More

    VIDEO| ಡಿಫೆನ್ಸ್​ ಎಕ್ಸಪೋದಲ್ಲಿ ಅಸಾಲ್ಟ್​ ರೈಫಲ್​ ಹಿಡಿದು ಶೂಟಿಂಗ್​ ಕೌಶಲ ಪ್ರದರ್ಶಿಸಿದ ಪ್ರಧಾನಿ ಮೋದಿ!

    ಲಖನೌ: ಉತ್ತರ ಪ್ರದೇಶ ರಾಜಧಾನಿ ಲಖನೌದಲ್ಲಿ ಬುಧವಾರದಿಂದ ಆರಂಭವಾಗಿರೋ ಡಿಫೆನ್ಸ್​ ಎಕ್ಸಪೋ 2020ಗೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದರು. ಇದೇ ವೇಳೆ ವರ್ಚುವಲ್​ ಫೈರಿಂಗ್​ ಶ್ರೇಣಿಯಲ್ಲಿ ತಮ್ಮ ಶೂಟಿಂಗ್​ ಕೌಶಲವನ್ನು ಪರೀಕ್ಷಿಸುವ ಮೂಲಕ ಎಲ್ಲರ ಗಮನ ಸೆಳೆದರು.

    ಅಸಾಲ್ಟ್​ ರೈಫಲ್​ ಹಿಡಿದು ಗುರಿಯೆಡೆಗೆ ಫೈರಿಂಗ್​ ನಡೆಸಿರುವ ಪ್ರಧಾನಿ ಮೋದಿ ಅವರ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​ ಆಗಿದೆ. ಅಲ್ಲದೆ, ರಕ್ಷಣಾ ಸಚಿವ ರಜನಾಥ್​ ಸಿಂಗ್​ ಅವರು ಗನ್​ ಹಿಡಿದ ಕ್ಯಾಮರಾಗೆ ಪೋಸ್​ ನೀಡಿರುವ ಫೋಟೋ ಕೂಡ ಸದ್ದು ಮಾಡುತ್ತಿದೆ.

    ಐದು ದಿನಗಳ ಡಿಫೆನ್ಸ್​ ಎಕ್ಸ್​ಪೋಗೆ ಇಂದು ಚಾಲನೆ ನೀಡಿದ ಪ್ರಧಾನಿ ಮೋದಿ, ಮುಂದಿನ ಐದು ವರ್ಷಗಳಲ್ಲಿ ಭಾರತವು 5 ಬಿಲಿಯನ್​ ಡಾಲರ್​ ಡಿಫೆನ್ಸ್​ ರಫ್ತು ಮಾಡುವ ಗುರಿಯನ್ನು ಹೊಂದಿದೆ ಎಂದರು.

    ಭಾರತಕ್ಕಾಗಿ ಮತ್ತು ವಿಶ್ವಕ್ಕಾಗಿ, ಭಾರತದಲ್ಲೇ ತಯಾರಿಸಿ (ಮೇಕ್​ ಇನ್​ ಇಂಡಿಯಾ) ಎಂಬುದು ನಮ್ಮ ಮಂತ್ರವಾಗಿದೆ. 2014ರಲ್ಲಿ ಭಾರತದಿಂದ 2 ಸಾವಿರ ಕೋಟಿ ಡಿಫೆನ್ಸ್ ರಫ್ತಾಗಿದೆ.​ ಕಳೆದ ಎರಡು ವರ್ಷಗಳಿಂದ ಅದು 17 ಸಾವಿರ ಕೋಟಿಗೆ ಏರಿಕೆಯಾಗಿದೆ. ಮುಂದಿನ 5 ವರ್ಷಗಳಲ್ಲಿ 5 ಬಿಲಿಯನ್​ ಡಾಲರ್​ ತಲುಪಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.

    ಭಾರತದಲ್ಲಿನ ಡಿಫೆನ್ಸ್​ ತಯಾರಿಕೆಯಲ್ಲಿ ಅನಿಮಿಯತ ಸಾಧ್ಯತೆಗಳು ಇವೆ. ಪ್ರತಿಭೆಗಳು ಮತ್ತು ತಂತ್ರಜ್ಞಾನವೂ ಇದೆ. ಸಂಶೋಧನೆ ಮತ್ತು ಮೂಲಸೌಕರ್ಯವೂ ಇದೆ. ಅನುಕೂಲಕರ ನೀತಿಗಳು ಮತ್ತು ವಿದೇಶಿ ಬಂಡವಾಳದ ರಕ್ಷಣೆಯು ನಮ್ಮಲ್ಲಿದೆ ಎಂದು ಹೇಳಿದರು.

    11ನೇ ಆವೃತ್ತಿಯ ಬಹುದೊಡ್ಡ ಡಿಫೆನ್ಸ್​ ಎಕ್ಸ್​ಪೋ ಉತ್ತರ ಪ್ರದೇಶ ರಾಜಧಾನಿ ಲಖನೌದಲ್ಲಿ “ಡಿಫೆನ್ಸ್​ ತಯಾರಿಕ ಹಬ್​ ಆಗಿ ಉದಯಿಸುತ್ತಿರುವ ಭಾರತ” ಎಂಬ ಥೀಮ್​ನೊಂದಿಗೆ ಆರಂಭವಾಗಿದೆ. ಸುಮಾರು 40 ದೇಶಗಳ ಸಚಿವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts