More

    ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ಆಲೂರು, ಯಂಬಳೆ ಗ್ರಾಮಸ್ಥರ ವಿರೋಧ

    ಕಾನಹೊಸಳ್ಳಿ: ಗ್ರಾಪಂ ವ್ಯಾಪ್ತಿಯ ಆಲೂರು ಗ್ರಾಮಸ್ಥರ ವಿರೋಧ ನಡುವೆಯೂ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ಅಧಿಕಾರಿಗಳು ನಿರ್ಧರಿಸಿದ್ದಾರೆ.

    ಅಲೂರಿನ ಹೊರಹೊಲಯ ಯಂಬಳೆ ರಸ್ತೆಯಲ್ಲಿರುವ ಸರ್ಕಾರಿ ಜಾಗದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸಲಾಗುತ್ತಿದೆ. ಇದಕ್ಕೆ ಆಲೂರು ಹಾಗೂ ಯಂಬಳೆ ಗ್ರಾಮದ ರೈತರಿಂದ ವ್ಯಾಪಕ ವಿರೋಧ ವ್ಯಕ್ತವಾಗಿದ್ದರಿಂದ ಗುರುವಾರ ಸಂಜೆ ಆಲೂರಿಗೆ ತಹಸೀಲ್ದಾರ್ ಮಹಾಬಲೇಶ್ವರ ಹಾಗೂ ತಾಪಂ ಇಒ ಜಿ.ಎಂ.ಬಸಣ್ಣ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು. ಬಳಿಕ ಗ್ರಾಮಸ್ಥರ ಮನವೊಲಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಇಲ್ಲಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸಬಾರದು. ಇದೇ ರಸ್ತೆಯಲ್ಲಿ ಯಂಬಳೆ ಹಾಗೂ ಇತರ ಗ್ರಾಮದ ಮಕ್ಕಳು ಶಾಲೆಗೆ ಹೋಗಿ ಬರುತ್ತಾರೆ. ರೈತರು ಪಪ್ಪಾಯ, ದಾಳಿಂಬೆ ತೋಟಗಳಿಗೆ ಹಾಗೂ ಸ್ಥಳೀಯ ಜನರ ಮೇಲೆ ಆರೋಗ್ಯದ ಪ್ರಭಾವ ಬೀರಲಿದೆ. ಆದ್ದರಿಂದ ಸ್ಥಳಾಂತರಿಸಬೇಕು ಎಂದು ರೈತರು ಒತ್ತಾಯಿಸಿದರು.

    ಈ ವೇಳೆ ಮುಖಂಡ ರಾಮಕೃಷ್ಣ ರೆಡ್ಡಿ ಹಾಗೂ ತಹಸೀಲ್ದಾರ್ ನಡುವೆ ವಾಗ್ವಾದ ನಡೆಯಿತು. ಆಲೂರು ಗ್ರಾಮದ ಮುಖಂಡರಾದ ಮಾಲೂರು ಮೂಗಣ್ಣ, ಅಜ್ಜಯ್ಯ, ರಾಜಣ್ಣ, ಕೆ.ತಿಪ್ಪೇಸ್ವಾಮಿ, ಅಡಿವೆಪ್ಪ, ನಾಗಪ್ಪ, ಪರಶುರಾಮ, ಅಜಯ್ ಹಾಗೂ ಯಂಬಳಿ ಗ್ರಾಮದ ರೈತರು ಇದ್ದರು.

    ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ಗುರುತಿಸಿದ ಜಾಗ ಸರ್ಕಾರಕ್ಕೆ ಸೇರಿದ್ದಾರೆ. ಅಲ್ಲದೆ, ಘಟಕದ ನಾಲ್ಕು ದಿಕ್ಕಿನಲ್ಲಿ ಸರ್ಕಾರಿ ಭೂಮಿ ಇದೆ. ಹೀಗಾಗಿ ನಿಗದಿಪಡಿಸಿದ ಜಾಗದಲ್ಲಿ ಘಟಕ ನಿರ್ಮಿಸಲಾಗುವುದು. ಇದಕ್ಕೆ ಗ್ರಾಮದ ಜನರು ವಿರೋಧಿಸುವುದು ಸರಿಯಲ್ಲ.
    | ಮಹಾಬಲೇಶ್ವರ ತಹಸೀಲ್ದಾರ್, ಕೂಡ್ಲಿಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts