More

    ಕುಡಿಯುವ ನೀರು ಒದಗಿಸಿದ ತಾಲೂಕು ಆಡಳಿತ

    ಕುಶಾಲನಗರ : ಕುಶಾಲನಗರ ಸಮೀಪದ ಮಾದಾಪಟ್ಟಣ ಗ್ರಾಮಕ್ಕೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆ ಆಗುತ್ತಿಲ್ಲ ಎಂಬ ಗ್ರಾಮಸ್ಥರು ಭಾನುವಾರ ಖಾಲಿ ಕೊಡದೊಂದಿಗೆ ಪ್ರತಿಭಟನೆ ಮಾಡುತ್ತಿರುವ ವಿಷಯ ಹೊರಬೀಳುತ್ತಲೇ ತಾಲೂಕು ಆಡಳಿತದ ವತಿಯಿಂದ ನೀರು ಸರಬರಾಜಿಗೆ ತುರ್ತು ಕ್ರಮ ವಹಿಸಿದ ಪ್ರಸಂಗ ಘಟನೆ ನಡೆದಿದೆ.
    ಪ್ರತಿಭಟನೆ ಸುದ್ದಿ ತಿಳಿಯುತ್ತಿದ್ದಂತೆಯೇ ಉಪ ವಿಭಾಗಾಧಿಕಾರಿ ನರ್ವಡೆ ವಿನಾಯಕ್, ಕುಶಾಲನಗರ ತಹಸೀಲ್ದಾರ್ ಕಿರಣ್ ಗೌರಯ್ಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗ್ರಾಮಸ್ಥರ ಸಮಸ್ಯೆ ಆಲಿಸಿ, ಮಾಹಿತಿ ಪಡೆದುಕೊಂಡು ತಕ್ಷಣ ನೀರಿನ ಟ್ಯಾಂಕರ್ ತರಿಸಿ ನೀರು ವಿತರಿಸಲು ನೆರವಾದರು.
    ಟಾಸ್ಕ್ ಫೋರ್ಸ್ ಗಮನಕ್ಕೆ ತನ್ನಿ: ಎಲ್ಲೆಡೆ ಬೇಡಿಕೆ ಅನ್ವಯ ಅಗತ್ಯ ಪ್ರಮಾಣದ ನೀರು ಪೂರೈಕೆ ಮಾಡಲಾಗುತ್ತಿದೆ. ಆಯಾ ಗ್ರಾಪಂ ವತಿಯಿಂದ ನೀರಿನ ಕೊರತೆ ಎದುರಾಗಿರುವ ಪ್ರದೇಶಗಳ ಬಗ್ಗೆ ಮಾಹಿತಿ ಸಂಗ್ರಹಿಸಬೇಕು. ಟಾಸ್ಕ್ ಫೋರ್ಸ್ ಗಮನಕ್ಕೆ ತಂದರೆ ಕೂಡಲೆ ನೀರು ಒದಗಿಸಲು ಕ್ರಮವಹಿಸಲಾಗುವುದು ಎಂದು ಉಪ ವಿಭಾಗಾಧಿಕಾರಿ ನರ್ವಡೆ ವಿನಾಯಕ್ ವಿಜಯವಾಣಿಗೆ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts