More

    ನೀರಿಗಾಗಿ ಗ್ರಾಪಂಗೆ ಮುತ್ತಿಗೆ ಹಾಕಿದ ಮಹಿಳೆಯರು- ಸಮರ್ಪಕ ನೀರು ಸರಬರಾಜಿಗೆ ನಿವಾಸಿಗಳ ಆಗ್ರಹ

    ಹನುಮಸಾಗರ: ಸ್ಥಳೀಯ ಕರಿಸಿದ್ಧೇಶ್ವರ ಮಠದ ಹತ್ತಿರದ ಮೂರು ಮತ್ತು ಎಂಟನೇ ವಾರ್ಡ್‌ಗೆ ಸಮರ್ಪಕ ನೀರು ಪೂರೈಸದಿರುವುದನ್ನು ಖಂಡಿಸಿ ವಾರ್ಡ್‌ಗಳ ನಿವಾಸಿಗಳು ಬುಧವಾರ ಗ್ರಾಪಂಗೆ ಮುತ್ತಿಗೆ ಹಾಕಿದರು.

    ವಾರ್ಡ್‌ಗೆ ಸರಿಯಾಗಿ ನೀರು ಪೂರೈಕೆಯಾಗುತ್ತಿಲ್ಲ. ಕರಿಸಿದ್ಧೇಶ್ವರ ಮಠದ ಹತ್ತಿರದ ಮುಖ್ಯ ರಸ್ತೆಯಲ್ಲಿ ಸಿಸಿ ರಸ್ತೆ ಕಾಮಗಾರಿ ನಡೆಯುತ್ತಿದೆ. ಮಠದ ಹತ್ತಿರವಿದ್ದ ಸಾರ್ವಜನಿಕ ನಲ್ಲಿ ಸಿಸಿ ರಸ್ತೆ ನಿರ್ಮಾಣದ ವೇಳೆ ಪೈಪ್‌ಗೆ ಹಾನಿಯಾಗಿದ್ದು, ನೀರು ಬರುತ್ತಿಲ್ಲ. ತಿಂಗಳು ಕಳೆಯುತ್ತಾ ಬಂದರೂ ಇನ್ನೂ ದುರಸ್ತಿಗೊಳಿಸಿಲ್ಲ. ಎರಡೂ ವಾರ್ಡ್‌ಗಳ ಪೈಕಿ ಒಂದು ವಾರ್ಡ್‌ನಲ್ಲಿ ಸಿಹಿ ನೀರು, ಇನ್ನೊಂದು ವಾರ್ಡ್‌ನಲ್ಲಿ ಗಡಸು ನೀರು ಪೂರೈಕೆ ಮಾಡಲಾಗುತ್ತಿದ್ದೆ. ಅದು ಸರಿಯಾಗಿ ಪುರೈಕೆಯಾಗುತ್ತಿಲ್ಲ. ಇದರಿಂದಾಗಿ ನೀರಿಗಾಗಿ ಬೇರೆಡೆ ಅಲೆಯಬೇಕಾಗಿದೆ. ವಾರ್ಡ್ ನಿವಾಸಿಗಳು ಬೇರೆ ವಾರ್ಡ್ ನೀರು ತರಲು ಹೋದರೆ, ಅಲ್ಲಿ ನಮ್ಮ ವಾರ್ಡ್‌ನವರಿಗೆ ನೀರು ಸಾಕಾಗುವುದಿಲ್ಲ. ನಾವು ಬೇರೆ ವಾರ್ಡ್‌ನವರಿಗೆ ಬಿಡುವುದಿಲ್ಲ ಎನ್ನುತಾರೆ. ಕೂಡಲೇ ವಾರ್ಡ್‌ಗಳ ನೀರಿನ ಸಮಸ್ಯೆ ಬಗೆಹರಿಸಬೇಕೆಂದು ಒತ್ತಾಯಿಸಿದರು. ವಾರ್ಡ್ ನಿವಾಸಿಗಳಾದ ಕೆ.ಶರಣಮ್ಮ , ಅನುಸೂಯ ಕುಲಕರ್ಣಿ, ಮಂಜುಳಾ ಎನ್.ಎಚ್., ಸುಷ್ಮಾ ಪೂಜಾರ್ ಇತರರಿದ್ದರು.

    ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಭೇಟಿ ನೀಡಿ, ನಲ್ಲಿ ಸರಿ ಮಾಡಲಾಗುವುದು. ಎರಡ್ಮೂರು ದಿನಗಳಲ್ಲಿ ಎರಡೂ ವಾರ್ಡ್ ನಿವಾಸಿಗಳ ನೀರಿನ ಸಮಸ್ಯೆ ಬಗೆ ಹರಿಸಲಾಗುವುದು.
    | ಬಸವರಾಜ ಸಂಕನಾಳ. ಪಿಡಿಒ ಹನುಮಸಾಗರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts