More

    ಎಎಂಆರ್ ಡ್ಯಾಂನಲ್ಲಿ ಜಲಮಟ್ಟ ಏರಿಕೆ, ತುಂಬೆಯಲ್ಲಿ ಮತ್ತಷ್ಟು ಇಳಿಕೆ

    ಮಂಗಳೂರು: ಮಂಗಳೂರು ನಗರ ಸೇರಿದಂತೆ ಗ್ರಾಮಾಂತರ ಭಾಗಕ್ಕೆ ನೀರು ಪೂರೈಸುವ ತುಂಬೆ ವೆಂಟೆಡ್ ಡ್ಯಾಂ ನೀರಿನ ಮಟ್ಟ ದಿನಂಪ್ರತಿ ಇಳಿಕೆಯಾಗುತ್ತಿದ್ದು, ಕಳೆದ ಎರಡು ದಿನಗಳಲ್ಲಿ ಸುರಿದ ಮಳೆಗೆ ಎಎಂಆರ್ ಡ್ಯಾಂನಲ್ಲಿ ಮಾತ್ರ ಪರಿಸ್ಥಿತಿ ತುಸು ಚೇತರಿಕೆಯಾಗಿದೆ.

    ತುಂಬೆ ಡ್ಯಾಂನಲ್ಲಿ ಭಾನುವಾರ 3.69 ಮೀ. ನೀರು ಇದೆ. ಇಲ್ಲಿ ಶನಿವಾರ 3.73 ಹಾಗೂ ಶುಕ್ರವಾರ 3.78 ಮೀ. ನೀರು ಇತ್ತು. ಎಎಂಆರ್ ಡ್ಯಾಂನಲ್ಲಿ ಭಾನುವಾರ 15.21 ಮೀ. ನೀರು ಇದೆ. ಈ ಡ್ಯಾಂನಲ್ಲಿ ಶನಿವಾರ 14.70 ಹಾಗೂ ಶುಕ್ರವಾರ 13.23 ಮೀ ನೀರು ಇತ್ತು.

    ಪ್ರಸ್ತುತ ಒಂದು ದಿನ ಮಂಗಳೂರು ನಗರ ಮತ್ತು ಇನ್ನೊಂದು ದಿನ ಸುರತ್ಕಲ್ ಭಾಗಕ್ಕೆ ನೀರು ಪೂರೈಸಲಾಗುತ್ತಿದೆ. ದಿನಂಪ್ರತಿ ಸುಮಾರು 3ರಿಂದ 4 ಗಂಟೆಯಷ್ಟು ಮಾತ್ರ ನೀರು ಪಂಪಿಂಗಿಗೆ ವಿರಾಮ ನೀಡಲಾಗುತ್ತಿದೆ. ಸಾರ್ವಜನಿಕರಿಂದ ದೊಡ್ಡ ಪ್ರಮಾಣದಲ್ಲಿ ದೂರು ಇಲ್ಲ.

    ನಗರದ ಹೆಚ್ಚಿನ ಕಡೆ ನೆಲ ಮಟ್ಟದಲ್ಲಿ ಇರುವ ಟ್ಯಾಂಕ್‌ಗಳಿಗೆ ನೀರು ತಲುಪಲು ಸಮಸ್ಯೆಯಾಗುತ್ತಿಲ್ಲ. ಆದರೆ ಎತ್ತರದಲ್ಲಿ ವಸತಿ ಸಮುಚ್ಚಯಗಳ ಮೇಲೆ ಇರುವ ಟ್ಯಾಂಕ್ ಗಳಿಗೆ ನೀರು ತಲುಪಲು ಸಮಸ್ಯೆಯಾಗುತ್ತಿದೆ.

    ಎರಡು ವಾರ ಸಾಕಾಗುವಷ್ಟು ನೀರು

    ತುಂಬೆ ವೆಂಟೆಡ್ ಡ್ಯಾಂನಲ್ಲಿ ನೀರಿನ ಮಟ್ಟ ಕುಸಿದ ಪರಿಣಾಮ ಮೇ 4ರಿಂದ ಮಂಗಳೂರು ನಗರ ಹಾಗೂ ಸುರತ್ಕಲ್‌ಗೆ ರೇಷನಿಂಗ್ ಮೂಲಕ ನೀರು ಸರಬರಾಜು ಮಾಡುವಂತೆ ಜಿಲ್ಲಾಡಳಿತ ಪಾಲಿಕೆಗೆ ನಿದೇರ್ಶನ ನೀಡಿತ್ತು. ಮೇ 5ರಿಂದ ಮಂಗಳೂರು ನಗರ ಹಾಗೂ ಸುರತ್ಕಲ್ ವ್ಯಾಪ್ತಿಗೆ ಪ್ರತಿ 2 ದಿನಕ್ಕೊಮ್ಮೆ ನೀರು ಪೂರೈಸಲು ಪಾಲಿಕೆ ನಿರ್ಧರಿಸಿ, ಪೂರೈಕೆ ಮಾಡುತ್ತಿದೆ. ತುಂಬೆ ಡ್ಯಾಂನ ಈಗಿನ ಸನ್ನಿವೇಶದಲ್ಲಿ ಮಂಗಳೂರು ಮಹಾನಗರಕ್ಕೆ ಇನ್ನು 2 ವಾರಗಳಿಗೆ ಸಾಕಾಗುವಷ್ಟು ಮಾತ್ರ ನೀರಿನ ಸಂಗ್ರಹ ಇದ್ದು, ಹರೇಕಳ ಡ್ಯಾಂನಿಂದ ನೀರನ್ನು ಎತ್ತಲಾಗುತ್ತಿದೆ. ಶೀಘ್ರ ಮಳೆಯಾಗಿ ನದಿಯಲ್ಲಿ ನೀರು ಹರಿಯದಿದ್ದರೆ ಮಂಗಳೂರಿಗೆ ತೀವ್ರ ನೀರಿನ ಅಭಾವ ತಟ್ಟಲಿದೆ. ಎರಡು ದಿನ ಉತ್ತಮ ಮಳೆಯಾದರೂ ನೀರಿನ ಮಟ್ಟ ಸುಧಾರಿಸಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts