More

    ಕಲ್ಲಂಗಡಿ ಬೆಳೆಯಲ್ಲಿ ಇಳುವರಿ ಕುಸಿತ ; ಮುಳಬಾಗಿಲು ರೈತರಿಗೆ ನಷ್ಟದ ಆತಂಕ

    ಮುಳಬಾಗಿಲು : ತಾಲೂಕಿನಲ್ಲಿ ಕಲ್ಲಂಗಡಿ ಬೆಳೆ ಸರಿಯಾದ ಇಳುವರಿಯಿಲ್ಲದೆ ಹಾಕಿದ ಬಂಡವಾಳವೂ ಕೈಗೆ ಬರದೆ ನಷ್ಟ ಅನುಭವಿಸುವ ಆತಂಕ ರೈತರನ್ನು ಕಾಡುತ್ತಿದೆ.

    ತಾಲೂಕಿನಲ್ಲಿ ಸುವಾರು 50 ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ರೈತರು ಕಲ್ಲಂಗಡಿ ಬೆಳೆದಿದ್ದು, ತೋಟದಲ್ಲಿ ಫಸಲು ಕಳಪೆಯಾಗಿ ಬಂದಿದೆ. ಇದರಿಂದ ಬಂಡವಾಳದಲ್ಲಿ ಕಾಲು ಭಾಗವೂ ಕೈ ಸೇರುತ್ತಿಲ್ಲ ಎನ್ನಲಾಗಿದೆ. ಒಂದು ಹೆಕ್ಟೇರ್ ಪ್ರದೇಶಕ್ಕೆ 80ರಿಂದ 1.5 ಲಕ್ಷ ರೂಪಾಯಿವರೆಗೂ ರೈತರು ಖರ್ಚು ಮಾಡಿದ್ದು, ಬಿತ್ತನೆ ಬೀಜ ದೋಷವೋ ಅಥವಾ ಹವಾವಾನ ವೈಪರೀತ್ಯವೋ ರೈತನಿಗೆ ಬೆಳೆಯೂ ಇಲ್ಲ ಕಾಸೂ ಇಲ್ಲದಂತಾಗಿದೆ.

    ಇನ್ನೊಂದೆಡೆ ಗುಣಮಟ್ಟದ ಕಲ್ಲಂಗಡಿ ಹಣ್ಣು ಸಿಗದೆ ಗ್ರಾಹಕರು ಹಾಗೂ ವ್ಯಾಪಾರಿಗಳಿಗೂ ನಿರಾಸೆಯಾಗಿದೆ. ಡಿಸೆಂಬರ್, ಜನವರಿ ವೇಳೆಗೆ ಉತ್ತಮ ಫಸಲು ಬಂದು ಒಂದು ಕಾಯಿ 13ರಿಂದ 20 ಕೆಜಿವರೆಗೂ ತೂಕ ಬರುತ್ತಿತ್ತು. ಈಗ 1ರಿಂದ 3 ಕೆಜಿವರೆಗೆ ಮಾತ್ರ ಫಸಲು ಬಂದಿದ್ದು, ರುಚಿಯೂ ಕಡಿಮೆಯಾಗಿದೆ.

    ಈ ಬಾರಿ ಮೋಡ ಮುಸುಕಿದ ವಾತಾವರಣ ಹಾಗೂ ಉಷ್ಣಾಂಶ ಕಡಿಮೆಯಾಗಿದೆ ಎಂಬ ಮಾತು ಕೇಳಿಬರುತ್ತಿದ್ದರೂ, ಸೂಕ್ತ ವಾರ್ಗದರ್ಶನವಿಲ್ಲದೆ ಬೆಳೆ ಮಾಡಿ ಕೈಸುಟ್ಟುಕೊಂಡ ರೈತರ ಬದುಕು ಬೀದಿಗೆ ಬಿದ್ದಿದೆ. ಬೆಳೆಗೆ ಮಾಡಿದ ಸಾಲ ತೀರಿಸಲಾಗದೆ ಹಾಕಿದ ಬಂಡವಾಳವೂ ಬರದೆ ರೈತ ಅತಂತ್ರ ಸ್ಥಿತಿಯಲ್ಲಿದ್ದಾನೆ.

    1 ಎಕರೆಯಲ್ಲಿ ಕಲ್ಲಂಗಡಿ ಬೆಳೆಯಲು ಸುಮಾರು 80 ಸಾವಿರ ರೂ. ಬಂಡವಾಳ ಹಾಕಲಾಗಿದೆ. ಸಲನ್ನು 40 ಸಾವಿರ ರೂಪಾಯಿಗೆ ಮಾರಿದ್ದು, 40 ಸಾವಿರ ರೂ. ನಷ್ಟವಾಗಿದೆ.
    ಹನುಮಂತಪ್ಪ ಕಸಿವಿರೆಡ್ಡಿಹಳ್ಳಿ ರೈತ, ಮುಳಬಾಗಿಲು

    ಹನುಮಂತಪ್ಪ ಅವರ ತೋಟವನ್ನು 40 ಸಾವಿರ ರೂಪಾಯಿಗೆ ಖರೀದಿ ಮಾಡಿದ್ದು, ಈಗ ತಂದಿರುವ ಕಲ್ಲಂಗಡಿ ಹಣ್ಣುಗಳು 1ರಿಂದ 3 ಕೆಜಿ ವಾತ್ರ ತೂಗುತ್ತಿರುವುದರಿಂದ ಕೇಳುವವರೇ ಇಲ್ಲ. ಒಂದು ಕಾಯಿಯನ್ನು 10 ರೂಪಾಯಿಗೆ ನೀಡಿ ನಷ್ಟ ಕಡಿಮೆ ಮಾಡಿಕೊಳ್ಳಲು ಯೋಚಿಸಿದ್ದೇನೆ.
    ಬಿ.ರಮೇಶ್, ಕಲ್ಲಂಗಡಿಹಣ್ಣು ವ್ಯಾಪಾರಿ, ಮುಳಬಾಗಿಲು

    ತಾಲೂಕಿನಲ್ಲಿ ಸುಮಾರು 50 ಹೆಕ್ಟೇರ್‌ಗೂ ಹೆಚ್ಚು ಕಲ್ಲಂಗಡಿ ಬೆಳೆ ಬೆಳೆದಿರುವ ವಾಹಿತಿ ಇದೆ. ಹವಾವಾನ ವೈಪರೀತ್ಯದಿಂದ ಫಸಲು ಕಡಿಮೆಯಾಗಿ ಕಾಯಿ ಗಾತ್ರವೂ ಕಡಿಮೆಯಾಗಿದೆ.
    ಎಸ್.ಶಿವಕುಮಾರಿ, ಹಿರಿಯ ನಿರ್ದೇಶಕ ತೋಟಗಾರಿಕೆ ಇಲಾಖೆ, ಮುಳಬಾಗಿಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts