More

    ‘ಗಡಿ ವಿವಾದ ಸಂಬಂಧವನ್ನು ಹಾಳುಗೆಡುವದಿರಲಿ’: ಮಾತುಕತೆಯತ್ತ ಒಲವು ತೋರಿದ ಚೀನಾ ರಾಯಭಾರಿ

    ನವದೆಹಲಿ: ಚೀನಾ ಮತ್ತು ಭಾರತದ ನಡುವೆ ಉಂಟಾಗಿರುವ ಗಡಿ ಬಿಕ್ಕಟ್ಟು ಮಾತುಕತೆಯ ಮೂಲಕ ಬಗೆಹರಿಯುವಂಥದ್ದಾಗಿದೆ. ಎರಡೂ ರಾಷ್ಟ್ರಗಳು ಯಾವ ಕಾರಣಕ್ಕೂ ಪರಸ್ಪರ ಬೆದರಿಕೆ ಒಡ್ಡುವುದಿಲ್ಲ ಎಂದು ಭಾರತದಲ್ಲಿರುವ ಚೀನಾ ರಾಯಭಾರಿ ಸನ್ ವೀಡಾಂಗ್ ಹೇಳಿದ್ದಾರೆ.

    ಪೂರ್ವ ಲಡಾಖ್​ನಲ್ಲಿ ಭಾರತ-ಚೀನಾ ಗಡಿ ವಿವಾದ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಂದು ಮಾತನಾಡಿದ ಅವರು, ಎರಡೂ ದೇಶಗಳ ಮಧ್ಯೆ ಈಗ ಉಂಟಾಗಿರುವ ಭಿನ್ನಾಭಿಪ್ರಾಯಗಳು ಯಾವ ಕಾರಣಕ್ಕೂ ಸಂಬಂಧವನ್ನು ಹಾಳುಮಾಡಬಾರದು. ಆದಷ್ಟು ಬೇಗ ಇದನ್ನು ಮಾತುಕತೆಯ ಮೂಲಕ ಪರಿಹರಿಸಿಕೊಳ್ಳಬೇಕು ಎಂದಿದ್ದಾರೆ. ಅಷ್ಟೇ ಅಲ್ಲ, ಡ್ರ್ಯಾಗನ್​ ಮತ್ತು ಆನೆ ಒಟ್ಟಾಗಿ ನೃತ್ಯವನ್ನೂ ಮಾಡಬಹುದು ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಭಾರತ-ಚೀನಾ ಗಡಿ ವಿವಾದ; ಮಧ್ಯಸ್ಥಿಕೆ ವಹಿಸಲು ಸಿದ್ಧವೆಂದ ಯುಎಸ್​ ಅಧ್ಯಕ್ಷ ಟ್ರಂಪ್​

    ಸದ್ಯ ಕೊವಿಡ್​-19 ತಾಂಡವ ಆಡುತ್ತಿದೆ. ಈ ಕಾಯಿಲೆ ವಿರುದ್ಧ ಭಾರತ-ಚೀನಾ ದೇಶಗಳು ಒಟ್ಟಾಗಿ ಹೋರಾಡುತ್ತಿವೆ. ನಮ್ಮ ಎರಡೂ ದೇಶದ ಸೈನಿಕರು, ಆಡಳಿತಗಳು ಅರ್ಥ ಮಾಡಿಕೊಳ್ಳಬೇಕು. ಚೀನಾ ದೇಶದವರಿಗೆ ಭಾರತದಲ್ಲಿ ಅವಕಾಶ ಇದೆ. ಹಾಗೇ ಭಾರತಕ್ಕೆ ಚೀನಾದಲ್ಲಿ ಹಲವು ಅವಕಾಶಗಳಿವೆ. ಹಾಗಾಗಿ ಯಾವ ಕಾರಣಕ್ಕೂ ಪರಸ್ಪರ ಹೊಡೆದಾಟ, ಬಿಕ್ಕಟ್ಟು ಸರಿಯಲ್ಲ ಎಂದು ಸನ್ ವೀಡಾಂಗ್ ಅಭಿಪ್ರಾಯಪಟ್ಟಿದ್ದಾರೆ.

    ಚೀನಾ ರಾಯಭಾರಿ ಹೇಳಿಕೆಗೂ ಮೊದಲು ಮಾತನಾಡಿದ್ದ ಆ ದೇಶದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಝಾವೋ ಲಿಜಿಯಾನ್​, ಪೂರ್ವ ಲಡಾಖ್​ ಗಡಿ ಭಾಗದಲ್ಲಿ ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಪರಸ್ಪರ ಮಾತುಕತೆ ಮತ್ತು ಸಮಾಲೋಚನೆ ಮೂಲಕ ವಿವಾದವನ್ನು ಬಗೆಹರಿಸಿಕೊಳ್ಳಲು ಎರಡೂ ದೇಶಗಳು ಸೂಕ್ತವಾದ ಕಾರ್ಯವಿಧಾನ ಮತ್ತು ಸಂವಹನಾ ಮಾರ್ಗಗಳನ್ನು ಹೊಂದಿವೆ ಎಂದು ತಿಳಿಸಿದ್ದರು.

    ಇದನ್ನೂ ಓದಿ: ರಾಜ್ಯದಲ್ಲಿ ಕೊವಿಡ್​-19ರಿಂದ ಮೃತಪಟ್ಟವರ ಸಂಖ್ಯೆ 47ಕ್ಕೆ ಏರಿಕೆ; 2481 ಸೋಂಕಿತರು

    ಗಡಿಗೆ ಸಂಬಂಧಪಟ್ಟ ವಿಚಾರದಲ್ಲಿ ಚೀನಾ ಯಾವಾಗಲೂ ಸ್ಪಷ್ಟ ಹಾಗೂ ಸಮಂಜಸವಾದ ನಿಲುವನ್ನು ಹೊಂದಿದೆ ಎಂದೂ ಅವರು ಹೇಳಿದ್ದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts