More

    ‘ನಾವು ಮಾರ್ಗ ಮಧ್ಯದಲ್ಲಿ ಇದ್ದೇವೆ..ಕೆಲವೇ ಹೊತ್ತಲ್ಲಿ ಭಾರತವನ್ನು ತಲುಪುತ್ತೇವೆ’; ಹಿಂದಿಯಲ್ಲೇ ಟ್ವೀಟ್ ಮಾಡಿ ಅಪ್ಡೇಟ್​ ಕೊಟ್ಟ ಟ್ರಂಪ್​

    ನವದೆಹಲಿ: ಪ್ರಥಮ ಬಾರಿಗೆ ಭಾರತಕ್ಕೆ ಭೇಟಿ ನೀಡುತ್ತಿರುವ ಡೊನಾಲ್ಡ್​ ಟ್ರಂಪ್​ಗೆ ಭಾರತದಲ್ಲಿ ತುಸು ವಿಭಿನ್ನವಾಗಿ, ಅದ್ದೂರಿಯಾಗಿ ಸ್ವಾಗತ ಸಿಗುತ್ತಿದೆ.

    ಡೊನಾಲ್ಡ್​ ಟ್ರಂಪ್​ ಬರುವಿಕೆಗಾಗಿ ಭಾರತ ಕಾಯುತ್ತಿರುವಂತೆ, ಅತ್ತ ಟ್ರಂಪ್​ ಕೂಡ ಭಾರತವನ್ನು ತಲುಪಲು ತುಂಬ ಉತ್ಸುಕರಾಗಿದ್ದಂತೆ ತೋರುತ್ತದೆ. ನಿನ್ನೆಯಿಂದಲೂ ಟ್ವೀಟ್ ಮೂಲಕವೇ ಅದನ್ನು ಹೇಳುತ್ತಿದ್ದಾರೆ.

    ಈಗ ಮತ್ತೊಂದು ಟ್ವೀಟ್​ ಮಾಡಿದ್ದಾರೆ. ಅದನ್ನೂ ಹಿಂದಿಯಲ್ಲಿ ಮಾಡಿರುವುದು ವಿಶೇಷ. ನಾವೆಲ್ಲ ಭಾರತದ ಭೇಟಿಗೆ ತುಂಬ ಉತ್ಸುಕರಾಗಿದ್ದೇವೆ. ಮಾರ್ಗ ಮಧ್ಯದಲ್ಲಿ ಇದ್ದೇವೆ. ಕೆಲವೇ ಹೊತ್ತಲ್ಲಿ ಭಾರತಕ್ಕೆ ಬಂದು ತಲುಪುತ್ತೇವೆ ಎಂದು ಟ್ರಂಪ್​ ಟ್ವೀಟ್ ಮಾಡಿ ತಿಳಿಸಿದ್ದಾರೆ.

    ಟ್ರಂಪ್ ಟ್ವೀಟ್ ಮಾಡಿ ಕೆಲವೇ ನಿಮಿಷಗಳಲ್ಲಿ 30 ಸಾವಿರಕ್ಕೂ ಅಧಿಕ ಲೈಕ್ಸ್​ಗಳನ್ನು ಪಡೆದಿದೆ. 8 ಸಾವಿರಕ್ಕೂ ಹೆಚ್ಚು ಬಾರಿ ರೀಟ್ವೀಟ್ ಆಗಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts