More

    ಸಚಿವ ಸಂಪುಟ ಸಭೆ ಅಂತ್ಯ: ಸಂಪೂರ್ಣ ಲಾಕ್​ಡೌನ್​ ಬಗ್ಗೆ ಸಿಎಂ ಯಡಿಯೂರಪ್ಪ ಏನಂದ್ರು?

    ಬೆಂಗಳೂರು: ರಾಜ್ಯದಲ್ಲಿ ಕರೊನಾ ಸೋಂಕು ಹೆಚ್ಚಳವಾಗುತ್ತಿರುವ ಬಗ್ಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಇಂದು ತುರ್ತು ಸಚಿವ ಸಂಪುಟ ಸಭೆ ನಡೆಸಿ, ಮುಂದೆ ಮಾಡಬೇಕಿರುವ ತ್ವರಿತ ಕೆಲಸಗಳ ಬಗ್ಗೆ ತೀರ್ಮಾನ ತೆಗೆದುಕೊಂಡರು.

    ನಂತರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಆಕ್ಸಿಜನ್ ಸಮಸ್ಯೆ ಆಗದಿರುವಂತೆ ಮಾಸ್ಟರ್ ಪ್ಲಾನ್ ಮಾಡಿದ್ದೇವೆ. ಇದರ ಜವಾಬ್ದಾರಿಯನ್ನು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರಿಗೆ ವಹಿಸಲಾಗಿದೆ. ಅವರು ಈ ಬಗ್ಗೆ ಕೇಂದ್ರ ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿರುತ್ತಾರೆ ಎಂದು ತಿಳಿಸಿದರು. ಅದರಂತೆ ರೆಮ್​ಡಿಸಿವರ್ ಲಭ್ಯತೆ, ಪೂರೈಕೆ ಜವಾಬ್ದಾರಿಯನ್ನು ಡಿಸಿಎಂ ಅಶ್ವತ್ಥ್ ನಾರಾಯಣ ಅವರಿಗೆ ವಹಿಸಲಾಗಿದೆ. ವಾರ್​ರೂಂ ಜವಾಬ್ದಾರಿಯನ್ನು ಅರವಿಂದ್ ಲಿಂಬಾವಳಿಗೆ, ಬೆಡ್ ವ್ಯವಸ್ಥೆ ಬಗ್ಗೆ ಬಸವರಾಜ ಬೊಮ್ಮಾಯಿಗೆ ವಹಿಸಲಾಗಿದೆ ಎಂದು ತಿಳಿಸಿದರು.

    ಅಲ್ಲದೇ ನಾಳೆಯಿಂದ ಎಲ್ಲ ಜಿಲ್ಲೆಯ ಉಸ್ತುವಾರಿ ಸಚಿವರು ತಮಗೆ ವಹಿಸಲಾಗಿರುವ ಜಿಲ್ಲೆಯಲ್ಲಿ ಅವರು ಬೀಡು ಬಿಟ್ಟು ಯುದ್ದೋಪಾದಿಯಲ್ಲಿ ಕೆಲಸ ಮಾಡಬೇಕು. ಜಿಲ್ಲೆಗಳಲ್ಲಿ ಏನೇ ಸಮಸ್ಯೆ ಬಂದರೂ ಅವರೇ ನಿಭಾಯಿಸಬೇಕು. ಏನೇ ಬಂದರೂ ಅವರೇ ಜವಾಬ್ದಾರಿ ಹೊರಬೇಕು ಎಂದು ಸಿಎಂ ತಿಳಿಸಿದರು.
    ಸಂಪೂರ್ಣ ಲಾಕ್​ಡೌನ್ ಮಾಡುವ ಬಗ್ಗೆ ಇಂದಿನ ಸಭೆಯಲ್ಲಿ ವಿವರವಾಗಿ ಚರ್ಚೆಯಾಗಿಲ್ಲ. ಇನ್ನು ಮೂರು ದಿನದಲ್ಲಿ ಮತ್ತೊಂದು ಸಭೆ ಮಾಡಿ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಸಿಎಂ ಹೇಳಿದರು.

    ಚಾಮರಾಜನಗರದಲ್ಲಿ ಆಕ್ಸಿಜನ್ ಸಿಗದೇ 24 ಜನ ಮೃತಪಟ್ಟ ಪ್ರಕರಣ ನನಗೆ ನೋವು ತರಿಸಿದೆ. ಈ ರೀತಿ ಎಲ್ಲೂ ಆಗಬಾರದು. ತಪ್ಪಿತಸ್ಥರು ಯಾರೇ ಇದ್ದರೂ ಅವರ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.

    ಮಾಧ್ಯಮದವರನ್ನು ಕೂಡ ಫ್ರಂಟ್​ಲೈನ್ ಕೋವಿಡ್ ವಾರಿಯರ್ಸ್​​ ಆಗಿ ಪರಿಗಣಿಸಿದ್ದು, ಅವರೆಲ್ಲರಿಗೂ ಲಸಿಕೆ ಸಿಗಲು ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ತಿಳಿಸಿದರು.

    ಬೆಡ್, ಔಷಧಿ ವಿಚಾರದಲ್ಲಿ ಅವ್ಯವಹಾರ ನಡೆದಿರುವುದು‌ ನಿಜ. ತನಿಖೆ ಮಾಡಿ, ತಪ್ಪಿತಸ್ಥರು ಕಂಡುಬಂದರೆ ಇವತ್ತೇ ಅಮಾನತು ಮಾಡುತ್ತೇನೆ‌. ಸಿದ್ದರಾಮಯ್ಯ ರಾಜಿನಾಮೆ ಕೇಳುವುದೇ ಕೆಲಸ. ನಾನು ರಾಜಿನಾಮೆ ಕೊಡುವುದರಿಂದ ಸಮಸ್ಯೆ ಬಗೆಹರಿಯಲ್ಲ. ಅವರು ಸಲಹೆ ಕೊಡಲಿ ಪರಿಗಣಿಸುತ್ತೇವೆ ಎಂದರು.

    ಮೈಸೂರು ಡಿಸಿ v/s ಚಾಮರಾಜನಗರ ಡಿಸಿ: ರೋಹಿಣಿ ಸಿಂಧೂರಿ ಸುಳ್ಳು ಲೆಕ್ಕ ಕೊಟ್ಟು ಸಿಕ್ಕಿಬಿದ್ರಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts