More

    “ನಾವು ಆಮೀರ್​ ಖಾನ್​-ಕಿರಣ್​ ರಾವ್​ರಂತೆ, ಭಾರತ-ಪಾಕ್​ನಂತಲ್ಲ”!

    ಮುಂಬೈ : ಬಿಜೆಪಿ ಮತ್ತು ಶಿವಸೇನೆ ಮತ್ತೆ ಒಂದಾಗಬಹುದೆಂಬ ಊಹೆಗಳು ಹೆಚ್ಚುತ್ತಿರುವಂತೆಯೇ, ಶಿವಸೇನೆ ನಾಯಕ ಸಂಜಯ ರಾವತ್​ ಎರಡೂ ಪಕ್ಷಗಳ ಬಂಧ ಚೆನ್ನಾಗೇ ಇದೆ ಎಂದಿದ್ದಾರೆ. ಬಿಜೆಪಿ ಮತ್ತು ಶಿವ ಸೇನಾ ಬಂಧವು ಆಮೀರ್​ ಖಾನ್​-ಕಿರಣ್​ ರಾವ್​ರಂತೆ, ಭಾರತ-ಪಾಕ್​ನಂತಲ್ಲ ಎಂದಿದ್ದಾರೆ!

    ಇತ್ತೀಚೆಗೆ ಡೈವೋರ್ಸ್ ಪಡೆಯುವ ನಿರ್ಧಾರ ತಿಳಿಸಿದ್ದ ಆಮೀರ್​ ಖಾನ್ ಕಿರಣ್​ ರಾವ್ ದಂಪತಿ, ತಮ್ಮ ಸಂಬಂಧ ಬದಲಾದರೂ, ನಾವು ಒಂದು ಕುಟುಂಬವೇ ಆಗಿರುತ್ತೇವೆ ಎಂದಿದ್ದರು. ಈ ಹಿನ್ನೆಲೆಯಲ್ಲಿ ರಾವತ್​ ಅವರು ಉಪಮೆ ನೀಡಿದ್ದಾರೆ. “ನಾವು (ಶಿವಸೇನೆ, ಬಿಜೆಪಿ) ಭಾರತ-ಪಾಕಿಸ್ತಾನ ಅಲ್ಲ. ಆಮೀರ್​ ಖಾನ್​ ಮತ್ತು ಕಿರಣ್​ ರಾವ್​ರನ್ನು ನೋಡಿ, ಇದು ಅವರ ತರಹ. ನಮ್ಮ ರಾಜಕೀಯ ಮಾರ್ಗಗಳು ಬೇರೆಯಾಗಿವೆ, ಆದರೆ, ನಮ್ಮ ಸ್ನೇಹ ಹಾಗೇ ಉಳಿಯುತ್ತದೆ” ಎಂದು ರಾವತ್​ ಹೇಳಿರುವುದಾಗಿ ಎಎನ್​ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

    ಇದನ್ನೂ ಓದಿ: ಕೆಆರ್​ಎಸ್​ ಬಾಗಿಲಿಗೆ ಸುಮಲತಾರನ್ನು ಅಡ್ಡಡ್ಡ ಮಲಗಿಸ್ಬೇಕು: ಮಾಜಿ ಸಿಎಂ ಆದವರಿಗೆ ಭಾಷೆ ಮೇಲೆ ಹಿಡಿತ ಇಲ್ವಾ?

    ಬಿಜೆಪಿ ನಾಯಕ ಹಾಗೂ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್​ ಅವರು ಈ ಮುನ್ನ ತಮ್ಮ ಪಕ್ಷಗಳು ಶತೃಗಳಲ್ಲ ಎಂದಿದ್ದಕ್ಕೆ ರಾವತ್ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ. ಆದಾಗ್ಯೂ ಮಹಾರಾಷ್ಟ್ರದಲ್ಲಿ ಶಿವಸೇನೆ ಮತ್ತು ಎನ್​ಸಿಪಿ-ಕಾಂಗ್ರೆಸ್​ ಒಕ್ಕೂಟ ಮುರಿದುಬೀಳುತ್ತಿಲ್ಲ ಎಂದಿರುವ ಶಿವಸೇನೆ ಸಂಸದ ರಾವತ್​, ಸರ್ಕಾರ ಪೂರ್ಣ ಅವಧಿಯವರೆಗೆ ನಡೆಯುವುದು ಎಂದಿದ್ದಾರೆ. (ಏಜೆನ್ಸೀಸ್)

    ಜುಲೈ 31 ರೊಳಗೆ ದ್ವಿತೀಯ ಪಿಯುಸಿ ಫಲಿತಾಂಶ; ರಿಪೀಟರ್ಸ್​​ಗೆ ಸಿಹಿ ಸುದ್ದಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts