More

    ನೀರಿಗಾಗಿ ಅನ್ನದಾತರಿಂದ ಸಂಚಾರ ತಡೆ

    ದೇವದುರ್ಗ: ನಾರಾಯಣಪುರ ಬಲದಂಡೆ ನಾಲೆಗೆ ವಾರಬಂದಿ ಹಾಕಿ ನೀರುಬಂದ್ ಮಾಡಿರುವುದನ್ನು ಖಂಡಿಸಿ ಪಟ್ಟಣದ ಜೆಪಿ ವೃತ್ತದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ರೈತರು ಬೃಹತ್ ಪ್ರತಿಭಟನೆ ನಡೆಸಿದರು.

    ಇದನ್ನೂ ಓದಿ: ರೈತ ಭವನ ಇನ್ನು ವಾಣಿಜ್ಯ ಮಳಿಗೆ

    ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಪಾ ಮಾತನಾಡಿ, ಐಸಿಸಿ ಸಭೆಯಲ್ಲಿ ಏಕಪಕ್ಷೀಯವಾಗಿ ನಾಲೆಗೆ ವಾರಬಂದಿ ಪದ್ಧತಿ ಹಾಕಿರುವುದು ಖಂಡನೀಯ. ರೈತರಿಗೆ ಅವಕಾಶ ನೀಡದೆ, ಅಭಿಪ್ರಾಯ ಪಡೆಯದೆ ಅವೈಜ್ಞಾನಿಕ ತೀರ್ಮಾನ ಕೈಗೊಂಡಿದ್ದಾರೆ.

    ಬಲದಂಡೆ ನಾಲೆ ನೀರು ನಂಬಿಕೊಂಡು ಜಿಲ್ಲೆಯ ರೈತರು ತಡವಾಗಿ ಬಿತ್ತನೆ ಮಾಡುತ್ತಿದ್ದಾರೆ. ಮೆಣಸಿನಕಾಯಿ ಹಾಗೂ ಭತ್ತ ನಾಟಿ ಮಾಡುತ್ತಿದ್ದು ಏಕಾಏಕಿ ನೀರು ಬಂದ್ ಮಾಡಿರುವುದರಿಂದ ರೈತರಿಗೆ ಭಾರಿಹೊಡೆತ ಬಿದ್ದಿದೆ ಎಂದರು.

    ಜಿಲ್ಲಾಧ್ಯಕ್ಷ ಪ್ರಭಾಕರ ಪಾಟೀಲ್ ಇಂಗಳದಾಳ ಮಾತನಾಡಿ, ಸರ್ಕಾರ ರೈತರೊಂದಿಗೆ ಆಟವಾಡುತ್ತಿದ್ದು ಅಲ್ಲಿ ನೋಡಿದರೆ ತಮಿಳುನಾಡಿಗೆ ನೀರು ಬಿಟ್ಟು ಆ ಭಾಗದ ರೈತರಿಗೆ ಅನ್ಯಾಯ ಮಾಡಿದ್ದರೆ, ಇಲ್ಲಿ ವಾರಬಂದಿ ಹಾಕಿ ಕೃಷಿಕರಿಗೆ ದ್ರೋಹ ಬಗೆದಿದೆ.

    ಅಲ್ಲಿನ ರೈತರು ಪ್ರತಿಭಟನೆ ಮಾಡಿದರೆ ರಾತ್ರೋರಾತ್ರಿ ಸಭೆ ಸೇರಿ ಪರಿಹರಿಸುತ್ತೆ. ಆದರೆ, ನಮ್ಮ ಭಾಗದ ರೈತರ ಹೋರಾಟಕ್ಕೆ ಸ್ಪಂದನೆ ಇಲ್ಲ. ಈ ಭಾಗದ ಕೃಷಿಕರು ರೈತರಲ್ಲವಾ?.

    ಜಲಸಂಪನ್ಮೂಲ ಸಚಿವ ಡಿಕೆ.ಶಿವಕುಮಾರ ಲೋಕಸಭೆ ಚುನಾವಣೆ ಗುಂಗಿನಿಂದ ಹೊರಬಂದು ರೈತರ ಸಮಸ್ಯೆ ಆಲಿಸಬೇಕು. ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯದಲ್ಲಿ ಒಟ್ಟು 140ಟಿಎಂಸಿ ಅಡಿ ನೀರು ಲಭ್ಯವಿದ್ದರೂ ವಾರಬಂದಿ ಹಾಕಿರುವುದು ನಾಚಿಕೆಗೇಡಿನ ಸಂಗತಿ

    ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ವಾರಬಂದಿ ಪದ್ಧತಿ ಕೈಬಿಟ್ಟು ನಿರಂತರವಾಗಿ ನಾಲೆ ನೀರು ಹರಿಸಬೇಕು. ವಾರಬಂದಿ 10ದಿನದಿಂದ 8ದಿನಕ್ಕಿಳಿಸಬೇಕು ಎಂದು ಆಗ್ರಹಿಸಿದರು.

    ಟ್ರಾಫಿಕ್ ಚಾಮ್
    ರೈತರು ಬೆಳಗ್ಗೆ 10ಗಂಟೆಗೆ ರಸ್ತೆ ಸಂಚಾರತಡೆ ನಡೆಸಿದ್ದರಿಂದ ಸುಮಾರು 3ಗಂಟೆಗಳ ಕಾಲ ಸಂಚಾರದಟ್ಟಣೆ ಉಂಟಾಯಿತು. ಜಾಲಹಳ್ಳಿ ರಸ್ತೆ, ಶಹಾಪುರ ರೋಡ್, ರಾಯಚೂರು ರೋಡ್ ಬಂದ್‌ಆಗಿದ್ದರಿಂದ ವಾಹನಗಳು ಸಾಲುಗಟ್ಟಿ ನಿಂತಿದ್ದವು.

    ಆರಂಭದಲ್ಲಿ ಪೊಲೀಸರು ಪರ್ಯಾಯ ಮಾರ್ಗ ನೀಡಿದರೂ ಬಳಿಕ ಟ್ರಾಫಿಕ್ ಸಮಸ್ಯೆ ನಿಯಂತ್ರಣಕ್ಕೆ ಬರಲಿಲ್ಲ. ಕೆಬಿಜೆಎನ್‌ಎಲ್ ಅಧಿಕಾರಿಗಳು ಮಧ್ಯೆಪ್ರವೇಶ ಮಾಡಿ ಆ.27ರಂದು ನೀರು ಹರಿಸುವುದಾಗಿ ಭರವಸೆ ನೀಡಿದ್ದರಿಂದ ರೈತರು ಪ್ರತಿಭಟನೆ ಕೈಬಿಟ್ಟರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts