More

    ನವೆಂಬರ್​ 1ರಿಂದ 10ರವರೆಗೆ ಮಹಿಳೆಯರ ಐಪಿಎಲ್​

    ನವದೆಹಲಿ: ಕಳೆದೆರಡು ವರ್ಷಗಳಂತೆ ಈ ಬಾರಿಯೂ ಐಪಿಎಲ್​ ಜತೆಜತೆಯಲ್ಲೇ ಮಹಿಳೆಯರ ಮಿನಿ ಐಪಿಎಲ್​ ಟೂರ್ನಿಯೂ ನಡೆಯಲಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ ಭಾನುವಾರ ಖಚಿತಪಡಿಸಿದ್ದಾರೆ. ಚಾಲೆಂಜರ್​ ಸಿರೀಸ್​ ಎಂದು ಕರೆಯಲ್ಪಡುವ ಈ ಕಿರು ಟೂರ್ನಿ ಕೂಡ ಯುಎಇಯಲ್ಲೇ ನಡೆಯಲಿದೆ. ಈ ಮೂಲಕ ಮಹಿಳಾ ಕ್ರಿಕೆಟ್​ ಆಟವನ್ನು ತಾನು ಕಡೆಗಣಿಸುತ್ತಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಬಿಸಿಸಿಐ ರವಾನಿಸಿದೆ.

    ಪುರುಷರ ಐಪಿಎಲ್​ ಟೂರ್ನಿ ಸೆಪ್ಟೆಂಬರ್​ 19ರಿಂದ ನವೆಂಬರ್​ 10ರವರೆಗೆ ನಡೆಯಲಿದ್ದು, ಟೂರ್ನಿಯ ಪ್ಲೇ-ಆಫ್​ ಹಂತದ ವೇಳೆ ಮಹಿಳೆಯರ ಮಿನಿ ಐಪಿಎಲ್​ ಕೂಡ ನಡೆಯಲಿದೆ. ‘ಮಹಿಳೆಯರ ಐಪಿಎಲ್​ ಕೂಡ ಯೋಜನೆಯಂತೆಯೇ ನಡೆಯಲಿದೆ ಎಂದು ನಾನು ಖಚಿತಪಡಿಸುತ್ತಿದ್ದೇನೆ. ರಾಷ್ಟ್ರೀಯ ಮಹಿಳಾ ಕ್ರಿಕೆಟ್​ ತಂಡಕ್ಕೂ ನಾವು ವಿವಿಧ ಯೋಜನೆಗಳನ್ನು ಹೊಂದಿದ್ದೇವೆ’ ಎಂದು ಗಂಗೂಲಿ ಭಾನುವಾರ ಐಪಿಎಲ್​ ಆಡಳಿತ ಮಂಡಳಿ ಸಭೆಗೆ ಪೂರ್ವಭಾವಿಯಾಗಿ ತಿಳಿಸಿದರು.

    ಇದನ್ನೂ ಓದಿ: ಐಪಿಎಲ್​ಗೆ ಯುಎಇ ಕೂಡ ಸುರಕ್ಷಿತ ಅಲ್ಲವಂತೆ!

    ಮಹಿಳೆಯರಿಗೆ ಐಪಿಎಲ್​ ಟೂರ್ನಿಗೆ ಪೂರ್ವಭಾವಿಯಾಗಿ ತರಬೇತಿ ಶಿಬಿರವೂ ಆಯೋಜನೆಗೊಳ್ಳಲಿದೆ ಎಂದು ಗಂಗೂಲಿ ಮಾಹಿತಿ ನೀಡಿದ್ದಾರೆ. ಕೇಂದ್ರಿಯ ಗುತ್ತಿಗೆ ಹೊಂದಿರುವ ಮಹಿಳಾ ಕ್ರಿಕೆಟಿಗರಿಗೆ ಈಗಾಗಲೆ ಶಿಬಿರ ಆರಂಭಗೊಳ್ಳಬೇಕಾಗಿತ್ತಾದರೂ, ದೇಶದಲ್ಲಿನ ಕರೊನಾ ಪರಿಸ್ಥಿತಿಯಿಂದಾಗಿ ಇದು ಸಾಧ್ಯವಾಗಿಲ್ಲ. ಪುರುಷರಿರಲಿ, ಮಹಿಳೆಯರಿರಲಿ ಆರೋಗ್ಯ ಎಲ್ಲರಿಗೂ ಮುಖ್ಯವಾದುದು. ಹಾಲಿ ಪರಿಸ್ಥಿತಿಯಲ್ಲಿ ಶಿಬಿರ ಆಯೋಜಿಸಿದರೆ ಅಪಾಯಕಾರಿ ಆಗಬಹುದು ಎಂದು ಗಂಗೂಲಿ ವಿವರಿಸಿದ್ದಾರೆ.

    ಕರೊನಾ ಹಾವಳಿಯಿಂದಾಗಿ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್​ ಅಕಾಡೆಮಿ (ಎನ್​ಸಿಎ) ಸದ್ಯ ಬಂದ್​ ಆಗಿದೆ. ಆದರೆ ನಾವು ಯೋಜನೆಯೊಂದನ್ನು ಹೊಂದಿದ್ದೇವೆ. ಮಹಿಳಾ ಕ್ರಿಕೆಟಿಗರಿಗೂ ಶಿಬಿರವನ್ನು ಆಯೋಜಿಸುವುದಂತೂ ಖಚಿತ ಎಂದು ಗಂಗೂಲಿ ತಿಳಿಸಿದ್ದಾರೆ.

    ಮುಂದಿನ ವರ್ಷ ನ್ಯೂಜಿಲೆಂಡ್​ನಲ್ಲಿ ನಡೆಯಲಿರುವ ಮಹಿಳೆಯರ ಏಕದಿನ ವಿಶ್ವಕಪ್​ಗೆ ಪೂರ್ವಭಾವಿಯಾಗಿ ಭಾರತ ತಂಡ ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್​ ಇಂಡೀಸ್​ ವಿರುದ್ಧ 2 ಪೂರ್ಣ ಪ್ರಮಾಣದ ಸರಣಿಗಳನ್ನು ಆಡಲಿದೆ ಎನ್ನಲಾಗಿದೆ.

    ಶೀಘ್ರವೇ ಮಹಿಳೆಯರ ಐಪಿಎಲ್ ಕೂಡ ಜನಪ್ರಿಯಗೊಳ್ಳಲಿದೆ ಎಂದ ಶಿಖಾ ಪಾಂಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts