More

    ಯೋಧ ಮಲ್ಲಿಕಾರ್ಜುನ ಅಮರ್ ​ರಹೇ

    ಗುತ್ತಲ: ಚಂಡಿಗಢದಲ್ಲಿ ಶುಕ್ರವಾರ ಹೃದಯಾಘಾತದಿಂದ ನಿಧನರಾಗಿದ್ದ ಎಂ.ಜಿ. ತಿಮ್ಮಾಪುರ ಗ್ರಾಮದ ಬಿಎಸ್​ಎಫ್ ಯೋಧ ಮಲ್ಲಿಕಾರ್ಜುನಯ್ಯ(ಕಾರಂತ) ಫಕೀರಯ್ಯ ಸುತ್ತೂರಮಠ (40) ಅವರ ಅಂತ್ಯಕ್ರಿಯೆ ಶನಿವಾರ ಸಂಜೆ ಸ್ವಗ್ರಾಮದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.

    ಮೃತ ದೇಹ ಶನಿವಾರ ಮಧ್ಯಾಹ್ನ 1.20ರ ಸುಮಾರಿಗೆ ಗ್ರಾಮಕ್ಕೆ ತಲುಪಿತು. ಸಾವಿರಾರು ಶಾಲಾ ಮಕ್ಕಳು, ಎಂ.ಜಿ. ತಿಮ್ಮಾಪುರ, ಗುತ್ತಲ, ಹಾವನೂರ, ಚೌಡಯ್ಯದಾನಪುರ, ರಾಜೀವನಗರ, ಕೂರಗುಂದ, ಭರಡಿ, ಕಂಚಾರಗಟ್ಟಿ ಸೇರಿದಂತೆ ವಿವಿಧ ಗ್ರಾಮಗಳ ಸಾವಿರಾರು ಜನರು ಮೆರವಣಿಗೆಯಲ್ಲಿ ಪಾಲ್ಗೊಂಡು ಜಯಘೊಷ ಕೂಗಿದರು.

    ಗುತ್ತಲದವರೆಗೆ ಪಾರ್ಥಿವ ಶರೀರವನ್ನು ಮೆರವಣಿಗೆ ಮೂಲಕ ತಂದು ಬಸ್ ನಿಲ್ದಾಣದ ಬಳಿ ಇರುವ ಎಸ್​ಆರ್​ಎಸ್ ಸರ್ಕಲ್ ವರೆಗೆ ತಂದು ಪುನಃ ಎಂ.ಜಿ. ತಿಮ್ಮಾಪುರ ಗ್ರಾಮಕ್ಕೆ ಕೊಂಡಯ್ಯೊಲಾಯಿತು. ನಂತರ ಸ್ವಗೃಹಕ್ಕೆ ತಂದು ಪೂಜಾ ವಿಧಿವಿಧಾನಗಳನ್ನು ನರೆವೇರಿಸಲಾಯಿತು. ಸಾರ್ವಜನಿಕರು ಅಂತಿಮ ದರ್ಶನ ಪಡೆದರು. ಬಿಎಸ್​ಎಫ್ ಯೋಧರು ಮೃತ ಯೋಧನ ಮನೆಯ ಹತ್ತಿರ ಸಾಂಪ್ರದಾಯಿಕ ಗೌರವ ಸಲ್ಲಿಸಿದರು. ಬಳಿಕ ಮೃತ ದೇಹವನ್ನು ತಿಮ್ಮಾಪುರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ಜಮೀನಿಗೆ ತರಲಾಯಿತು. ಬಿಎಸ್​ಎಫ್ ಯೋಧರು ಗೌರವ ವಂದನೆ ಸಲ್ಲಿಸಿ, ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಅಂತಿಮ ನಮನ ಸಲ್ಲಿಸಿದರು. ಮೃತ ಮಲ್ಲಿಕಾರ್ಜುನಯ್ಯ ಅವರ ಪತ್ನಿ ಗೀತಾ ಅವರಿಗೆ ಇನ್ಸ್​ಪೆಕ್ಟರ್ ಕಾರ್ತಿಕೇಯ ಅವರು ರಾಷ್ಟ್ರ ಧ್ವಜ ಹಸ್ತಾಂತರಿಸಿದರು.

    ನಂತರ ವೀರಶೈವ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿಸಲಾಯಿತು. ಮಾಜಿ ಸಚಿವ ರುದ್ರಪ್ಪ ಲಮಾಣಿ, ಶಾಸಕ ನೆಹರು ಓಲೇಕಾರ, ಜಿಪಂ ಮಾಜಿ ಸದಸ್ಯ ಸಿ.ಬಿ. ಕುರವತ್ತಿಗೌಡರ, ಲಿಂಗನಾಯನಕನಹಳ್ಳಿ ಚನ್ನವೀರ ಸ್ವಾಮೀಜಿ, ಗುಡ್ಡದ ಆನ್ವೇರಿಯ ಶಿವಯೋಗೀಶ್ವರ ಸ್ವಾಮೀಜಿ, ಕಂಪ್ಲಿಯ ಅಭಿನವ ಪ್ರಭುಸ್ವಾಮೀಜಿ, ತಹಸೀಲ್ದಾರ್ ಶಂಕರ ಜಿ.ಎಸ್., ಸಿಪಿಐ ನಾಗಮ್ಮ ಕೆ. ಅವರು ಯೋಧನ ಅಂತಿಮ ದರ್ಶನ ಪಡೆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts