More

    90 ನಿಮಿಷ ಹಾರರ್ ಸಿನಿಮಾ ನೋಡಿದ್ರೆ ತೂಕ ಇಳಿಕೆಯಾಗುತ್ತದೆ; ಅಧ್ಯಯನ

    ನವದೆಹಲಿ:  ಯಾರಾದರೂ ಸಣ್ಣಗಿರುವವರನ್ನು ನೋಡಿದರೆ ಚೆನ್ನಾಗಿ ತಿಂದು ದಪ್ಪ ಆಗು, ದಪ್ಪ ಇದ್ದವರನ್ನು ನೋಡಿದ್ರೆ ಸಣ್ಣ ಆಗಬೇಕು ನೀನು ಎಂದು ಸಲಹೆ ನೀಡುತ್ತಾರೆ. ಹಾಗೆಂದು ಒಮ್ಮೆಲೆ ದಪ್ಪ, ಸಣ್ಣ ಆಗಲು ಸಾಧ್ಯವಾಗುವುದಿಲ್ಲ ಎನ್ನುವುದು ಗೊತ್ತಿರುವ ವಿಚಾರ. ಆದರೆ ಕೆಲವರು ನಿಯಮಿತವಾಗಿ ಆಹಾರ ಸೇವನೆ ಹಾಗೂ ಫುಡ್​​ ಕಂಟ್ರೋಲ್​​ ಮೂಲಕವಾಗಿ ದೇಹದ ತೂಕವನ್ನು ಕಾಪಾಡಿಕೊಳ್ಳಬಹುದು ಎನ್ನುವುದನ್ನು ನಂಬುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ನಡೆದ ವರದಿಯೊಂದು  ಹಾರರ್​ ಸಿನಿಮಾ ನೋಡಿದ್ರೆ ತೂಕ ಕಡಿಮೆ ಮಾಡಿಕೊಳ್ಳಬಹುದು ಎಂದು ಹೇಳುತ್ತಿದೆ.

    ವೆಸ್ಟ್ಮಿನಿಸ್ಟರ್ ವಿಶ್ವವಿದ್ಯಾನಿಲಯವು ನಡೆಸಿದ ಸಂಶೋಧನೆಯಲ್ಲಿ, ಹಾರರ್ ಚಲನಚಿತ್ರಗಳನ್ನು ವೀಕ್ಷಿಸುವುದರಿಂದ 150 ಕ್ಯಾಲೊರಿಗಳನ್ನು ಬರ್ನ್ ಮಾಡಲು ಸಹಾಯ ಮಾಡುತ್ತದೆ ಎಂದು ತಿಳಿದುಬಂದಿದೆ. 90 ನಿಮಿಷಗಳ ಹಾರರ್ ಚಲನಚಿತ್ರ ವೀಕ್ಷಣೆಯು ಅರ್ಧ ಗಂಟೆಯ ನಡಿಗೆಗೆ ಸಮನಾಗಿರುತ್ತದೆ ಎಂದು ಸಂಶೋಧನೆಯು ಹೇಳಿದೆ.

    ತೂಕ ಇಳಿಕೆಗೂ ಭಯಾನಕ ಸಿನಿಮಾ ವೀಕ್ಷಣೆಗೂ ಏನು ಸಂಬಂಧ ಎಂಬ ಪ್ರಶ್ನೆಗೆ ಈ ಅಧ್ಯಯನವು ಸಹಕಾರಿಯಾಗಿದೆ.ಭಯಾನಕವಾದ ಹಾರರ್ ಚಲನಚಿತ್ರವನ್ನು ವೀಕ್ಷಣೆ ಮಾಡುವುದರಿಂದ ಕ್ಯಾಲೋರಿಗಳನ್ನು ಸುಡುವ ಮೂಲಕ ಸುಲಭವಾಗಿ ದೇಹದ ತೂಕ ಇಳಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಸಂಶೋಧನೆಯಲ್ಲಿ ತಿಳಿದುಬಂದಿದೆ.

    ಸಂಶೋಧನೆ ಹೇಳುವುದೇನು?: ಮೂವಿ ರೆಂಟಲ್ ಕಂಪೆನಿಯು ಲವ್ ಫಿಲ್ಮ್​ನ ಸಹಭಾಗಿತ್ವದಲ್ಲಿ ಅಧ್ಯಯನವನ್ನು ನಡೆಸಿತು. ಸಂಶೋಧನೆಗೆ ಒಳಪಡಿಸಲಾಗಿದ್ದ ಹತ್ತು ಜನರು ವಿಭಿನ್ನ ಭಯಾನಕ ಚಲನಚಿತ್ರಗಳನ್ನು ವೀಕ್ಷಿಸಿದರು.ವೀಕ್ಷಣೆಯ ಸಂದರ್ಭದಲ್ಲಿ ಎಲ್ಲರಿಗೂ ಹೃದಯದ ಬಡಿತ,ಆಮ್ಲಜನಕದ ಸೇವನೆ ಮತ್ತು ಇಂಗಾಲದ ಡೈ ಆಕ್ಸೈಡ್ ಉತ್ಪಾದನೆಯನ್ನು ಅಳೆಯುವ ಸಾಧನಗಳನ್ನು ಧರಿಸಲಾಗಿತ್ತು.ವೀಕ್ಷಕರ ಹೃದಯದ ಬಡಿತ ಮತ್ತು ಚಯಾಪಚಯಕ್ರಿಯೆಯಲ್ಲಿ ಉಂಟಾದ ಬದಲಾವಣೆಗಳನ್ನು ಸಂಶೋಧಕರು ಕಂಡುಕೊಂಡಿದ್ದು,ಇಂತಹ ಚಲನಚಿತ್ರಗಳ ವೀಕ್ಷಣೆಯ ಪರಿಣಾಮವಾಗಿ ಒಬ್ಬ ವ್ಯಕ್ತಿಯ ಹೆಚ್ಚಿನ ಕ್ಯಾಲೋರಿಗಳನ್ನು ಸುಡಲು ಸಾಧ್ಯವಾಗುತ್ತದೆ ಮತ್ತು ಈ ಪ್ರಕ್ರಿಯೆಯಲ್ಲಿ ಸುಡಲಾದ ಕ್ಯಾಲೋರಿಗಳ ಸಂಖ್ಯೆಯು ಚಲನಚಿತ್ರ ಮತ್ತು ವೀಕ್ಷಕನ ಆಧಾರದ ಮೇಲೆ ಬದಲಾಗುತ್ತದೆ.90 ನಿಮಿಷದ ಭಯಾನಕ ಚಲನಚಿತ್ರವನ್ನು ವೀಕ್ಷಿಸುವುದರಿಂದ ಸರಾಸರಿ 150 ಕ್ಯಾಲೋರಿಗಳನ್ನು ಸುಡಬಹುದು ಎಂದು ಸಂಶೋಧಕರು ಹೇಳಿದ್ದಾರೆ.

    ಸಂಶೋಧನೆ ಆಯ್ಕೆ ಮಾಡಿದ ಸಿನಿಮಾಗಳು:  ಕ್ಯಾಲೋರಿಗಳನ್ನು ಸುಡುವ ಬಗ್ಗೆ ಸಂಶೋಧಿಸಲು ಮೊದಲ ಹತ್ತು ಭಯಾನಕ ಚಲನಚಿತ್ರಗಳನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು.ಅವುಗಳಲ್ಲಿ ದಿ ಶೈನಿಂಗ್,ಜಾಸ್ ಮತ್ತು ದಿ ಎಕ್ಸಾರ್ಸಿಸ್ಟ್ ಚಿತ್ರಗಳನ್ನು ತೋರಿಸಲಾಯಿತು.ಈ ಚಲನಚಿತ್ರಗಳಲ್ಲಿ ಬೆಚ್ಚಿಬೀಳಿಸುವ (ಜಂಪ್-ಸ್ಕೇರ್) ಭಯಾನಕ ದೃಶ್ಯಗಳು ಇದ್ದಿದ್ದರಿಂದ ವೀಕ್ಷಕರ ಹೃದಯ ಬಡಿತ ಮತ್ತು ಅಡ್ರಿನಾಲಿನ್ ಮಟ್ಟವನ್ನು ಹೆಚ್ಚಿಸಲು ಕಾರಣವಾಯಿತು. ಸಂಶೋಧನೆಯಲ್ಲಿ ಮೊದಲ ಮೂರು ಚಿತ್ರಗಳ ವೀಕ್ಷಣೆಯಿಂದ ಕ್ರಮವಾಗಿ 184,161 ಮತ್ತು 158 ಕ್ಯಾಲೋರಿಗಳನ್ನು ಸುಡಲು ಸಹಕಾರಿಯಾಗಿದ್ದನ್ನು ಅರಿಯಲಾಯಿತು.

    ಕ್ಯಾಲೋರಿಗಳನ್ನು ಸುಡುವ ಮೂಲಕ ತೂಕವನ್ನು ಇಳಿಸಿಕೊಳ್ಳಲು ಹಾರರ್ ಚಲನಚಿತ್ರಗಳನ್ನು ವೀಕ್ಷಿಸುವುದು ಸುಲಭವಾದ ಮಾರ್ಗವಾಗಿದೆ. ಹೀಗೆಂದ ಮಾತ್ರಕ್ಕೆ ಕೇವಲ ಚಲನಚಿತ್ರವನ್ನು ವೀಕ್ಷಿಸುವುದನ್ನು ಹೊರತುಪಡಿಸಿ ದೈನಂದಿನ ನಿಯಮಿತ ದೈಹಿಕ ಚಟುವಟಿಕೆಗಳನ್ನು ಅನುಸರಿಸುವುದು ಕೂಡ ಮುಖ್ಯವಾಗಿದೆ.

    ವಿಶ್ವವಿದ್ಯಾನಿಲಯದ ಸೆಲ್ ಮೆಟಬಾಲಿಸಂ ಮತ್ತು ಪಿಸಿಯೋಲಾಜಿ ವಿಭಾಗದ ಹಿರಿಯ ಉಪನ್ಯಾಸಕ ಡಾ.ರಿಚರ್ಡ್ ಮೆಕೆಂಜಿ ಮಾತನಾಡಿ,  ಹಾರರ್ ಚಿತ್ರಗಳ ವೀಕ್ಷಣಾಕಾರರಲ್ಲಿ ಹೆಚ್ಚು ಭಯವಿರುವುದರಿಂದ ಅಡ್ರಿನಾಲ್ ಹಾರ್ಮೋನ್ ಬಿಡುಗಡೆಯಾಗುತ್ತದೆ. ಇದರಿಂದ ಹಸಿವು ಕಡಿಮೆಯಾಗಿ ಚಯಾಪಚಯಕ್ರಿಯೆ ವೇಗಗೊಳ್ಳುತ್ತದೆ.ಹೀಗಿರುವಾಗ ಇದು ಕ್ಯಾಲೋರಿಗಳನ್ನು ಸುಡಲು ಮುಂದಾಗುತ್ತದೆ ಎಂದು ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts