More

    VIDEO | ಕ್ಯಾಪ್ಟನ್​ ಕೂಲ್​ ಧೋನಿ ಬರ್ತ್​​ಡೇಗೆ ಐಸಿಸಿ ವಿಶೇಷ ಕೊಡುಗೆ

    ನವದೆಹಲಿ : ಇಂದು ಭಾರತ ಕ್ರಿಕೆಟ್​ ತಂಡದ ಮಾಜಿ ಕ್ಯಾಪ್ಟನ್​ ಎಂ.ಎಸ್​.ಧೋನಿ ಅವರ 40ನೇ ಜನ್ಮದಿನ. ಈ ವಿಶೇಷ ದಿನಕ್ಕೆ ಜಾಲತಾಣದಲ್ಲಿ ಕ್ರೀಡಾಪಟುಗಳು ಮತ್ತು ಅಭಿಮಾನಿಗಳು ಶುಭಾಶಯಗಳ ಹೊಳೆಯನ್ನೇ ಹರಿಸಿದ್ದಾರೆ. ಇಂಟರ್​ನ್ಯಾಷನಲ್ ಕ್ರಿಕೆಟ್​ ಕೌನ್ಸಿಲ್​ ಕೂಡ ಧೋನಿಯವರ ಹುಟ್ಟಿದಹಬ್ಬವನ್ನು ತನ್ನದೇ ಆದ ರೀತಿಯಲ್ಲಿ ಆಚರಿಸಿದೆ.

    ಧೋನಿ ನಾಯಕತ್ವದ ಪ್ರಮುಖ ಅಂತರರಾಷ್ಟ್ರೀಯ ಕ್ರಿಕೆಟ್​ ಪಂದ್ಯಗಳ ಹಲವು ರೋಮಾಂಚಕ ಕ್ಷಣಗಳನ್ನು ಒಟ್ಟುಮಾಡಿ ಸುಮಾರು 5 ನಿಮಿಷಗಳ ವಿಡಿಯೋ ಒಂದನ್ನು ಐಸಿಸಿ ತನ್ನ ಟ್ವಿಟರ್​ ಖಾತೆಯಲ್ಲಿ ಶೇರ್​ ಮಾಡಿದೆ. ಧೋನಿಯನ್ನು ‘ಕ್ಯಾಪ್ಟನ್​ ಕೂಲ್​’ ಎಂದು ಕರೆಯುವುದಕ್ಕೆ ಕಾರಣವಿದೆ ಎಂದಿರುವ ಐಸಿಸಿ, ಅವರ ಹುಟ್ಟಿದಹಬ್ಬದ ದಿನ ಅವರು ಬಿಸಿಸಿಐ ಸ್ಕಿಪ್ಪರ್​ ಆಗಿ ತೋರಿದ ಚತುರತೆಗಳನ್ನು ಮೆಲುಕು ಹಾಕಲು ಅವಕಾಶ ಒದಗಿಸಿದೆ.

    2007 ಟಿ20 ವರ್ಲ್ಡ್​ ಕಪ್​ ಗೆದ್ದಾಗಿನಿಂದ ಹಿಡಿದು 2011 ರಲ್ಲಿ ವರ್ಲ್ಡ್​ ಕಪ್​ ಗೆದ್ದವರೆಗೆ ನಾಯಕನಾಗಿ ಧೋನಿ ತೆಗೆದುಕೊಂಡ ಅತ್ಯುತ್ತಮ ನಿರ್ಣಯಗಳ, ಮತ್ತು ಅವರ ಒಟ್ಟಾರೆ ಉತ್ಕೃಷ್ಟ ಆಟಗಾರಿಕೆಯ ತುಣುಕುಗಳನ್ನು ಕ್ರೋಢೀಕರಿಸಿರುವ ಈ ವಿಡಿಯೋ, ಕ್ರಿಕೆಟ್​ಪ್ರಿಯರಿಗೆ, ಅದರಲ್ಲೂ ಧೋನಿ ಅಭಿಮಾನಿಗಳಿಗೆ, ದೊಡ್ಡ ಉಡುಗೊರೆಯಾಗಿದೆ. (ಏಜೆನ್ಸೀಸ್)

    ಸಿಎಂ ಮಮತಾ ಬ್ಯಾನರ್ಜಿಗೆ 5 ಲಕ್ಷ ರೂ. ದಂಡ ವಿಧಿಸಿದ ಹೈಕೋರ್ಟ್​

    ಮಾಜಿ ರಣಜಿ ಕ್ರಿಕೆಟಿಗ, ಈಗ ರಸ್ತೆಬದಿ ದಾಲ್​ ಪೂರಿ ಮಾರುತ್ತಿದ್ದಾನೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts