More

    ಟಿಪ್ಪು ಜಯಂತಿ ನಾವು ಆಚರಿಸಲ್ಲ, ಏಕಂದ್ರೆ?:

    ಬೆಂಗಳೂರು: ವಿವಾದಿತ ಟಿಪ್ಪು ಜಯಂತಿ ಕೈಬಿಟ್ಟ ರಾಜ್ಯ ಸರ್ಕಾರ ಇದೀಗ ತನ್ನ ನಿಲುವಿಗೆ ಬದ್ಧವಾಗಿರುವ ಅಗತ್ಯ ಮಾಹಿತಿ ಕ್ರೋಡೀಕರಿಸಿ ಅದನ್ನು ನ್ಯಾಯಾಲಯಕ್ಕೆ ಸಲ್ಲಿಸಲು ನಿರ್ಧರಿಸಿದೆ. ಬುಧವಾರ ನಡೆದ ಸಂಪುಟ ಸಭೆಯಲ್ಲಿ ಈ ಬಗ್ಗೆ ಸುದೀರ್ಘ ಚರ್ಚೆ ನಡೆದಿದ್ದು, ತನ್ನ ನಿರ್ಧಾರಕ್ಕೆ ಪೂರಕವಾದ ಅಂಶಗಳ ಕುರಿತಂತೆ ವಿಚಾರ ವಿನಿಮಯ ಮಾಡಿಕೊಂಡು ಒಮ್ಮತಾಭಿಪ್ರಾಯಕ್ಕೆ ಬಂದಿದೆ ಎಂದು ಮೂಲಗಳು ತಿಳಿಸಿವೆ.

    ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದ ಟಿಪ್ಪು ಜಯಂತಿಯನ್ನು ಬಿಜೆಪಿ ಸರ್ಕಾರ ರದ್ದುಗೊಳಿಸಿತ್ತು. ಸರ್ಕಾರದ ನಿರ್ಧಾರ ವಿರುದ್ಧ ಕೆಲವರು ಹೈಕೋರ್ಟ್ ಮೆಟ್ಟಿಲೇರಿದ್ದರು. ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದ ಸರ್ಕಾರ, 2015ಕ್ಕೂ ಮುನ್ನ ರಾಜ್ಯದಲ್ಲಿ ಟಿಪ್ಪು ಜಯಂತಿ ಆಚರಣೆ ಇರಲಿಲ್ಲ. ಆಗ ಇದ್ದ ಸರ್ಕಾರ ರಾಜ್ಯಾದ್ಯಂತ ಆಚರಣೆ ಮಾಡಲು ಆದೇಶ ಹೊರಡಿಸಿತ್ತು. ಜಯಂತಿ ಆಚರಣೆ ರದ್ದು ಮಾಡಿರುವುದು ನಮ್ಮ ನೀತಿ- ನಿರ್ಧಾರದ ವಿಚಾರ ಎಂದು ವಾದಿಸಿತ್ತು. ಆದರೆ, ನೀತಿ -ನಿರ್ಧಾರದ ವಿಚಾರದಲ್ಲಿ ನ್ಯಾಯಾಲಯ ಮಧ್ಯ ಪ್ರವೇಶ ಮಾಡುವುದಿಲ್ಲ. ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯನ್ನು ಪರಾಮರ್ಶೆ ನಡೆಸಲಾಗುವುದು. 4 ವರ್ಷಗಳಲ್ಲಿ ಸರ್ಕಾರ ಏಕೆ ತನ್ನ ನಿರ್ಧಾರ ಬದಲಿಸಿತು ಎಂದು ನ್ಯಾಯಾಲಯ ಕೇಳಿತ್ತು. ಅರ್ಜಿದಾರರ ಪರ ವಕೀಲರು, ಸರ್ಕಾರ ಸಕಾರಣ ನೀಡದೆ ಜಯಂತಿ ರದ್ದುಗೊಳಿಸಿದೆ ಎಂದು ಆರೋಪಿಸಿದ್ದರು.

    ಈ ಪ್ರಕರಣದಲ್ಲಿ ಸರ್ಕಾರ ತನ್ನ ನಿಲುವನ್ನು ನ್ಯಾಯಾಲಯದಲ್ಲಿ ಸಮರ್ಥಿಸಿಕೊಳ್ಳಬೇಕಿದ್ದು, ಹಿನ್ನೆಲೆಯಲ್ಲಿ ಸೂಕ್ತ ಕಾರಣದ ಬಗ್ಗೆ ಸಂಪುಟದಲ್ಲಿ ಚರ್ಚೆ ನಡೆಸಿದೆ. ಕಾನೂನು ಸುವ್ಯವಸ್ಥೆ, ಕೊಡಗಿನಲ್ಲಿ ಟಿಪು್ಪ ಮಾಡಿದ ದಾಳಿಯನ್ನು ದಾಖಲೆಯಾಗಿ ಪರಿಗಣಿಸಲಾಗಿದೆ ಎಂಬ ಅಂಶವನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಲಾಗುತ್ತದೆ ಎನ್ನಲಾಗಿದೆ.

    ಸಚಿವ ಸಂಪುಟದ ಪ್ರಮುಖ ನಿರ್ಣಯಗಳು

    • ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ (ನಿಯಂತ್ರಣ ಮತ್ತು ಅಭಿವೃದ್ಧಿ)ವಿಧೇಯಕಕ್ಕೆ ಅನುಮೋದನೆ
    • ರಾಜ್ಯ ಮೀಸಲು ಪೊಲೀಸ್ (ಕೇಡರ್ ಮತ್ತು ನೇಮಕಾತಿ) ನಿಯಮಾವಳಿಗೆ ಅನುಮೋದನೆ
    • ಅಸಂಘಟಿತ ವಲಯದ ವಾಣಿಜ್ಯ ವಾಹನಗಳ ಚಾಲಕರಿಗೂ ಅಪಘಾತ ವಿಮಾ ಪರಿಹಾರ
    • ಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ ಮಸೂದೆಗೆ ಅನುಮೋದನೆ
    • ಭೂಸ್ವಾಧೀನ ಮತ್ತು ಪುನರ್ವಸತಿ ತಿದ್ದುಪಡಿ ಕಾಯ್ದೆಗೆ ಒಪ್ಪಿಗೆ
    • ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಸೇವೆ (ಕೇಡರ್ ಮತ್ತು ನೇಮಕಾತಿ) ನಿಯಮಾವಳಿ
    • ಚಿತ್ರದುರ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಯ 459 ಗ್ರಾಮಗಳಿಗೆ ಕುಡಿವ ನೀರು ಪೂರೈಕೆ ಯೋಜನೆಗೆ ಸಮ್ಮತಿ
    • ದೇವಿಕಾರಾಣಿ ರೋರಿಚ್ ಎಸ್ಟೇಟ್​ನ ಹೆರಿಟೇಜ್ ಸೈಟ್ ಮತ್ತು ಕಲಾಕೃತಿಗಳ ಸಂರಕ್ಷಣೆ
    • ಕಬ್ಬನ್​ಪಾರ್ಕ್​ನಲ್ಲಿರುವ ಪ್ರೆಸ್​ಕ್ಲಬ್ ಕಟ್ಟಡದ ಗುತ್ತಿಗೆ ಅವಧಿ ಮುಂದುವರಿಕೆ
    • ಮಾಗಡಿ ರಸ್ತೆಯಲ್ಲಿ ಆರೋಗ್ಯ ಭವನ ನಿರ್ವಣಕ್ಕೆ 113 ಕೋಟಿ ರೂ.
    • ಪದವಿಪೂರ್ವ ಮತ್ತು ಪ್ರೌಢಶಾಲಾ ಹಂತದ ವಿದ್ಯಾರ್ಥಿ ನಿಲಯಗಳಲ್ಲಿ ಮೂಲಸೌಕರ್ಯ ಕಲ್ಪಿಸಲು 70.19 ಕೋಟಿ ರೂ.
    • ಅಂಗನವಾಡಿಗಳಿಗೆ 32.95 ಕೋಟಿ ರೂ. ವೆಚ್ಚದಲ್ಲಿ ಶಾಲಾಪೂರ್ವ ಶೈಕ್ಷಣಿಕ ಪರಿಕರ ಕಿಟ್ ಖರೀದಿ
    • ಬೆಂಗಳೂರಿನ ಪಟ್ಟೆಗಾರ ಪಾಳ್ಯದಲ್ಲಿ ಕೈಗೊಳ್ಳಲಾಗಿದ್ದ 11.50 ಕೋಟಿ ರೂ.ವೆಚ್ಚದ ರಸ್ತೆ ವೈಟ್ ಟಾಪಿಂಗ್ ಕಾಮಗಾರಿ ಮಂಜೂರಾತಿ ರದ್ದು
    • ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದಲ್ಲಿ ಹೊಸ ಒಟಿಎಸ್ ನೀತಿ ಜಾರಿ

    ಲವ್​ ಜಿಹಾದ್​?!: ನೋಟ್ಸ್​ ನೆಪದಲ್ಲಿ ಸಹಪಾಠಿಯನ್ನೇ ಕಿಡ್ನಾಪ್​ ಮಾಡಿ ಲೈಂಗಿಕ ಕಿರುಕುಳ ನೀಡಿದ ಮುಸ್ಲಿಂ ಯುವಕ

    ಸರ್ಕಾರದ ಆದೇಶ ಪಾಲಿಸದೆ ಮೊಂಡಾಟ ಮಾಡುವ ಶಾಲೆಗಳ ವಿರುದ್ಧ ಕ್ರಮದ ಎಚ್ಚರಿಕೆ: ಮಕ್ಕಳ ಹಿತಕ್ಕಿಂತ ಶಾಲೆಯ ಪ್ರತಿಷ್ಠೆ ಮುಖ್ಯವೇ?- ಶಿಕ್ಷಣ ಸಚಿವರ ಪ್ರಶ್ನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts