More

    ಜಲ ದಿಗ್ಬಂಧನದಿಂದ ಮುಕ್ತವಾಗದ ಜನ

    ಚಿಕ್ಕೋಡಿ: ಮಹಾರಾಷ್ಟ್ರ ಮತ್ತು ಚಿಕ್ಕೋಡಿ ಉಪವಿಭಾಗದ ವ್ಯಾಪ್ತಿಯಲ್ಲಿ ವಾರದಿಂದ ಆರ್ಭಟಿಸುತ್ತಿದ್ದ ಮಳೆರಾಯ ಬುಧವಾರ ಕೊಂಚ ಬಿಡುವು ನೀಡಿದ್ದಾನೆ. ಆದರೆ, ಮಹಾರಾಷ್ಟ್ರದ ಕೊಯ್ನ ಸೇರಿ ವಿವಿಧ ಜಲಾಶಯಗಳಿಂದ ನೀರು ಬಿಡುತ್ತಿರುವುದರಿಂದ ನದಿಗಳ ನೀರಿನ ಮಟ್ಟದಲ್ಲಿ ಅಲ್ಪ ಏರಿಕೆಯಾಗಿದೆ. ಕೃಷ್ಣಾ ನದಿಯಲ್ಲಿ ಬುಧವಾರ ಒಂದು ಅಡಿಯಷ್ಟು ನೀರು ಏರಿಕೆಯಾಗಿದೆ.

    ಕೊಯ್ನ ಜಲಾಶಯದಿಂದ 59,598 ಕ್ಯೂಸೆಕ್, ವಾರಣಾದಿಂದ 12,264 ಕ್ಯೂಸೆಕ್, ಕಾಳಮ್ಮವಾಡಿಯಿಂದ 7,700 ಕ್ಯೂಸೆಕ್ ಮತ್ತು ರಾಧಾನಗರಿಯಿಂದ 4,256 ಕ್ಯೂಸೆಕ್, ರಾಜಾಪುರ ಬ್ಯಾರೇಜ್‌ನಿಂದ 1,85,875 ಕ್ಯೂಸೆಕ್ ಸೇರಿ ಚಿಕ್ಕೋಡಿ ತಾಲೂಕಿನ ಕೃಷ್ಣಾ ನದಿಗೆ 2,18,963 ಕ್ಯೂಸೆಕ್ ನೀರು ಹರಿದು ಬರುತ್ತಿದೆ.

    ಮುಕ್ತವಾಗದ ಸೇತುವೆ: ಕೃಷ್ಣಾ ನದಿ ಸೇರಿ ವಿವಿಧ ನದಿಗಳಿಗೆ ಅಡ್ಡಲಾಗಿ ನಿರ್ಮಿಸಿರುವ ಯಡೂರ-ಕಲ್ಲೋಳ, ಮಲಿಕವಾಡ-ದತ್ತವಾಡ ಸೇತುವೆ, ಸಿದ್ನಾಳ-ಹುನ್ನರಗಿ, ಕಾರದಗಾ-ಬೋಜ, ಬೋಜವಾಡಿ-ಕುನ್ನೂರ, ಜತ್ರಾಟ-ಭೀವಶಿ, ಸಿದ್ನಾಳ-ಅಕ್ಕೋಳ, ಯಡೂರ-ಕಲ್ಲೋಳ ಸದಲಗಾ-ಬೋರಗಾಂವ ಸೇರಿದಂತೆ ಕೆಳಹಂತದಲ್ಲಿರುವ 9 ಸೇತುವೆ ಇನ್ನೂ ಜಲಾವೃತ ಸ್ಥಿತಿಯಲ್ಲೇ ಇವೆ. ಉಪವಿಭಾಗ ವ್ಯಾಪ್ತಿಯಲ್ಲಿ 20 ಗ್ರಾಮಗಳ ಸಂಪರ್ಕ ಕಡಿತಗೊಂಡಿದ್ದು, ಪರ್ಯಾಯ ಮಾರ್ಗಗಳಿಂದ ಜನರು ಸಂಚರಿಸುತ್ತಿದ್ದಾರೆ.

    ನದಿ ತೀರದ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ನೋಡಲ್ ಅಧಿಕಾರಿಗಳು ಹಾಗೂ ಆಯಾ ಗ್ರಾಮಲೆಕ್ಕಾಧಿಕಾರಿಗಳು ಮನವೊಲಿಸುತ್ತಿದ್ದಾರೆ. ಆಲಮಟ್ಟಿ ಜಲಾಶಯದಿಂದ 2.50 ಲಕ್ಷ ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ಮಳೆ ಅಬ್ಬರ ಸ್ವಲ್ಪ ಕಡಿಮೆಯಾಗಿದ್ದರಿಂದ ಗುರುವಾರ ಬೆಳಗ್ಗೆ ನದಿಗಳ ನೀರಿನ ಒಳಹರಿವು ಇನ್ನೂ ಕಡಿಮೆಯಾಗುವ ಸಾಧ್ಯತೆ ಇದೆ.
    | ಸುಭಾಷ ಸಂಪಗಾವಿ ತಹಸೀಲ್ದಾರ್, ಚಿಕ್ಕೋಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts