More

    ಪುಟ್ಟಣ್ಣರಿಂದ ಜೀವನದ ಪಾಠ ಕಲಿತೆವು: ಗುರುವನ್ನು ನೆನಪಿಸಿಕೊಂಡ ಹಿರಿಯ ನಟ ಶ್ರೀನಾಥ್

    ಇಂದು ಕನ್ನಡ ಚಿತ್ರರಂಗದ ಜನಪ್ರಿಯ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಪುಣ್ಯತಿಥಿ. ಸರಿಯಾಗಿ 35 ವರ್ಷಗಳ ಹಿಂದೆ ಪುಟ್ಟಣ್ಣನವರು, ಇದೇ ದಿನದಂದು ತಮ್ಮ ಕುಟುಂಬದವರು ಮತ್ತು ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಅಗಲಿದರು. ಪುಟ್ಟಣ್ಣನವರು ನಿಧನರಾಗಿ ಇಷ್ಟು ವರ್ಷಗಳಾದರೂ, ಅವರ ಹೆಸರು ಕನ್ನಡಿಗರ ಮನಸ್ಸಿನಲ್ಲಿ ಹಸಿರಾಗಿದೆ ಎಂದರೆ ಅದಕ್ಕೆ ಕಾರಣ ಅವರ ಚಿತ್ರಗಳು ಮತ್ತು ಪಾತ್ರಗಳು. ಇಷ್ಟಕ್ಕೂ ಪುಟ್ಟಣ್ಣನವರು ಕಲಾವಿದರಿಂದ ಹೇಗೆ ಅಭಿನಯ ತೆಗೆಸುತ್ತಿದ್ದರು, ಅವರಿಗೆ ಹೇಗೆ ಹೇಳಿಕೊಡುತ್ತಿದ್ದರು, ಅವರ ಕಾರ್ಯವೈಖರಿ ಹೇಗಿತ್ತು ಎಂಬ ಪ್ರಶ್ನೆ ಬರುವುದು ಸಹಜ. ಈ ಕುರಿತು ಹಿರಿಯ ನಟ ಡಾ. ಶ್ರೀನಾಥ್ ಮಾತನಾಡಿದ್ದಾರೆ. ಪುಟ್ಟಣ್ಣ ನಿರ್ದೇಶನದ ‘ಶುಭ ಮಂಗಳ’, ‘ಧರ್ಮಸೆರೆ’, ‘ಮಾನಸ ಸರೋವರ’ ಮತ್ತು ‘ಧರಣಿ ಮಂದಲ ಮಧ್ಯದೊಳಗೆ’ ಚಿತ್ರಗಳಲ್ಲಿ ನಟಿಸಿ, ತಮ್ಮ ಅಭಿನಯದಿಂದ ಎಲ್ಲರ ಮೆಚ್ಚುಗೆ ಪಡೆದ ಶ್ರೀನಾಥ್ ಅವರು, ತಮ್ಮ ಗುರುಗಳು ಮತ್ತು ಅವರ ಕಾರ್ಯವೈಖರಿಯನ್ನು ‘ವಿಜಯವಾಣಿ’ ಜತೆಗೆ ನೆನಪಿಸಿಕೊಂಡಿದ್ದಾರೆ.

    ನಿಜ ಹೇಳಬೇಕೆಂದರೆ, ನಾವು ಅವರಿಂದ ಅಭಿನಯ ಎನ್ನುವುದಕ್ಕಿಂತ ಜೀವನದ ಪಾಠ ಕಲಿತೆವು. ಒಬ್ಬ ಮನುಷ್ಯ ಹೇಗಿರಬೇಕು, ಜೀವನವನ್ನು ಹೇಗೆ ಅವಲೋಕಿಸಬೇಕು ಮತ್ತು ಅರಿತುಕೊಂಡಿದ್ದನ್ನು ಹೇಗೆ ರೂಢಿಸಿಕೊಳ್ಳಬೇಕು ಎಂದು ನಾವು ಕಲಿತಿದ್ದೇ ಅವರಿಂದ. ಪುಟ್ಟಣ್ಣ ಯಾವಾಗಲೂ ಹೇಳೋರು. ‘ಅಭಿನಯವನ್ನ ಎಲ್ಲರೂ ಮಾಡ್ತಾರೆ. ನೀನು ವಿಶಿಷ್ಟವಾಗಿ ನಿಲ್ಲಬೇಕೆಂದರೆ, ಸದಾ ನಿನ್ನ ಕಣ್ಣು ಮತ್ತು ಕಿವಿಗಳನ್ನು ತೆರೆದಿಟ್ಟುಕೋ’ ಎನ್ನುತ್ತಿದ್ದರು. ಸುತ್ತಮುತ್ತಲಿನವರನ್ನು ಯಾವಾಗಲೂ ಗಮನಿಸು ಎಂದು ಸಲಹೆ ನೀಡುತ್ತಿದ್ದರು. ಗಮನಿಸುತ್ತಿದ್ದರೆ, ಹಲವರ ಎಕ್ಸ್​ಪ್ರೆಶನ್ ಗೊತ್ತಾಗುತ್ತದೆ. ಮಾತು ಕೇಳಿದಾಗ, ಅದು ಮನಸ್ಸಿನಲ್ಲಿ ರಿಜಿಸ್ಟರ್ ಆಗಿರುತ್ತದೆ. ಅದು ಒಬ್ಬ ಕಲಾವಿದನಿಗೆ ಯಾವಾಗಾದರೂ ಸಹಾಯಕ್ಕೆ ಬಂದೇ ಬರುತ್ತದೆ ಮತ್ತು ಅದನ್ನ ಅಳವಡಿಸಿಕೊಂಡರೆ ಪಾತ್ರ ಸಹ ವಿಭಿನ್ನವಾಗಿ ಮೂಡಿಬರುತ್ತದೆ ಎಂಬುದು ಅವರ ಅಭಿಪ್ರಾಯವಾಗಿತ್ತು.

    ಇದನ್ನೂ ಓದಿ: ಬಿಪಿಎಲ್ ಕಾರ್ಡುದಾರರ ಗಮನಕ್ಕೆ: ನಕಲಿ ಮತ್ತು ಅನರ್ಹರ ವಿರುದ್ಧ ಕ್ರಮ ತೆಗೆದುಕೊಳ್ತೇವೆ ಎಂದು ಎಚ್ಚರಿಕೆ ನೀಡಿದ ಸಿಎಂ

    ಅವರ ನಿರ್ದೇಶನದಲ್ಲಿ ನಾನು ನಟಿಸಿದ ಸಿನಿಮಾಗಳನ್ನು ಈಗ ನೋಡಿದರೆ, ಇನ್ನೂ ಚೆನ್ನಾಗಿ ನಟಿಸಬಹುದಿತ್ತು ಎಂದು ಅನಿಸಿದ್ದಿದೆ. ಅವರು ಹೇಳಿಕೊಟ್ಟಿದ್ದನ್ನು ನಾನು 100 ಪರ್ಸೆಂಟ್ ಮಾಡಿದ್ದರೆ, ನಾನು ಇವತ್ತು ಎಲ್ಲೋ ಇರುತ್ತಿದ್ದೆ. ಅವರು ಅಷ್ಟು ಚೆನ್ನಾಗಿ ಹೇಳಿಕೊಟ್ಟರೂ, ನಾನು ಮಾಡಿದ್ದು 50 ಪರ್ಸೆಂಟ್ ಮಾತ್ರ. ಆದರೂ ಜನ ನನ್ನ ಅಭಿನಯದ ಬಗ್ಗೆ ಒಳ್ಳೆಯ ಮಾತುಗಳನ್ನಾಡುತ್ತಾರೆ ಎಂದರೆ ಅದಕ್ಕೆ ಪುಟ್ಟಣ್ಣನವರು ಕಾರಣ. ಅವರು ಹೇಳಿದ ಮಾತುಗಳು ಬರೀ ಸಿನಿಮಾಗೆ ಮಾತ್ರವಲ್ಲ, ಜೀವನದಲ್ಲೂ ಅಳವಡಿಸಿಕೊಳ್ಳುವುದು ಸಾಕಷ್ಟಿದೆ. ಅವರ ಒಂದೊಂದು ಮಾತು ಬಹಳ ಅರ್ಥಗರ್ಭಿತವಾಗಿತ್ತು. ನಾವೆಲ್ಲಾ ಅವರನ್ನು ಬಹಳ ಗೌರವದಿಂದ ನೋಡುತ್ತಿದ್ದೆವು. ‘ಗೌರವಕ್ಕಿಂತ ಪ್ರೀತಿ ಮುಖ್ಯ. ಪ್ರೀತಿ ಇದ್ದಾಗ ಗೌರವ ಇನ್ನೂ ಹೆಚ್ಚಾಗುತ್ತದೆ’ ಎನ್ನುತ್ತಿದ್ದರು.

    ಇದನ್ನೂ ಓದಿ: ಗಂಡ-ಹೆಂಡ್ತಿ ಜಗಳ ವಿಮಾನದಲ್ಲಿ ಬಾಂಬ್​ ಇಡುವ ತನಕ…

    ಪುಟ್ಟಣ್ಣ ಅವರಿಂದ ಇನ್ನೂ ಸಾಕಷ್ಟು ಕಲಿಯುವ ಆಸೆ ಇತ್ತು. ಅವರೂ ನಿರಂತರವಾಗಿ ಏನಾದರೊಂದು ಕಲಿಯುತ್ತಿರುವುದಾಗಿ ಹೇಳುತ್ತಿದ್ದರು. ಅದನ್ನೇ ನಮಗೂ ಹೇಳಿಕೊಡುತ್ತಿದ್ದರು. ಅವರ ಗರಡಿಯಲ್ಲಿ ಪಳಗಿದೆ. ವಿದ್ಯಾರ್ಥಿಯಾಗಿ ಕಲಿತೆ. ಸೆಟ್ ಒಳಗೆ ಅವರು ನಿರ್ದೇಶಕರಾದರೆ, ನಾನೊಬ್ಬ ನಟ. ಅದೇ ಹೊರಗೆ, ಅವರು ಪುಟ್ಟಣ್ಣ. ನಾನು ಶ್ರೀನಾಥ್. ಈ ವ್ಯತ್ಯಾಸ ಅರ್ಥ ಮಾಡಿಕೊಂಡಿದ್ದರಿಂದ ಅವರ ಜತೆಗೆ ಕೆಲವು ಚಿತ್ರಗಳಲ್ಲಿ ಕೆಲಸ ಮಾಡುವುದಕ್ಕೆ ಸಾಧ್ಯವಾಯಿತು.

    ಗ್ಲೋಬಲ್ ವ್ಯಾಕ್ಸಿನ್ ಅಲಯನ್ಸ್ “ಗವಿ” ಖಾತೆಗೆ 15 ದಶಲಕ್ಷ ಡಾಲರ್ : ಪ್ರಧಾನಿ ಮೋದಿ ವಾಗ್ದಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts