More

    ಯಾವುದೇ ತನಿಖೆಗೂ ಅಂಜುವುದಿಲ್ಲ, ಬಗ್ಗುವುದಿಲ್ಲ ಎಂದ ಕಾಂಗ್ರೆಸ್​

    ನವದೆಹಲಿ: ರಾಜೀವ್​ ಗಾಂಧಿ ಪ್ರತಿಷ್ಠಾನ ಸೇರಿ ಗಾಂಧಿ ಕುಟುಂಬಕ್ಕೆ ಸೇರಿದ ಮೂರು ಟ್ರಸ್ಟ್​ಗಳ ವಿರುದ್ಧ ತನಿಖೆ ಕೈಗೊಳ್ಳಲು ಅಂತರಸಚಿವಾಲಯ ಸಮಿತಿಯನ್ನು ರಚಿಸಿರುವ ಕೇಂದ್ರ ಸರ್ಕಾರ ಕ್ರಮಕ್ಕೆ ತಾವು ಅಂಜುವುದೂ ಇಲ್ಲ. ಬಾಗುವುದೂ ಇಲ್ಲ ಎಂದು ಕಾಂಗ್ರೆಸ್​ ಹೇಳಿದೆ.
    ಇದೊಂದು ರೀತಿ ಕತ್ತಲಲ್ಲಿ ಕಣ್ಣು ಕಟ್ಟಿಕೊಂಡು ಶೋಧ ಕಾರ್ಯ ಮಾಡಿದಂತೆ. ಹಾಗಾಗಿ ಈ ಬಗ್ಗೆ ತಾನು ಆತಂಕಗೊಳ್ಳುವುದಿಲ್ಲ ಎಂದು ಎಂದು ಕಾಂಗ್ರೆಸ್​ ಮುಖಂಡ ರಾಹುಲ್​ ಗಾಂಧಿ ಹೇಳಿದ್ದಾರೆ.

    ಮೋದಿ ಅವರು ಲೋಕ ತಮ್ಮಂತೇ ಇದೆ ಎಂದು ಭಾವಿಸಿದ್ದಾರೆ. ಪ್ರತಿಯೊಬ್ಬರಿಗೂ ಒಂದು ಬೆಲೆ ಇದೆ, ಇಲ್ಲವೇ ಅವರನ್ನು ಹೆದರಿಸಬಹುದು ಎಂಬುದು ಅವರ ಭಾವನೆಯಾಗಿದೆ. ಸತ್ಯಕ್ಕಾಗಿ ಹೋರಾಡುವವರಿಗೆ ಯಾವುದೇ ಬೆಲೆ ಕಟ್ಟಲು ಸಾಧ್ಯವಿಲ್ಲ ಹಾಗೂ ಅವರನ್ನು ಬೆದರಿಸಲೂ ಸಾಧ್ಯವಿಲ್ಲ ಎಂದು ರಾಹುಲ್​ ಗಾಂಧಿ ಟ್ವೀಟ್​ ಮಾಡಿದ್ಧಾರೆ.

    ಇದನ್ನೂ ಓದಿ: ನವೆಂಬರ್‌ ಅಂತ್ಯದವರೆಗೂ ಉಚಿತ ಪಡಿತರ- ಸಚಿವ ಸಂಪುಟ ಅನುಮೋದನೆ

    ಕೇಂದ್ರ ಸರ್ಕಾರದ ಇಂಥ ಮೂರ್ಖತನದ ನಿರ್ಧಾರದಿಂದ ಕಾಂಗ್ರೆಸ್​ ಬೆದರುವುದಿಲ್ಲ. ಸರ್ಕಾರ ದೇಶದ ಜನರಿಗೆ ಸರಿಯಾದ ಉತ್ತರ ನೀಡುವಂತೆ ಮಾಡುವುದು ನಮ್ಮ ಕರ್ತವ್ಯವಾಗಿದೆ. ನಮ್ಮನ್ನು ಬೆದರಿಸುವ ಇಂಥ ಕ್ರಮಗಳಿಂದ ನಮ್ಮ ನಿರ್ಧಾರ ಮತ್ತಷ್ಟು ಗಟ್ಟಿಯಾಗುತ್ತದೆ ಎಂದು ಹೇಳಿದ್ದಾರೆ.

    ಸರ್ಕಾರದ ಹುಳುಕುಗಳನ್ನು ಎತ್ತಿ ತೋರಿಸುವವರ ವಿರುದ್ಧ, ತಪ್ಪುಗಳನ್ನು ತೋರಿಸುವವರ ವಿರುದ್ಧ ನರೇಂದ್ರ ಮೋದಿ ಮತ್ತು ಅಮಿತ್​ ಷಾ ಸರ್ಕಾರ ದ್ವೇಷಪೂರಿತವಾಗಿ ಇಲ್ಲದ ತನಿಖೆಗಳಿಗೆ ಆದೇಶಿಸುವುದನ್ನೇ ರೂಢಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

    ರಾಜೀವ್​ ಗಾಂಧಿ ಪ್ರತಿಷ್ಠಾನ, ರಾಜೀವ್​ ಗಾಂಧಿ ಚಾರಿಟಬಲ್​ ಟ್ರಸ್ಟ್​ ಮತ್ತು ಇಂದಿರಾ ಗಾಂಧಿ ಸ್ಮಾರಕ ಟ್ರಸ್ಟ್​ಗಳ ಆರ್ಥಿಕ ಅವ್ಯವಹಾರಗಳು, ಆದಾಯ ತೆರಿಗೆ ಮತ್ತು ವಿದೇಶಿ ವಿನಿಯಮ ಕಾಯ್ದೆಗಳನ್ನು ಉಲ್ಲಂಘಿಸಿರುವ ಕುರಿತು ತನಿಖೆ ನಡೆಸಲು ಕೇಂದ್ರ ಸರ್ಕಾರ ಬುಧವಾರ ಜಾರಿ ನಿರ್ದೇಶನಾಲಯದ ವಿದೇಶ ನಿರ್ದೇಶಕರ ನೇತೃತ್ವದಲ್ಲಿ ಅಂತರಸಚಿವಾಲಯ ಸಮಿತಿಯನ್ನು ರಚಿಸಿದೆ.

    ವಿಶಾಖಪಟ್ಟಣ ವಿಷಾನಿಲ ದುರಂತ ಪ್ರಕರಣ; ಕಾರ್ಖಾನೆಯ ದಕ್ಷಿಣ ಕೊರಿಯಾ ಸಿಇಒ ಸೇರಿ 12 ಜನರ ಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts