More

    ಕರ್ನಾಟಕಕ್ಕೆ ಪ್ರವೇಶ ಬೇಕೆ? ಇನ್ನೂ 10 ದಿನಗಳವರೆಗೆ ಕಾಯಿರಿ!

    ಬೆಂಗಳೂರು: ವಿವಿಧ ರಾಜ್ಯಗಳಿಂದ ಖಾಸಗಿ ವಾಹನಗಳಲ್ಲಿ ಕರ್ನಾಟಕಕ್ಕೆ ಬರಲು ಬಯಸಿದ್ದೀರಾ? ಹಾಗಾದೆ 10 ದಿನಗಳವರೆಗೆ ನಿಮ್ಮ ಪ್ರಯಾಣವನ್ನು ಮುಂದೂಡುವುದು ಒಳಿತು! ದಿನಕ್ಕೆ ಇಂತಿಷ್ಟೇ ವಾಹನಗಳ ಪ್ರವೇಶಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಕರ್ನಾಟಕ ರಾಜ್ಯ ಅಧಿಕಾರಿಗಳು ನಿರ್ಧರಿಸಿರುವುದು ಇದಕ್ಕೆ ಕಾರಣ.

    ತಮಿಳುನಾಡು, ಕೇರಳ, ಆಂಧ್ರಪ್ರದೇಶ ಮತ್ತು ಉತ್ತರ ಭಾರತದಿಂದ ಕರ್ನಾಟಕದೊಳಗೆ ಪ್ರವೇಶಿಸಲು ಸೇವಾ ಸಿಂಧು ಆ್ಯಪ್​ನಲ್ಲಿ ಹೆಸರು ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿದೆ. ಹೀಗೆ ಹೆಸರು ನೋಂದಾಯಿಸಿಕೊಂಡವರು ಯಾವುದೇ ಅಡೆತಡೆ ಇಲ್ಲದೆ ರಾಜ್ಯವನ್ನು ಪ್ರವೇಶಿಸಬಹುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆದೇಶದಲ್ಲಿ ಹೇಳಲಾಗಿದೆ.

    ಆದರೆ, ಅನ್​ಲಾಕ್​ 1.0 ಆರಂಭವಾಗಿ, ಲಾಕ್​ಡೌನ್​ ಅವಧಿಯಲ್ಲಿದ್ದ ಹಲವು ನಿರ್ಬಂಧಗಳು ಸಡಿಲವಾಗಿರುವ ಕಾರಣ, ವಿವಿಧ ರಾಜ್ಯಗಳಿಂದ ಕರ್ನಾಟಕಕ್ಕೆ ಬರುವವರ ಸಂಖ್ಯೆಯೂ ದಿನೇದಿನೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸೇವಾ ಸಿಂಧು ಆ್ಯಪ್​ನಲ್ಲಿ ಹೆಸರು ನೋಂದಾಯಿಸಿಕೊಂಡಿದ್ದರೂ, ದಿನಕ್ಕೆ ಇಂತಿಷ್ಟು ವಾಹನಗಳಿಗೆ ಮಾತ್ರವೇ ಪ್ರವೇಶ ನೀಡಬೇಕು ಎಂದು ಕೋಟಾ ನಿಗದಿಪಡಿಸಿಕೊಳ್ಳಲಾಗಿರುವ ಕಾರಣ ಹೆಚ್ಚಿನವರು ಗಡಿಭಾಗದ ಹೊರಗೆ ಕನಿಷ್ಠ ಒಂದು ವಾರವಾದರೂ ಕಾಯಬೇಕಾಗುತ್ತದೆ.

    ಇದನ್ನೂ ಓದಿ: ಬಿಜೆಪಿ ನಾಯಕ ಜ್ಯೋತಿರಾದಿತ್ಯ ಸಿಂಧಿಯಾಗೆ ಕರೊನಾ ಸೋಂಕು; ಆಸ್ಪತ್ರೆಗೆ ದಾಖಲು

    ರಾಜ್ಯದ ವಿವಿಧ ಗಡಿ ಭಾಗಗಳಲ್ಲಿರುವ ಚೆಕ್​ಪೋಸ್ಟ್​ಗಳಲ್ಲಿನ ಪ್ರವೇಶಾವಕಾಶದ ಕೋಟಾ ಈಗಾಗಲೆ ಮುಗಿದಿದೆ. ಜೂನ್​ 18ರ ನಂತರವೇ ಹೊಸದಾಗಿ ಅನುಮತಿ ದೊರೆಯಲಿದೆ. ಅಲ್ಲಿಯವರೆಗೂ ದೂರದೂರದ ಪ್ರದೇಶದಿಂದ ಬಂದವರು ಚೆಕ್​ಪೋಸ್ಟ್​ನ ಹೊರಭಾಗದಲ್ಲೇ ನಿಂತು ಪ್ರವೇಶಾವಕಾಶಕ್ಕಾಗಿ ಕಾಯುವುದು ಅನಿವಾರ್ಯವಾಗಿದೆ.

    ಒಂದು ಮೂಲಗಳ ಪ್ರಕಾರ ತಮಿಳುನಾಡು ಹಾಗೂ ಕೇರಳದ ಕೆಲವು ಭಾಗಗಳಿಂದ ಬರುವವರು ಅತ್ತಿಬೆಲೆ ಚೆಕ್​ಪೋಸ್ಟ್​ ಮೂಲಕ ರಾಜ್ಯವನ್ನು ಪ್ರವೇಶಿಸಬೇಕಾಗುತ್ತದೆ. ಸೇವಾ ಸಿಂಧು ಆ್ಯಪ್​ನಲ್ಲಿ ನೋಂದಾಯಿಸಿಕೊಂಡಿದ್ದು, ಈ ಚೆಕ್​ಪೋಸ್ಟ್​ ಮೂಲಕ ರಾಜ್ಯವನ್ನು ಪ್ರವೇಶಿಸುವವರಿಗೆ ಜೂನ್​ 17ವರೆಗಿನ ಕೋಟಾ ಮುಗಿದಿದೆ. ಜೂನ್​ 18ರ ನಂತರದಲ್ಲಿ ಹೊಸದಾಗಿ ಅನುಮತಿ ದೊರೆಯಲಿದೆ.

    ಆಂಧ್ರಪ್ರದೇಶ ಮತ್ತು ಉತ್ತರ ಭಾರತದಿಂದ ರಾಜ್ಯದೊಳಗೆ ಬರಲು ಬಾಗೇಪಲ್ಲಿ ಬಳಿಯ ಚೆಕ್​ಪೋಸ್ಟ್​ ಹಾದುಬರಬೇಕಿದ್ದು, ಈ ಚೆಕ್​ಪೋಸ್ಟ್​ ಮೂಲಕ ಪ್ರವೇಶಿಸುವ ಜೂನ್​ 16ರವರೆಗಿನ ಕೋಟಾ ಮುಗಿದಿದೆ. ಹಾಗಾಗಿ ಜೂನ್​ 17ರ ನಂತರದಲ್ಲೇ ಹೊಸದಾಗಿ ಅನುಮತಿ ದೊರೆಯಲಿದೆ.

    ಪೂರ್ವ ಭಾಗದ ಪ್ರವೇಶದ್ವಾರ ನಂಗಲಿ ಚೆಕ್​ಪೋಸ್ಟ್​ನಲ್ಲಿ ಕೂಡ ಜೂನ್​ 11ರವರೆಗಿನ ಕೋಟಾ ಮುಗಿದಿದ್ದು, ಜೂನ್​ 12ರ ನಂತರದಲ್ಲೇ ಹೊಸದಾಗಿ ಅನುಮತಿ ದೊರೆಯಲಿದೆ. ಇದು ರಾಜ್ಯವನ್ನು ಪ್ರವೇಶಿಸಲಾಗದೆ ಹತಾಶರಾಗಿರುವ ಅನೇಕರನ್ನು ಕೆರಳಿಸಿದೆ. ಆದ್ದರಿಂದ ಅವರೆಲ್ಲರೂ ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಹತಾಶೆಯನ್ನು ಹೊರಹಾಕುತ್ತಿದ್ದಾರೆ. ಆದರೂ ಅಧಿಕಾರಿಗಳು ಮಾತ್ರ ಈ ಬಗ್ಗೆ ಸ್ಪಂದಿಸುತ್ತಿಲ್ಲ ಎನ್ನಲಾಗಿದೆ.

    ಇಲ್ಲೊಮ್ಮೆ ನೋಡಿ… ಕ್ವಾರಂಟೈನ್​ ನಿಯಮ ಬದಲಾಯ್ತು, ಮೊದಲಿನಂತಿಲ್ಲ ಕರೊನಾ ಪರೀಕ್ಷೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts