More

    ನೀರಿನ ಸಂರಕ್ಷಣೆ ಸರ್ವರ ಕರ್ತವ್ಯ

    ರಟ್ಟಿಹಳ್ಳಿ: ಭೂಮಿ ಮೇಲಿನ ಸಕಲ ಜೀವಿಗಳಿಗೆ ನೀರು ಅತ್ಯಮೂಲ್ಯ. ಜೀವಜಲ ಸಂರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಜನ, ಜಾನುವಾರುಗಳ ದಾಹ ಇಂಗಿಸಲು ಕೆರೆಗಳ ಅಭಿವೃದ್ಧಿ ಅವಶ್ಯವಾಗಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದರು.

    ತಾಲೂಕಿನ ಮಕರಿ ಗ್ರಾಮದಲ್ಲಿ ಕೆರೆ ಅಭಿವೃದ್ಧಿ ಕಾಮಗಾರಿಗೆ ಶನಿವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಗ್ರಾಮದ ಕೆರೆ ಅಭಿವೃದ್ಧಿಗಾಗಿ ಸಣ್ಣ ನೀರಾವರಿ ಇಲಾಖೆಯಿಂದ ನಬಾರ್ಡ್ ಯೋಜನೆಯಡಿ 97 ಲಕ್ಷ ರೂ. ಅನುದಾನ ಮಂಜೂರಾಗಿದೆ. ಕೆರೆಯಲ್ಲಿನ ಹೂಳೆತ್ತುವುದು, ಕೆರೆ ಏರಿಗೆ ಕಲ್ಲಿನ ಪಿಚ್ಚಿಂಗ್ ಮಾಡುವುದು, ಜಮೀನುಗಳಿಗೆ ನೀರು ಹಾಯಿಸಲು ಕಾಲುವೆ ನಿರ್ವಿುಸಲಾಗುವುದು. ಈಗಾಗಲೇ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಮುಕ್ತಾಯವಾಗಿದ್ದು, ಮೊದಲು ಕೆರೆಯ ಸರ್ವೆ ಮತ್ತು ಗಡಿ ಗುರುತಿಸಿ ಕಾಮಗಾರಿ ಪ್ರಾರಂಭಿಸಲಾಗುವುದು ಎಂದರು.

    ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ. ಬಣಕಾರ ಮಾತನಾಡಿ, ನೀರು ಪೋಲು ಮಾಡದಂತೆ ಅವಶ್ಯಕ್ಕೆ ಅನುಗುಣವಾಗಿ ಬಳಕೆ ಮಾಡಿಕೊಳ್ಳಬೇಕಾಗಿದೆ. ಮತ್ತು ಈ ಕೆರೆಯು ಗ್ರಾಮಸ್ಥರಿಗೆ ನೀರಿನ ತೊಂದರೆಯಾಗದಂತೆ ಸಹಕಾರಿಯಾಗಲಿದೆ ಎಂದು ಹೇಳಿದರು.

    ಧಾರವಾಡ ಹಾಲು ಒಕ್ಕೂಟ ನಿರ್ದೇಶಕ ಹನುಮಂತಗೌಡ ಭರಮಣ್ಣವರ, ತಾಪಂ ಮಾಜಿ ಸದಸ್ಯ ಆರ್.ಎನ್. ಗಂಗೋಳ, ಜಿ.ಪಂ. ಸದಸ್ಯ ಎನ್.ಎಂ. ಈಟೇರ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಂಗಾಧರ ಪಟ್ಟಣಶೆಟ್ಟಿ, ಶಾಖಾಧಿಕಾರಿ ಮನೋಹರ ಹಾದಿಮನಿ, ಗ್ರಾಪಂ ಸದಸ್ಯರಾದ ಮಾಲತೇಶ ಗಂಗೋಳ, ಸುಮಾ ಗಂಗೋಳ, ಶಾಂತಾ ಕಡೂರ, ಗ್ರಾಮಸ್ಥರಾದ ಶೆದಿಯಪ್ಪ ಹಾರೋಗೊಪ್ಪದ, ಡಿ.ಬಿ. ಪಾಟೀಲ, ಡಿ.ಟಿ. ಹುಲ್ಮನಿ, ಪ್ರಭು ನಿಂಬೆಗುಂದಿ, ಅಶೋಕ ನಾಗಣ್ಣನವರ, ಈರಯ್ಯ ಆರಾಧ್ಯಮಠ, ತಾಪಂ ಸದಸ್ಯ ಭರಮಪ್ಪ ಯಲೇದಹಳ್ಳಿ, ಗುತ್ತಿಗೆದಾರ ಮಂಜುನಾಥ ಜಿಗಳಿ ಗ್ರಾಮಸ್ಥರು ಇದ್ದರು.

    ಬೆಳೆ ಹಾನಿಗೀಡಾದವರಿಗೆ ಪರಿಹಾರ

    ಹಿರೇಕೆರೂರ: ತುಂಗಾ ಮೇಲ್ದಂಡೆ ಯೋಜನೆಯ ಕಾಲುವೆಯಲ್ಲಿ ನೀರು ಬಸಿದು ಹಾಳಾಗಿರುವ ರಟ್ಟಿಹಳ್ಳಿ ತಾಲೂಕಿನ ಕಮಲಾಪುರ ಗ್ರಾಮದ 154 ರೈತರಿಗೆ ಒಟ್ಟು 11 ಲಕ್ಷ 30 ಸಾವಿರ ರೂಪಾಯಿ ಪರಿಹಾರ ಮಂಜೂರಾಗಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದರು.

    ಪಟ್ಟಣದ ಅವರ ಗೃಹ ಕಚೇರಿಯಲ್ಲಿ ತುಂಗಾ ಮೇಲ್ದಂಡೆ ಯೋಜನೆಯ ಕಾಲುವೆ ನೀರು ಬಸಿದಿದ್ದರಿಂದ ಬೆಳೆ ಹಾಳಾಗಿರುವ ರಟ್ಟಿಹಳ್ಳಿ ತಾಲೂಕಿನ ಕಮಲಾಪುರ ಗ್ರಾಮದ 154 ರೈತರಿಗೆ ಶನಿವಾರ ಪರಿಹಾರಧನದ ಚೆಕ್​ಗಳನ್ನು ವಿತರಿಸಿ ಅವರು ಮಾತನಾಡಿದರು. ಕಮಲಾಪುರ ಗ್ರಾಮದ ಕಾಲುವೆ ಅಕ್ಕ- ಪಕ್ಕದಲ್ಲಿ ಜಮೀನು ಹೊಂದಿರುವ ರೈತರಿಗೆ ಮುಂದೆ ಯಾವುದೇ ತೊಂದರೆಯಾಗದಂತೆ ಬಸಿಯುವ ನೀರನ್ನು ತಡೆಗಟ್ಟಲು ಕಾಲುವೆಯ ಅಕ್ಕ- ಪಕ್ಕ ಕಾಂಕ್ರೀಟ್ ಹಾಕುವುದು, ಸೌಳು, ಜೌಳು ತಡೆಗಟ್ಟುವುದು ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಒಟ್ಟು 11 ಕೋಟಿ 65 ಲಕ್ಷ ರೂ. ಮಂಜೂರಾಗಿದೆ. ಶೀಘ್ರದಲ್ಲಿ ಕಾಮಗಾರಿಗೆ ಚಾಲನೆ ದೊರೆಯಲಿದೆ. ಇದರಿಂದ ಈ ಭಾಗದ ರೈತರಿಗೆ ಶಾಶ್ವತವಾಗಿ ತೊಂದರೆ ತಪ್ಪಿದಂತಾಗುತ್ತದೆ ಎಂದರು.

    ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ. ಬಣಕಾರ ಮಾತನಾಡಿ, ಬಿಜೆಪಿ ಸರ್ಕಾರ ಬಂದ ಮೇಲೆ ರೈತರ ಹಿತದೃಷ್ಟಿ ಕಾಪಾಡುವ ಅನೇಕ ಮಹತ್ತರ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ. ಅಲ್ಲದೆ, ಕೃಷಿ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ಮಂಜೂರಾಗುತ್ತಿದೆ ಎಂದರು.

    ರಟ್ಟಿಹಳ್ಳಿ ತಹಸೀಲ್ದಾರ್ ಕೆ. ಗುರುಬಸವರಾಜ, ಯುಟಿಪಿ ಇಲಾಖೆಯ ಮುಖ್ಯ ಕಾರ್ಯನಿರ್ವಾಹಕ ಇಂಜಿನಿಯರ್ ಕೊಟ್ರೇಶ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮುಕುಂದರಾಜ, ಡಿ.ಸಿ. ಪಾಟೀಲ, ಕರೇಗೌಡ ಸಣ್ಣಕ್ಕಿ, ವಸಂತಗೌಡ ಪಾಟೀಲ, ರವಿಶಂಕರ ಬಾಳಿಕಾಯಿ, ವಿವಿಧ ಇಲಾಖೆಗಳ ಅಧಿಕಾರಿಗಳಾದ ಎ.ಟಿ. ಜಯಕುಮಾರ, ಎಂ.ವಿ. ಮಂಜುನಾಥ, ಎಸ್.ವಿ. ಪೌರಾಣಿಕ, ರಂಗಪ್ಪ ಸಿ. ಹಾಗೂ ರೈತರು ಇದ್ದರು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts