More

    ಬಿ.ಯು ಸಂಖ್ಯೆ ಸಿಗುವುದು ತಡವಾದರೂ ಕೋವಿಡ್ ರೋಗಿಗಳನ್ನು ಆಸ್ಪತ್ರೆಗೆ ದಾಖಲು ಮಾಡಿಕೊಳ್ಳಲು ಕ್ರಮ

    ಬೆಂಗಳೂರು: ಕೋವಿಡ್ ಸೋಂಕಿನ ವ್ಯಕ್ತಿಗಳಿಗೆ ಬಿ.ಯು ಸಂಖ್ಯೆ ನೀಡುವ ಸಂಬಂಧ ತಾಂತ್ರಿಕ ದೋಷ ಕಂಡುಬಂದರೂ, ತ್ವರಿತವಾಗಿ ಕೋವಿಡ್-19 ನಿಯಂತ್ರಣಕ್ಕೆ ಬರಬೇಕು ಎಂಬ ಕಾರಣಕ್ಕಾಗಿ ಸೋಂಕಿತ ವ್ಯಕ್ತಿಗಳನ್ನು ಆಸ್ಪತ್ರೆಗಳಿಗೆ ಸೇರಿಸಿಕೊಳ್ಳುವ ವ್ಯವಸ್ಥೆ ಮಾಡಲಾಗಿದೆ, ರಾಜ್ಯಕ್ಕೆ 10 ಲಕ್ಷ ಕೋವಿಡ್-19 ನಿರೋಧಕ ಲಸಿಕೆ ಬರುತ್ತಿದ್ದು, ನಗರಕ್ಕೆ 3 ಲಕ್ಷ ಲಸಿಕೆ ನೀಡಲಾಗುತ್ತಿದೆ, ಲಸಿಕೆ ಪೂರೈಕೆಯಲ್ಲಿ ಯಾವುದೇ ಅಡಚಣೆಯಾಗಿಲ್ಲ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಪೂರ್ವ ವಲಯ ಹಾಗೂ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಕೋವಿಡ್-19 ಮೇಲ್ವಿಚಾರಣೆ ಉಸ್ತುವಾರಿ ಸಚಿವರಾಗಿ ನೇಮಕಗೊಂಡಿರುವ ವಸತಿ ಸಚಿವರಾದ ವಿ.ಸೋಮಣ್ಣ ಹೇಳಿದರು.

    ಬೆಂಗಳೂರು ನಗರದಲ್ಲಿ ದಿನೇ ದಿನೇ ಕೋವಿಡ್-19 ತೀವ್ರ ತೆರನಾಗಿ ಏರುಮುಖ ಕಾಣುತ್ತಿದ್ದು, ಆತಂಕ ಸೃಷ್ಟಿಸಿರುವ ಹಿನ್ನೆಲೆಯಲ್ಲಿ ಸೂಕ್ತ ಪರಿಹಾರೋಪಾಯಗಳು ಹಾಗೂ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳುವ ನಿಟ್ಟನಲ್ಲಿ ಸಚಿವರು ಇಂದು ಮಹತ್ವದ ಸಭೆಯನ್ನು ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

    ಇದನ್ನೂ ಓದಿ: ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್​ಗೆ ಕರೊನಾ ಪಾಸಿಟೀವ್

    ಕೋವಿಡ್-19 ಬೆಂಗಳೂರು ನಗರದಲ್ಲಿ ತೀವ್ರಮುಖವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಕೋವಿಡ್ ಪರೀಕ್ಷೆಗಳನ್ನು ಮಾಡಲಾಗುತ್ತಿದೆ, ಪರೀಕ್ಷೆಗಳ ಪ್ರಮಾಣವನ್ನು ಮತ್ತಷ್ಟು ಹೆಚ್ಚಳ ಮಾಡಲಾಗುವುದು, ಕೋವಿಡ್ ಸಂಬಂಧಿಸಿದಂತೆ ಅವಶ್ಯಕವಾದ ಮೂಲಸೌಕರ್ಯಗಳಲ್ಲಿ ಯಾವುದೇ ಕೊರತೆಯಿಲ್ಲ, ಅಗತ್ಯ ಸಿಬ್ಬಂದಿ ಲಭ್ಯವಿದೆ ದು ಹೇಳಿದ ಸಚಿವರು ಬೆಂಗಳೂರು ನಗರದಲ್ಲಿ ಕೊರೋನಾ-19 ಎದುರಿಸಬಲ್ಲ ಸಮರ್ಥ, ಅನುಭವಿ ಅಧಿಕಾರಿಗಳಿಗಿದ್ದು, ಎಲ್ಲರೂ ಪರಿಸ್ಥಿತಿಯನ್ನು ಎದುರಿಸಲು ಸನ್ನದ್ಧರಾಗಿದ್ದಾರೆ, 49 ಶವ ಸಾಗಣೆ ವಾಹನಗಳಿದ್ದು, ಅವಶ್ಯಕತೆಯಿದ್ದಲ್ಲಿ ಅವುಗಳ ಸಂಖ್ಯೆಯಲ್ಲಿ ಹೆಚ್ಚಳ ಮಾಡಿಕೊಳ್ಳಲಾಗುತ್ತದೆ. ಜೊತೆಗೆ ಪ್ರತಿ ವಾರ್ಡ್ ಒಂದಕ್ಕೆ 2 ಆಂಬ್ಯುಲೆನ್ಸುಗಳನ್ನು ನಿಯೋಜನೆ ಮಾಡಲಾಗಿದೆ ಎಂದೂ ಹೇಳಿದರು.

    ಪೂರ್ವ ವಲಯ ಹಾಗೂ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಆಯಾ ವಿಧಾನಸಭಾ ಕ್ಷೇತ್ರಗಳಲ್ಲಿ ವಾರ್ ರೂಂ ಸ್ಥಾಪನೆ, ಕೋವಿಡ್ ಆರೈಕೆ ಕೇಂದ್ರಗಳ ಆರಂಭ, ಹಾಗೂ ಫೀವರ್ ಕ್ಲೀನಿಕ್‌ಗಳ ಹೆಚ್ಚಳಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಚಿವ ಶ್ರೀ ವಿ.ಸೋಮಣ್ಣ ತಿಳಿಸಿದರು. ಖಾಸಗಿ ಆಸ್ಪತ್ರಗೆಳಲ್ಲಿ ಹಾಸಿಗೆ ಲಭ್ಯತೆ ಪಡೆಯಲು ಅಗತ್ಯ ಕ್ರಮ ವಹಿಸಲಾಗುತ್ತಿದೆ ಎಂದು ಸಚಿವರು ಹೇಳಿದರು.

    ಇನ್ನೆರಡು ದಿನದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಮೆಡಿಕಲ್ ಕಾಲೇಜಿಗೆ 10 ವೆಂಟಿಲೇಟರ್‌ಗಳನ್ನು ನೀಡಲಾಗುತ್ತದೆ, ಚರಕ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 150 ಹಾಸಿಗೆಗಳಿದ್ದು, ಅಷ್ಟೂ ಹಾಸಿಗೆಗಳನ್ನು ಕೋವಿಡ್ ಚಿಕಿತ್ಸೆಗೆ ಮೀಸಲಿಡಲು ಸಿದ್ಧತೆಗಳಾಗುತ್ತಿವೆ, ಈ ವ್ಯವಸ್ಥೆಗೆ ಶೀಘ್ರ ಚಾಲನೆ ನೀಡಲಾಗುವುದು ಎಂದು ತಿಳಿಸಿದ ಸಚಿವರು ಎಲ್ಲಾ ನಾಗರಿಕರು ಮುಂಜಾಗರೂಕತೆಯಿಂದಿರಬೇಕು, ನಗರದ ಎಲ್ಲೆಡೆ ಶೀಘ್ರವಾಗಿ ಜಲಮಂಡಳಿ, ಅಗ್ನಿ ಶಾಮಕ ದಳದ ಸಹಯೋಗದಲ್ಲಿ ಸೋಂಕು ನಿವಾರಕ ಸಿಂಪಡಣೆ ಮಾಡಲಾಗುವುದು ಎಂದು ಹೇಳಿದರು.

    ಸಿಎಂ ಯಡಿಯೂರಪ್ಪಗೆ ಮತ್ತೆ ಕರೊನಾ ಪಾಸಿಟಿವ್​! ರಾಮಯ್ಯ ಆಸ್ಪತ್ರೆಯಿಂದ ಮಣಿಪಾಲ್​ಗೆ ಶಿಫ್ಟ್

    ಕಲ್ಲಿನಿಂದ ಹೊಡೆದು ಸಾರಿಗೆ ಬಸ್​ ಚಾಲಕನ ಪ್ರಾಣ ತೆಗೆದ ಕಿಡಿಗೇಡಿಗಳು! ಮುಷ್ಕರ ಬಿಟ್ಟು ಕೆಲಸಕ್ಕೆ ಬಂದಿದ್ದಕ್ಕೆ ಶಿಕ್ಷೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts