ರಿಷಿ ಕಪೂರ್ ಜತೆ ನಟಿಸಿದ್ದರು ಅಂಬರೀಶ್ … ಯಾವ ಚಿತ್ರ? ಯಾವಾಗ? ಏನು ಕಥೆ?

ಇಂದು ನಿಧನರಾದ ಬಾಲಿವುಡ್‌ನ ಖ್ಯಾತ ನಟ ರಿಷಿ ಕಪೂರ್ ಅವರಿಗೆ ಕನ್ನಡ ಅಥವಾ ಕರ್ನಾಟಕದ ನಂಟು ಇತ್ತೀಚಿನ ವರ್ಷಗಳಲ್ಲಿ ಅಷ್ಟೇನೂ ಇರಲಿಲ್ಲ. ಆದರೆ, ಬಹಳ ವರ್ಷಗಳ ಹಿಂದೆ ಅವರು ‘ನಾಗರಹಾವು’ ಚಿತ್ರದ ಹಿಂದಿ ರೀಮೇಕ್ ಆದ ‘ಜಹ್ರೀಲಾ ಇನ್ಸಾನ್’ ಚಿತ್ರದಲ್ಲಿ ನಟಿಸಿದ್ದರು. ಆ ಕಾರಣಕ್ಕೆ ಚಿತ್ರದುರ್ಗಕ್ಕೆ ಶೂಟಿಂಗ್‌ಗೆಂದು ಬಂದಿದ್ದರು. ಅಷ್ಟೇ ಅಲ್ಲ, ಆ ಚಿತ್ರವನ್ನು ಪುಟ್ಟಣ್ಣ ಕಣಗಾಲ್ ನಿರ್ದೇಶನ ಮಾಡಿದರೆ, ಅಂಬರೀಶ್ ಸಹ ನಟಿಸಿದ್ದರು.

ಹೌದು, ‘ಬಾಬ್ಬಿ’ ಚಿತ್ರದ ಸೂಪರ್ ಸಕ್ಸಸ್‌ನ ನಂತರ ಒಂದು ಒಳ್ಳೆಯ ಕಥೆಗಾಗಿ ಹುಡುಕಾಟದಲ್ಲಿದ್ದ ರಿಷಿ ಕಪೂರ್‌ಗೆ ಸಿಕ್ಕಿದ್ದೇ ಕನ್ನಡದ ‘ನಾಗರಹಾವು’. ಅಷ್ಟರಲ್ಲಿ, ‘ನಾಗರಹಾವು’ ಕನ್ನಡದಲ್ಲಿ ಸೂಪರ್ ಹಿಟ್ ಆಗಿತ್ತು. ವಿಷ್ಣುವರ್ಧನ್ ಅವರು ಮಾಡಿದ್ದ ಆ್ಯಂಗ್ರಿ ಯಂಗ್ ಪಾತ್ರ ಯಶಸ್ವಿಯಾಗಿತ್ತು. ಈ ಹಿನ್ನೆಲೆಯಲ್ಲಿ ಆ ಚಿತ್ರವನ್ನು ಹಿಂದಿಗೆ ರೀಮೇಕ್ ಮಾಡಲಾಗಿದ್ದಷ್ಟೇ ಅಲ್ಲ, ಕನ್ನಡದಲ್ಲಿ ವಿಷ್ಣುವರ್ಧನ್ ಅವರು ನಿರ್ವಹಿಸಿದ್ದ ರಾಮಾಚಾರಿ ಪಾತ್ರವನ್ನು ಹಿಂದಿಯಲ್ಲಿ ರಿಷಿ ಕಪೂರ್ ಮಾಡಿದ್ದರು.

ಇನ್ನು ಕನ್ನಡ ಚಿತ್ರವನ್ನು ನಿರ್ದೇಶನ ಮಾಡಿದ್ದ ಪುಟ್ಟಣ್ಣ ಕಣಗಾಲ್ ಅವರೇ ಹಿಂದಿಯಲ್ಲೂ ನಿರ್ದೇಶನ ಮಾಡಿದರೆ, ಕನ್ನಡದಲ್ಲಿ ಜಲೀಲ ಪಾತ್ರ ಮಾಡಿ ಮನೆಮಾತಾಗಿದ್ದ ಅಂಬರೀಶ್, ‘ಜಹ್ರೀಲಾ ಇನ್ಸಾನ್’ ಚಿತ್ರದಲ್ಲೂ ಜಲೀಲನ ಪಾತ್ರವನ್ನು ಮುಂದುವರೆಸಿದ್ದರು.

ರಿಷಿ ಕಪೂರ್, ಮೌಷಮಿ ಚಟರ್ಜಿ, ನೀತು ಸಿಂಗ್, ಪ್ರಾಣ್ ಮುಂತಾದವರು ಅಭಿನಯಿಸಿದ ಈ ಚಿತ್ರ ಅಷ್ಟೇನೂ ದೊಡ್ಡ ಹಿಟ್ ಆಗಲಿಲ್ಲ. ಆದರೆ, ‘ಬಾಬ್ಬಿ’ಯಂತ ರೊಮ್ಯಾಂಟಿಕ್ ಚಿತ್ರದಲ್ಲಿ ಕಾಣಿಸಿಕೊಂಡು ಯಶಸ್ವಿಯಾಗಿದ್ದ ರಿಷಿ ಕಪೂರ್, ಈ ಚಿತ್ರದಲ್ಲಿ ಆ್ಯಂಗ್ರಿ ಯಂಗ್ ಮ್ಯಾನ್ ಆಗಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದರು. ಈ ಚಿತ್ರಕ್ಕೆ ರಾಜೇಶ್ ರೋಶನ್ ಸಂಗೀತ ನಿರ್ದೇಶನದಲ್ಲಿ, ಕಿಶೋರ್ ಕುಮಾರ್ ಅವರ ಗಾಯನದಲ್ಲಿ ಮೂಡಿಬಂದಿರುವ ‘ಓ ಹನ್ಸಿನಿ …’ ಎಂಬ ಹಾಡು ಇಂದಿಗೂ ಜನಪ್ರಿಯ.

ಚಾಕೊಲೇಟ್‌ಗಾಗಿ ನಟಿಸಿದ್ದರಂತೆ ರಿಷಿ ಕಪೂರ್

Share This Article

ನೆಲದ ಮೇಲೆ ಕುಳಿತು ಊಟ ಮಾಡುವುದರಿಂದ ಇಷ್ಟೆಲ್ಲ ಪ್ರಯೋಜನಗಳಿವೆಯಾ? ಇಲ್ಲಿದೆ ಉಪಯುಕ್ತ ಮಾಹಿತಿ….

ಇಂದು ಬಹುತೇಕರು ಡೈನಿಂಗ್ ಟೇಬಲ್ ಮೇಲೆ ಕುಳಿತು ಊಟ ಮಾಡುತ್ತಿದ್ದಾರೆ. ಆದರೆ, ಮೊದ ಮೊದಲು ಹೆಚ್ಚಿನ…

ನೀವು ಎಷ್ಟು ಆರೋಗ್ಯವಂತರೆಂದು ತಿಳಿಯಲು ನಿಮ್ಮ ನಾಲಿಗೆ ಬಣ್ಣ ಚೆಕ್​ ಮಾಡಿ! ಈ ಬಣ್ಣದಲ್ಲಿದ್ರೆ ತುಂಬಾ ಡೇಂಜರ್​!

ಪ್ರತಿಯೊಬ್ಬರೂ ಆರೋಗ್ಯವಾಗಿರಲು ಬಯಸುತ್ತಾರೆ. ಏಕೆಂದರೆ, ಆರೋಗ್ಯವೇ ಭಾಗ್ಯ. ಎಲ್ಲ ಇದ್ದು ಆರೋಗ್ಯವೇ ಇಲ್ಲದಿದ್ದರೆ ಏನು ಪ್ರಯೋಜನಾ?…

ನಿಮ್ಮ ಜೀವಕ್ಕೆ ಅಪಾಯವನ್ನುಂಟುಮಾಡುವ ಈ 5 ಜನರ ಬಳಿ ನೀವು ಎಂದಿಗೂ ಹೋಗಬೇಡಿ

ಭಾರತದ ಉತ್ತಮ ವಿದ್ವಾಂಸರಲ್ಲಿ ಚಾಣಕ್ಯರು ಒಬ್ಬರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಚಾಣಕ್ಯ ತಿಳಿಯದ ವಿಷಯವು…

ಈ ಸುದ್ದಿಗಳನ್ನೂ ಮಿಸ್​ ಮಾಡ್ಬೇಡಿ