More

    ಪ್ರೇಮ ಕಥೆ: ನಮ್ಮದು ಕಿರು ಲವ್​ ಸ್ಟೋರಿ

    ‘ಒಲವೇ ಜೀವನ ಸಾಕ್ಷಾತ್ಕಾರ’ ಎಂಬುದು ಸಿನಿಮಾಗಷ್ಟೇ ಸೀಮಿತವಲ್ಲ. ಸಿನಿಮೀಯ ರೀತಿಯಲ್ಲಿ ಉಂಟಾಗುವಂಥ ಒಲವನ್ನೂ ಸಾಕ್ಷಾತ್ಕಾರ ಮಾಡಿಕೊಂಡ ಜೋಡಿಗಳೂ ಸಿನಿಮಾರಂಗದಲ್ಲಿ ಹಲವರಿದ್ದಾರೆ. ಆ ಪೈಕಿ ತಾಜಾ ಉದಾಹರಣೆ ಎಂದರೆ ಮಿಲನಾ ನಾಗರಾಜ್-ಡಾರ್ಲಿಂಗ್ ಕೃಷ್ಣ. ಇತ್ತೀಚೆಗಷ್ಟೇ ತೆರೆ ಕಂಡ ‘ಲವ್ ಮಾಕ್​ಟೇಲ್’ ಚಿತ್ರದ ಮೂಲಕ ಪ್ರೇಮಿಗಳ ಗಮನ ಸೆಳೆದಿದ್ದ ಈ ಜೋಡಿ, ನಿಜಜೀವನದಲ್ಲೂ ಲವ್ ಮಾಕ್​ಟೇಲ್ ಆಗಲು ಮುಂದಾಗಿದ್ದು, ಸದ್ಯದಲ್ಲೇ ಮದುವೆ ಆಗುವುದಾಗಿಯೂ ಘೋಷಿಸಿಕೊಂಡಿದ್ದಾರೆ. ಇನ್ನೊಂದೆಡೆ ನಟಿ ಹಿತಾ ಚಂದ್ರಶೇಖರ್ ಹಾಗೂ ನಟ ಕಿರಣ್ ಶ್ರೀನಿವಾಸ್ ಪ್ರೀತಿಸಿ ಮದುವೆಯಾಗಿದ್ದು, ಇಬ್ಬರೂ ಜೊತೆಯಾಗಿ ಹಿತವಾಗಿ ಇದ್ದಾರೆ. ಪ್ರೇಮಿಗಳ ದಿನದ ಹಿನ್ನೆಲೆಯಲ್ಲಿ ಈ ಎರಡು ಜೊತೆ ಪ್ರಣಯಪ್ರಕ್ಷಿಗಳು ಹಂಚಿಕೊಂಡಿರುವ ಪ್ರೀತಿಯ ಮಾತುಗಳು ಇಲ್ಲಿವೆ.

    ‘ಕಿರಣ್ ಶ್ರೀನಿವಾಸ್ ಪರಿಚಯವಾಗಿದ್ದು ‘ಒಂಥರ ಬಣ್ಣಗಳು’ ಸಿನಿಮಾದ ಸಮಯದಲ್ಲಿ. ಅದಕ್ಕಿಂತ ಮುಂಚೆ ನನಗೆ ಅವರ ಬಗ್ಗೆ ಗೊತ್ತಿತ್ತು ಅಷ್ಟೇ. ಶೂಟಿಂಗ್​ನಲ್ಲಿ ನಿತ್ಯ ನಮ್ಮಿಬ್ಬರ ನಡುವೆ ಹೆಚ್ಚು ಆಪ್ತತೆ ಬೆಳೆದು, ಪರಿಚಯ ಸ್ನೇಹವಾಯಿತು. ಬಳಿಕ ಅದು ಪ್ರೀತಿಗೆ ತಿರುಗಿತು. ಹಾಗಂತ ನಾವೆಂದೂ ಲವ್ ಮಾಡಿ, ಡೇಟಿಂಗ್​ನಲ್ಲಿ ಮುಳುಗಲಿಲ್ಲ. ಒಳ್ಳೆಯ ಸ್ನೇಹಿತರಾಗಿದ್ದೆವು. ಹೀಗಿರುವಾಗಲೇ ಒಮ್ಮೆ ಕಿರಣ್ ನೇರವಾಗಿ ಬಂದು, ‘ನನ್ನನ್ನು ಮದುವೆ ಆಗುತ್ತೀಯಾ?’ ಎಂದು ಕೇಳಿದರು. ಆ ವಿಚಾರವನ್ನು ನಾನು ಮನೆಯಲ್ಲಿ ಪ್ರಸ್ತಾಪಿಸಿದೆ. ಮನೆಯಲ್ಲೂ ಅಪ್ಪ-ಅಮ್ಮನಿಂದ ಗ್ರೀನ್ ಸಿಗ್ನಲ್ ಸಿಕ್ಕಿತು. ಮದುವೆಯೂ ಆಯಿತು. ಹಾಗಾಗಿ ನಮ್ಮದು ಶಾರ್ಟ್ ಲವ್​ಸ್ಟೋರಿ. ‘ಒಂಥರ ಬಣ್ಣಗಳು’ ಚಿತ್ರೀಕರಣದ ಬಿಡುವಿನಲ್ಲಿ ಒಟ್ಟಿಗೆ ಕುಳಿತು ಸಾಕಷ್ಟು ವಿಚಾರಗಳನ್ನು ವಿನಿಮಯ ಮಾಡಿಕೊಂಡಿದ್ದೆವು. ಅಷ್ಟೇ ಅಲ್ಲ ‘ಯಾರಾದರೂ ಹುಡುಗನನ್ನು ಇಷ್ಟಪಟ್ಟಿದ್ದೀಯಾ? ಹಾಗೇನಾದರೂ ಇದ್ದರೆ ಹೇಳು’ ಎಂದು ಅಪ್ಪ ಆಗಾಗ ಕೇಳುತ್ತಿದ್ದರು. ಹೀಗಿರುವಾಗ ಕಿರಣ್ ಪ್ರೇಮನಿವೇದನೆ ಮಾಡಿಕೊಂಡಾಗ ಇಲ್ಲ ಎನ್ನಲಾಗಲಿಲ್ಲ. ಈಗ ಇಬ್ಬರೂ ಅಷ್ಟೇ ಅನ್ಯೋನ್ಯವಾಗಿದ್ದೇವೆ.

    | ಹಿತಾ ಚಂದ್ರಶೇಖರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts