More

    ಪಾಲಿಟಿಕ್ಸ್​ನಿಂದ ಮಾರುದೂರ, ಸರ್ಕಾರದ ನಿರ್ದೇಶನಗಳನ್ನು ಫಾಲೋ ಮಾಡ್ತೇವೆ ಎಂದ ಜನರಲ್ ಬಿಪಿನ್ ರಾವತ್​

    ನವದೆಹಲಿ: ದೇಶದ ಮೊದಲ ಚೀಫ್ ಆಫ್ ಡಿಫೆನ್ಸ್ ಸ್ಟಾಫ್​(ಸಿಡಿಎಸ್​) ಆಗಿ ಜನರಲ್ ಬಿಪಿನ್ ರಾವತ್ ಬುಧವಾರ ಅಧಿಕಾರ ಸ್ವೀಕರಿಸಿದ್ದಾರೆ.

    ನಂತರ ಮಾತನಾಡಿದ ಅವರು, ಭೂಸೇನೆ, ನೌಕಾಪಡೆ, ವಾಯುಪಡೆಗಳು ಒಂದು ಟೀಮ್ ಆಗಿ ಕೆಲಸ ಮಾಡಲಿದ್ದು, ಸಿಡಿಎಸ್ ಅವುಗಳನ್ನು ನಿಯಂತ್ರಿಸುವ ಕೆಲಸ ಮಾಡುತ್ತಾರೆ. ಆದರೆ, ಎಲ್ಲ ಕೆಲಸಗಳೂ ಒಂದು ಟೀಮ್ ಆಗಿ ಮಾಡಲಾಗುತ್ತದೆ. ಮೂರೂ ಸೇನೆಗಳ ಸಮನ್ವಯ ನೋಡಿಕೊಳ್ಳುವ ಹೊಣೆಗಾರಿಕೆ ಸಿಡಿಎಸ್ ಮೇಲಿದೆ. ಆ ಕೆಲಸವನ್ನು ಮಾಡುವೆ ಎಂದು ರಾವತ್ ಸ್ಪಷ್ಟಪಡಿಸಿದ್ದಾರೆ.

    ಸಿಡಿಎಸ್ ಹುದ್ದೆ ರಚನೆ ಹಿಂದೆ ರಾಜಕೀಯ ಅಡಗಿದೆ. ಸೇನೆಯನ್ನೂ ರಾಜಕೀಯಕ್ಕೆ ಬಳಸಲಾಗುತ್ತಿದೆ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ರಾವತ್, ಸಶಸ್ತ್ರ ಪಡೆಗಳು ರಾಜಕೀಯದಿಂದ ದೂರ ಇದ್ದು, ಆಡಳಿತ ನಡೆಸುತ್ತಿರುವ ಸರ್ಕಾರದ ನಿರ್ದೇಶನಾನುಸಾರ ಕೆಲಸ ಮಾಡುತ್ತವೆ ಎಂಬುದನ್ನು ಸ್ಪಷ್ಟಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts