More

    ಇಂಥ ಸನ್ನಿವೇಶಗಳು ಗೆಳೆಯರನ್ನು ಇನ್ನಷ್ಟು ಹತ್ತಿರವಾಗಿಸುತ್ತವೆ ಪ್ರೆಸಿಡೆಂಟ್ ಡೊನಾಲ್ಡ್ ಟ್ರಂಪ್​- ಕೃತಜ್ಞತೆ ಸೂಚಿಸಿದ ಪ್ರಧಾನಿ ನರೇಂದ್ರ ಮೋದಿ

    ನವದೆಹಲಿ: ಕರೊನಾ ಸೋಂಕು ಹರಡದಂತೆ ತಡೆಯುವ ನಿಟ್ಟಿನಲ್ಲಿ ಎಲ್ಲ ದೇಶಗಳೂ ಸಕ್ರಿಯವಾಗಿದ್ದು, ಔಷಧವಾಗಿ ಹೈಡ್ರೋಕ್ಸಿಕ್ಲೋರೋಕ್ವಿನ್ ಬಳಕೆಯಾಗುತ್ತಿದ್ದಂತೆ ಅಮೆರಿಕವೂ ಭಾರತದಿಂದ ಅದನ್ನು ಬಯಸಿತ್ತು. ನಮ್ಮ ದೇಶವೇ ಈ ಔಷಧದ ಅತಿದೊಡ್ಡ ಉತ್ಪಾದಕ ರಾಷ್ಟ್ರ. ಸಹಜವಾಗಿಯೇ ಭಾರತವು ಅಮೆರಿಕ ಬಯಸಿದಷ್ಟು ಔಷಧವನ್ನು ರವಾನಿಸಿದೆ. ಇದರಿಂದ ಖುಷಿಯಾದ ಅಲ್ಲಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಧನ್ಯವಾದಗಳನ್ನು ಸಮರ್ಪಿಸಿದ್ದಲ್ಲದೆ, ಪ್ರಧಾನಿ ಮೋದಿ ಅವರನ್ನು ಹೊಗಳಿದ್ದರು.

    ಚೀನಾ ಮೂಲದ ಕರೊನಾಕ್ಕೆ ‘ಸಂಜೀವಿನಿ’ ಆಯ್ತೇ ಭಾರತದ ಹೈಡ್ರೋಕ್ಸಿಕ್ಲೋರೋಕ್ವಿನ್​ ?!

    ಗುರುವಾರ ಪ್ರಧಾನಿ ನರೇಂದ್ರ ಮೋದಿ ಇದಕ್ಕೆ ಪ್ರತಿಕ್ರಿಯೆ ನೀಡಿದ್ದು, ಅವರ ಅಭಿಪ್ರಾಯವನ್ನು ಸ್ವಾಗತಿಸಿದ್ದಾರೆ. ಅಲ್ಲದೆ, ಇಂತಹ ಸಂಕಷ್ಟಮಯ ಸನ್ನಿವೇಶದಲ್ಲಿಯೇ ಅಲ್ಲವೇ ಗೆಳೆಯರು ಇನ್ನಷ್ಟು ಹತ್ತಿರವಾಗುವುದು ಎಂದು ಹೇಳುತ್ತ, ಮಾನವೀಯ ನೆಲೆಯಲ್ಲಿ ನಾವು ಈಗ ಕೆಲಸ ಮಾಡಬೇಕು. COVID19 ವಿರುದ್ಧ ನಾವು ಒಟ್ಟಾಗಿ ಹೋರಾಡಿ ಗೆಲ್ಲಬೇಕು ಎಂಬ ಸಂದೇಶವನ್ನು ಟ್ವೀಟ್ ಮೂಲಕ ಸಾರಿದ್ದಾರೆ.

    ಇದರೊಂದಿಗೆ ಭಾರತ ವಿಶ್ವದ ಮುಂಚೂಣಿ ರಾಷ್ಟ್ರಗಳ ಪಾಲಿಗೆ ಆಪದ್ಬಾಂಧವನ ರೂಪದಲ್ಲಿ ಕಾಣಿಸಿಕೊಂಡಿದೆ. ಈ ಹೈಡ್ರೋಕ್ಸಿಕ್ಲೋರೋಕ್ವಿನ್ ವಿಚಾರದಲ್ಲಿ ಅಮೆರಿಕ ಆರಂಭದಲ್ಲಿ ಕೊಂಚ ತಪ್ಪು ನಿಲುವು ವ್ಯಕ್ತಪಡಿಸಿತ್ತಾದರೂ, ಕೂಡಲೇ ನಿವಾರಿಸಿಕೊಂಡಿದೆ. (ಏಜೆನ್ಸೀಸ್)

    ಅಮೆರಿಕಕ್ಕೆ ಹೈಡ್ರೋಕ್ಸಿಕ್ಲೋರೋಕ್ವಿನ್ ಮಾತ್ರೆ ಪೂರೈಕೆ: ಮೋದಿಯನ್ನು ಹಾಡಿ ಹೊಗಳಿ ಕೊಂಡಾಡಿದ ಟ್ರಂಪ್‌!

    ಸಾವನ್ನು ಎದುರುನೋಡುತ್ತಿದ್ದ ಆ ಕ್ಷಣ- ಕರೋನಾ ಸೋಂಕಿನಿಂದ ಬಚಾವ್​ ಆದ ಮಹಿಳೆಯೊಬ್ಬರ ಅನುಭವ ಕಥನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts