More

    ನೀರಿನ ಪೈಪ್‌ಲೈನ್ ದುರಸ್ತಿಗೊಳಿಸದಿದ್ದರೆ ಅಧಿಕಾರಿಗಳೆ ಹೊಣೆ

    ಹರಪನಹಳ್ಳಿ: ಜೆಜೆಎಂ ಕಾಮಗಾರಿ ನಡೆಯುವಾಗ ಹಾಕಿದ್ದ ಪೈಪ್‌ಗಳು ಹೊಡೆದಿದ್ದರೆ ಸರಿಪಡಿಸಬೇಕು, ಇಲ್ಲದಿದ್ದರೆ ಅದೇ ಕಲುಷಿತ ನೀರನ್ನು ಅಲ್ಲಿನ ಸೆಕ್ಟರ್ ಅಧಿಕಾರಿಗಳಿಗೆ ಕುಡಿಸುತ್ತೇವೆ ಎಂದು ಜಿಪಂ ಸಿಇಒ ಬಿ.ಸದಾಶಿವ ಪ್ರಭು ಎಚ್ಚರಿಸಿದರು.


    ತಾಪಂ ಸಾಮರ್ಥ್ಯ ಸೌಧದಲ್ಲಿ ಸೋಮವಾರ ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯದ ಕುರಿತು ತುರ್ತು ಸಭೆಯಲ್ಲಿ ಮಾತನಾಡಿದರು. ಜೆಜೆಎಂ ಯೋಜನೆ ನಳಗಳಿಗೆ ಹಳೆಯ ಒಎಚ್‌ಟಿಗಳಿಗೆ ಸಂಪರ್ಕ ಕಲ್ಪಿಸಬಾರದು. ಜೆಜೆಎಂನಿಂದಲೇ ಒಎಚ್‌ಟಿ ನಿರ್ಮಿಸಿ ನೀರು ಪೂರೈಸಬೇಕು. ಹರಪನಹಳ್ಳಿ ಪ್ರತಿ ಗ್ರಾಪಂಗೆ ಭೇಟಿ ಮಾಡುತ್ತೇನೆ. ಗ್ರಾಮದಲ್ಲಿ ಜನರು ಗುಂಡಿ ತೋಡಿ ನೀರು ಪಡೆಯುತ್ತಿರುವುದು ಕಂಡುಬಂದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇನೆ ಎಂದರು.

    ಇದನ್ನೂ ಓದಿ: ಕುರುಗೋಡಲ್ಲಿ ಜಲಬವಣೆ ಸಾಧ್ಯತೆ, ಪೂರ್ಣಗೊಳ್ಳದ ಜೆಜೆಎಂ ಕಾಮಗಾರಿ, ತೋಟ-ಗದ್ದೆಗಳ ಬಾವಿಗಳೇ ಗತಿ


    ಗುಂಡಿ ತೋಡಿ ನೀರು ಪಡೆಯುವ ಪದ್ಧತಿ ತೊಲಗಬೇಕು. ಬಯಲು ಶೌಚ ಮಾಡದಂತೆ ಗ್ರಾಪಂನ ಎಲ್ಲ ಸಿಬ್ಬಂದಿ ಜಾಗೃತಿ ಮೂಡಿಸಬೇಕು. ಗ್ರಾಪಂ ಸುತ್ತಲೂ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ವಾಣಿಜ್ಯ ಚಟುವಟಿಕೆಗಳು ನಡೆಯುತ್ತಿದ್ದು, ಅನೈರ್ಮಲ್ಯ ಹಾಗೂ ಕಸ ಕಂಡು ಬಂದರೆ ನೋಟಿಸ್ ನೀಡಬೇಕು. ಅಂಗಡಿ ಮಾಲೀಕರು ಎಚ್ಚೆತ್ತುಕೊಳ್ಳದಿದ್ದರೆ ಲೈಸೆನ್ಸ್ ರದ್ದು ಮಾಡಲು ಪಿಡಿಒಗಳಿಗೆ ಸೂಚನೆ ನೀಡಿದರು.
    ನಂದಿಬೇವೂರು ಗ್ರಾಪಂ ವ್ಯಾಪ್ತಿಯ ಕಣಿವಿಹಳ್ಳಿಯಲ್ಲಿ ವಾಂತಿ-ಭೇದಿ ಪ್ರಕರಣಗಳು ಕಂಡು ಬಂದಿವೆ.

    ಆದರೆ, ತಾಲೂಕಿನ ಇತರೆ ಗ್ರಾಪಂ ವ್ಯಾಪ್ತಿಯ ಪಿಡಿಒಗಳು ನಮ್ಮ ಗ್ರಾಪಂನಲ್ಲಿ ಯಾವುದೇ ಸಮಸ್ಯೆ ಬರಲ್ಲವೆಂದು ನಿರ್ಲಕ್ಷೃವಹಿಸಬಾರದು. ಎಲ್ಲರೂ ಎಚ್ಚರಿಕೆಯಿಂದ ಕೆಲಸ ನಿರ್ವಹಿಸಬೇಕು. ಗ್ರಾಪಂ ವ್ಯಾಪ್ತಿಯಲ್ಲಿ ಯಾವುದೇ ಕಾಮಗಾರಿಗಳು ನಡೆಯುತ್ತಿದ್ದರೆ, ಪಿಡಿಒ ಸ್ಥಳೀಯ ಜನಪ್ರತಿನಿಧಿಗಳ ಗಮನಕ್ಕೆ ತರಬೇಕು. ಇಲ್ಲದಿದ್ದರೆ ಅಲ್ಲಿ ಏನಾದರೂ ಸಮಸ್ಯೆಗಳು ಉಲ್ಬಣಿಸಿದರೆ ಕಾಮಗಾರಿ ಅನುಷ್ಠಾನ ಮಾಡುವವರೇ ಜವಾಬ್ದಾರಿ ಹೊತ್ತುಕೊಳ್ಳಬೇಕು ಎಂದು ತಿಳಿಸಿದರು.


    ಜಿಲ್ಲಾ ಎಸ್‌ಬಿಎಂ ಸಹಾಯಕ ನಿರ್ದೇಶಕ ಲಕ್ಷ್ಮೀಕಾಂತ, ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್.ಪ್ರಕಾಶ್, ತಾಲೂಕು ನರೇಗಾ ಸಹಾಯಕ ನಿರ್ದೇಶಕ ಯು.ಎಚ್.ಸೋಮಶೇಖರ್, ಪಿಆರ್‌ಇಡಿ ಎಇಇ ನಾಗಪ್ಪ, ಪಂಚಾಯತ್ ರಾಜ್ ಸಹಾಯಕ ನಿರ್ದೇಶಕ ವೀರಣ್ಣ ಲಕ್ಕಣ್ಣನವರ್, ಟಿಪಿಒ ನವೀನ್‌ಕುಮಾರ್, ಆರ್‌ಡಬ್ಲ್ಯುಎಸ್ ಇಂಜಿನಿಯರ್‌ಗಳು, ಜೆಜೆಎಂನ ವಿವಿಧ ವಿಭಾಗದ ಅಧಿಕಾರಿಗಳು, ಪಿಡಿಒಗಳು, ಕಾರ್ಯದರ್ಶಿಗಳು, ತಾಲೂಕು ಪಂಚಾಯಿತಿ ಸಿಬ್ಬಂದಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts