತರಿಸಿದ ಬೊಮ್ಮಾಯಿ, ದೇಶದಲ್ಲಿ ನಿರಂತರವಾಗಿ ಬೆಲೆ ಏರಿಕೆಯಾಗಿದ್ದು ಕಾಂಗ್ರೆಸ್​​ನವರಿಂದಲೇ. ಆದರೆ ಸುರ್ಜೆವಾಲಾರಿಗೆಲ್ಲ ಜನರ ಬಳಿ ಹೋಗಿ ಗೊತ್ತಿಲ್ಲ. ಅವರು ಎದುರಿಸಿದ ಉಪಚುನಾವಣೆ ಕಥೆ ಏನಾಯ್ತು ಎಂದು ಅವರನ್ನೇ ಕೇಳಿ ಎಂದರು. ಪೆಟ್ರೋಲಿಯಂ ಬಾಂಡ್​​ಗಳನ್ನೆಲ್ಲ ಮಾಡಿ ದೇಶದ ಜನರ ಮೇಲೆ ಹಾಕಿದ್ದಾರೆ. ಆರ್ಥಿಕತೆಯನ್ನು ಈ ಹಂತಕ್ಕೆ ತಲುಪಿಸಿ ಅದನ್ನೆಲ್ಲ ಮರೆಮಾಚಲು ಅಂಥ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಮುಖ್ಯಮಂತ್ರಿಗಳು ಗರಂ ಆಗಿ ಹೇಳಿದರು.

    ನಾವು ಕಾಂಗ್ರೆಸ್​ನವರಂತೆ ವಾದ ಮಾಡಲ್ಲ; ಜನರ ಮನಸು ಗೆದ್ದೇ ಚುನಾವಣೆಯಲ್ಲಿ ಗೆಲ್ಲುತ್ತೇವೆ: ಸಿಎಂ ವಿಶ್ವಾಸದ ನುಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts