More

    ಮಾರ್ಚ್​ಗೆ ನೀರಿನ ಸಮಸ್ಯೆ ಇನ್ನಷ್ಟು ಗಂಭೀರ; ಟ್ಯಾಂಕರ್​ ಮಾಫಿಯಾಗೆ ಹೈರಾಣಾದ ಜನರು!

    ಬೆಂಗಳೂರು: ರಾಜಧಾನಿಯಲ್ಲಿ ಜಲಾಮ ಎದುರಾಗಿದ್ದು, ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಬಣಿಸುತ್ತಿದೆ. ಮಾರ್ಚ್​ಗೆ ಸಮಸ್ಯೆ ಇನ್ನಷ್ಟು ಬಿಗಡಾಯಿಸುವ ಲಕ್ಷಣಗಳು ಈಗಲೇ ಗೋಚರಿಸಿವೆ. ಟ್ಯಾಂಕರ್​ ನೀರಿಗೆ ದುಪ್ಪಟ್ಟು ಹಣ ನೀಡಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತಿದೆ.

    ದಿನದಿಂದ ದಿನಕ್ಕೆ ಟ್ಯಾಂಕರ್​ ನೀರಿಗೆ ಬೇಡಿಕೆ ಹೆಚ್ಚುತ್ತಿದೆ. ಈ ಪರಿಸ್ಥಿತಿಯ ಲಾಭ ಪಡೆಯಲು ಟ್ಯಾಂಕರ್​ ಮಾಲೀಕರು ಮುಂದಾಗಿದ್ದಾರೆ ಎಂದು ನಾಗರೀಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೆ ಸಾಯೆಂಬಂತೆ ಕಳೆದ ತಿಂಗಳು 600&800 ರೂ. ಇದ್ದ ಟ್ಯಾಂಕರ್​ ನೀರಿನ ದರ ಏಕಾಏಕಿ 2000 ರೂ. ದಾಟಿದೆ. ಬಹುತೇಕ ಕೊಳವೆ ಬಾವಿಗಳು ಬತ್ತಿರುವುದರಿಂದ ದೂರದ ಪ್ರದೇಶಗಳಿಗೆ ತೆರಳಿ ನೀರು ತರಬೇಕಿದೆ. ಖಾಸಗಿ ಕೊಳವೆ ಬಾವಿ ಮಾಲೀಕರು ನಮ್ಮಿಂದ ಹೆಚ್ಚಿನ ದುಡ್ಡು ಪಡೆದುಕೊಳ್ಳುತ್ತಿದ್ದಾರೆ.

    ಕೆ.ಆರ್​.ಪುರ, ರಾಜರಾಜೇಶ್ವರಿ ನಗರ, ಚನ್ನಸಂದ್ರ, ಬೊಮ್ಮನಹಳ್ಳಿ, ಕೆಂಗೇರಿ, ಪೀಣ್ಯ, ದಾಸರಹಳ್ಳಿ, ಕೆಂಚೇನಹಳ್ಳಿ, ಹೊಸಕೆರೆಹಳ್ಳಿ, ಕನಕಪುರ ರಸ್ತೆ, ವೈಟ್​ಫೀಲ್ಡ್​, ಹೊರಮಾವು, ಕೋರಮಂಗಲ, ಜಯನಗರ ಮುಂತಾದ ಕಡೆಗಳಲ್ಲಿ ನೀರಿನ ಸಮಸ್ಯೆ ತಲೆತೋರಿದ್ದು, ಟ್ಯಾಂಕರ್​ ನೀರಿನ ಬೆಲೆಯೂ ಏರಿಕೆಯಾಗಿದೆ.

    ಶುದ್ಧ ಕುಡಿಯುವ ನೀರಿನ ಘಟಕವೂ ಸ್ಥಗಿತ:

    ಬರಗಾಲದ ಬಿಸಿ ಶುದ್ಧ ಕುಡಿಯುವ ನೀರಿನ ಘಟಕಕ್ಕೂ ತಟ್ಟಿದೆ. ಕೊಳವೆ ಬಾವಿಗಳು ಬತ್ತಿರುವುದರಿಂದ ಕುಡಿಯುವ ನೀರಿನ ಟಕಗಳು ಒಂದೊಂದಾಗಿ ಸ್ಥಗಿತಗೊಳ್ಳುತ್ತಿವೆ. ಈ ಸಮಸ್ಯೆ ಯಶವಂತಪುರ ಭಾಗದಲ್ಲಿ ಹೆಚ್ಚಿದೆ. ಮಾರ್ಚ್​ನಲ್ಲಿ ಸ್ಥಗಿತಗೊಳ್ಳುವ ಕುಡಿಯುವ ನೀರಿನ ಘಟಕಗಳ ಸಂಖ್ಯೆ ಇನ್ನಷ್ಟು ಹೆಚ್ಚಲಿದೆ.

    ಕಳೆದ ಮೂರು ವರ್ಷದಿಂದ ಒಬ್ಬನೇ ವ್ಯಕ್ತಿಯ ಬಳಿಯಿಂದ ಟ್ಯಾಂಕರ್​ ನೀರು ತರಿಸುತ್ತಿದ್ದೆ. ಪ್ರತಿ ಬಾರಿಯೂ ಹೇಳಿದ ಒಂದೆರಡು ಗಂಟೆಗಳಲ್ಲಿ ನೀರು ಸರಬರಾಜು ಮಾಡುತ್ತಿದ್ದ. ಸದ್ಯದ ಪರಿಸ್ಥಿತಿಯಲ್ಲಿ ಕರೆ ಮಾಡಿದರೆ, ಮೂರು ದಿನಗಳ ಬಳಿಕ ನೀರು ಟ್ಯಾಂಕರ್​ ನೀರು ತಂದುಕೊಡುತ್ತಿದ್ದಾನೆ. ಪ್ರಶ್ನಿಸಿದರೆ ಕೊಳವೆ ಬಾವಿ ಬತ್ತಿವೆ. ನಮಗೂ ನೀರಿಲ್ಲ ಎಂದು ಉತ್ತರಿಸುತ್ತಾನೆ. ಬೆಲೆಯೂ ದುಪ್ಪಟ್ಟಾಗಿದೆ. ಮಾರ್ಚ್​ನಿಂದ ನೀರಿನ ಸಮಸ್ಯೆ ಹೆಚ್ಚಲಿದೆ.
    -ಚಂದ್ರಮೋಹನ್​, ಬಸವನಗುಡಿ, ಬಾಡಿಗೆ ಮನೆ ಮಾಲೀಕ

    ಕೈಕಟ್ಟಿ ಕುಳಿತ ಜನಪ್ರತಿನಿಧಿಗಳು!

    ಕಳೆದ ವರ್ಷ ಚುನಾವಣಾ ಪ್ರಚಾರದಲ್ಲಿದ್ದ ರಾಜಕೀಯ ನಾಯಕರ ಮತದಾರರನ್ನು ಸೆಳಯಲು ಕೆಲ ಭಾಗಗಳಿಗೆ ಮುತುವರ್ಜಿ ವಹಿಸಿ ಟ್ಯಾಂಕರ್​ ನೀರು ಸರಬರಾಜು ಮಾಡುತ್ತಿದ್ದರು. ಸದ್ಯದ ಪರಿಸ್ಥಿತಿಯಲ್ಲಿ ಇವರ್ಯಾರೂ ನೀರಿನ ಸಮಸ್ಯೆ ಕೇಳಲು ತಯಾರಿಲ್ಲ. ಟ್ಯಾಂಕರ್​ ಮಾಫಿಯಾದಿಂದ ಹೈರಾಣಾಗಿದ್ದೇವೆ. ಮದ್ಯಮ ವರ್ಗದ ಮಂದಿ ದುಡಿದ ಅರ್ಧದಷ್ಟು ದುಡ್ಡನ್ನು ಟ್ಯಾಂಕರ್​ ನೀರಿಗಾಗಿ ವ್ಯಯಿಸಬೇಕಾಗಿದೆ. ಸಮಸ್ಯೆ ಬಗೆಯರಿಸಲು ಯಾವೊಬ್ಬ ನಾಯಕರೂ ಈವರೆಗೆ ಮುಂದಾಗಿಲ್ಲ ಎಂದು ಜನರು ಆರೋಪಿಸುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts