More

    ಬೀದಿಬದಿಯಲ್ಲೇ ದಿನದೂಡಿದ ಅಲೆಮಾರಿಗಳು

    ಕಿರಣ್ ಮಾದರಹಳ್ಳಿ ಚಾಮರಾಜನಗರ
    ಕರೊನಾ ವೈರಸ್ ಹರಡುವಿಕೆಯನ್ನು ನಿಯಂತ್ರಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಕರೆ ನೀಡಿದ್ದ ಜನತಾ ಕರ್ಯ್ೂ ಬೆಂಬಲಿಸಿ ನಾಗರಿಕರು ಮನೆಯಲ್ಲೇ ಉಳಿದರೆ ಸೂರಿಲ್ಲದ ಬಡಜನರು ಬೀದಿಬದಿಯಲ್ಲೇ ಬದುಕು ಸವೆಸಿದರು.

    ಜನತಾ ಕರ್ಯ್ೂ ೋಷಣೆ ಮಾಡುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾದ ಕೆಲವು ಟೀಕೆಗಳಲ್ಲಿ ನೆಲೆ ಇಲ್ಲದ ನಿರ್ಗತಿಕ ಬಾಲಕನೊಬ್ಬ ಕರ್ಯ್ೂ ದಿನ ಇಲ್ಲದ ಮನೆಯನ್ನು ಎಲ್ಲಿ ಹುಡುಕುತ್ತಾನೆ ಎಂಬ ಸಂಗತಿಯನ್ನು ಬಿಂಬಿಸುವ ಫೋಟೋ ಜಾಲತಾಣಗಳಲ್ಲಿ ಹೆಚ್ಚು ಶೇರ್ ಆಗಿ ನೆಟ್ಟಿಗರ ಹೃದಯ ಕಲಕುವಂತೆ ಮಾಡಿತ್ತು.

    ಇದೇ ಪರಿಸ್ಥಿತಿಯಲ್ಲಿ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಎದುರಿನ ಮಸೀದಿ ರಸ್ತೆಯಲ್ಲಿ ನಿರ್ಗತಿಕ ಕುಟುಂಬವೊಂದು ಬೀದಿಯಲ್ಲೇ ಉಳಿದು ಜನತಾ ಕರ್ಯ್ೂ ಪೂರ್ಣಗೊಳಿಸಿತು. ಕಳೆದ ಹಲವು ದಿನಗಳಿಂದ ನಗರದ ಬೀದಿಬೀದಿ ಅಲೆಯುತ್ತಿರುವ ಮಾನಸಿಕ ಅಸ್ವಸ್ಥರೂ ಇದಕ್ಕೆ ಹೊರತಾಗಿರಲಿಲ್ಲ. ದೇಶದಲ್ಲಿ ಮೂರನೇ ಹಂತಕ್ಕೆ ತಲುಪಿರುವ ಕರೊನಾ ಚೈನ್ ಲಿಂಕ್ ಕಳಚುವಲ್ಲಿ ಇವರನ್ನೂ ಪರಿಗಣಿಸದಿರುವುದು ಬೇಸರದ ಸಂಗತಿ.

    ಬಲೂನ್ ಮಾರಲು ಬಂದವರು..: ಮಂಡ್ಯದಿಂದ ಬಲೂನ್ ಮಾರಾಟ ಮಾಡಲೆಂದು ಜಿಲ್ಲೆಗೆ ಆಗಮಿಸಿದ್ದ 15ಕ್ಕೂ ಹೆಚ್ಚು ಜನರು ಕಳೆದ ಒಂದು ತಿಂಗಳಿನಿಂದ ರಸ್ತೆ ಬದಿಯಲ್ಲೇ ಉಳಿದು ಜೀವನ ನಡೆಸುತ್ತಿದ್ದಾರೆ. ಇವರು ನಗರದ ಮಸೀದಿ ರಸ್ತೆಯ ಖಾಲಿ ನಿವೇಶನವೊಂದರಲ್ಲಿ ಉಳಿದು ಭಾನುವಾರ ಕರೆ ನೀಡಿದ್ದ ಜನತಾ ಕರ್ಯ್ೂ ಅನ್ನು ಬೆಂಬಲಿಸಿದರು.

    ಅಂದಿನ ದುಡಿಮೆ ಅವತ್ತಿನ ಕೂಳಿಗೆ ದಾರಿ ಎನ್ನುವ ಸ್ಥಿತಿಯಲ್ಲಿರುವ ಬಡಜನರು ಕರ್ಯ್ೂ ಪರಿಣಾಮ ವ್ಯಾಪಾರಕ್ಕೆ ಹೋಗದೆ ಇರುವಲ್ಲಿಯೇ ಉಳಿದರು. ಐವರು ಮಹಿಳೆಯರು, ನಾಲ್ವರು ಪುರುಷರು, ಸಣ್ಣಮಕ್ಕಳು ಸೇರಿದಂತೆ ಎಲ್ಲರೂ ಕರೊನಾ ರೋಗ ಹರಡುತ್ತಿದೆಯಂತೆ, ನಾವು ಇವತ್ತು ಎಲ್ಲೂ ಹೋಗಲ್ಲ. ಇಲ್ಲಿ ಬಿಸಿಲು ಹೆಚ್ಚಾಗಿರುವುದರಿಂದ ನಮ್ಮ ಜತೆ ಇರುವ ಬಾಣಂತಿ ಮತ್ತು ಮಗುವನ್ನು ಅಂಗಡಿ ಮಳಿಗೆಯೊಂದರ ಬಳಿ ಇರಿಸಿದ್ದೇವೆ ಎಂದು ಈ ಕುಟುಂಬದ ಸದಸ್ಯ ಸುರೇಶ್ ತಿಳಿಸಿದರು.

    ಹೊಟ್ಟೆ ಮೇಲೆ ತಣ್ಣೀರ ಬಟ್ಟೆ: ನಗರದಲ್ಲಿ ಹೋಟೆಲ್ ಮತ್ತು ಅಂಗಡಿಗಳು ಬಂದ್ ಆಗಿದ್ದರಿಂದ ಈ ಬಡಕುಟುಂಬದ ಹೊಟ್ಟೆ ಮೇಲೆ ತಣ್ಣೀರ ಬಟ್ಟೆ ಬಿದ್ದಿದೆ. ಉಪಾಹಾರ ಸೇವನೆಗಾಗಿ ಹೋಟೆಲ್‌ಗಳನ್ನು ಹುಡುಕಿದ ಇವರು ಕೊನೆಗೆ ಎಲ್ಲೂ ಊಟ ಸಿಗದೆ ಕುಟುಂಬದ ಮಹಿಳಾ ಸದಸ್ಯೆಯನ್ನು ಮನೆಗಳಿಗೆ ಭಿಕ್ಷೆಗೆ ಕಳುಹಿಸಿದ್ದಾರೆ. ಇಷ್ಟು ದಿನ ಕಿಸೆಯಲ್ಲಿ ಹಣವಿಲ್ಲದೆ ಊಟಕ್ಕಾಗಿ ಒದ್ದಾಡುತ್ತಿದ್ದೆವು. ಇಂದು ಹಣವಿದ್ದರೂ ಊಟ ಸಿಗಲಿಲ್ಲ. ನಗರದಲ್ಲಿ ಈ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಮೊದಲೇ ಗೊತ್ತಾಗಿದ್ದರೆ ನಮ್ಮ ಊರಿಗೆ ಹೋಗುತ್ತಿದ್ದೆವು. ಇವತ್ತು ಬಸ್, ರೈಲು ಇಲ್ಲವಂತೆ ಎಂದು ಸುರೇಶ್ ಪತ್ನಿ ಮೀನಾ ಬೇಸರ ವ್ಯಕ್ತಪಡಿಸಿದರು.

    ಆದಾಯಕ್ಕೆ ಬರೆ ಎಳೆದ ಕರೊನಾ: ಕರೊನಾ ಹರಡದಂತೆ ಮುನ್ನೆಚ್ಚರಿಕೆ ವಹಿಸಲು ಎಲ್ಲೆಡೆ ಹಬ್ಬ, ಜಾತ್ರೆ, ಧಾರ್ಮಿಕ ಕಾರ್ಯಕ್ರಮ, ಸಭೆ, ಸಮಾರಂಭಗಳಿಗೆ ನಿರ್ಬಂಧ ಮತ್ತು ದೇವಸ್ಥಾನಗಳಿಗೆ ಸಾರ್ವಜನಿಕರ ಪ್ರವೇಶ ನಿಷೇಧಿಸಿರುವುದರಿಂದ ಬಲೂನ್ ವ್ಯಾಪಾರಿಗಳಿಗೂ ಹೊಡೆತ ಬಿದ್ದಿದೆ.

    ಮಕ್ಕಳು ಆಟವಾಡುವ ಸಾಮಗ್ರಿಗಳನ್ನು ಮಾರಾಟ ಮಾಡಿ ಬಿಡಿಗಾಸು ನೋಡುವ ಕೈಗಳಿಗೆ ಕೆಲಸವಿಲ್ಲದಂತಾಗಿದೆ. ರಾಜ್ಯದಲ್ಲೇ ಪ್ರಸಿದ್ಧ ಯಾತ್ರಾ ಸ್ಥಳಗಳು ಮತ್ತು ಪ್ರವಾಸಿ ತಾಣಗಳನ್ನು ಹೊಂದಿರುವ ಚಾಮರಾಜನಗರ ಜಿಲ್ಲೆಯಲ್ಲಿ ಉತ್ತಮವಾಗಿ ವ್ಯಾಪಾರವಾಗುತ್ತದೆ ಎಂದು ನಿರೀಕ್ಷಿಸಿ ಬಲೂನ್ ಮಾರಾಟ ಮಾಡುವವರು ಕುಟುಂಬ ಸಮೇತ ಆಗಮಿಸುತ್ತಾರೆ. ಆದರೆ ಈ ಬಾರಿ ರಾಜ್ಯವನ್ನು ವ್ಯಾಪಿಸುತ್ತಿರುವ ಕರೊನಾ ಬಡಜನರ ಆದಾಯದ ಮೇಲೂ ಬರೆ ಎಳೆದಿದೆ.

    ಕರೊನಾ ಭಯಕ್ಕೆ ಮದುವೆಗಳನ್ನೂ ಮುಂದೂಡುವುದು, ಹೆಚ್ಚು ಜನರು ಸೇರದಂತೆ ಮದುವೆ ಮಾಡಲಾಗುತ್ತಿದೆ. ಇಲ್ಲಿಗೆ ಊಟದ ಎಲೆಗಳನ್ನು ಎತ್ತಲು ಕೆಲಸ ಕೇಳಿ ಹೋದರೆ ಮೊದಲಿನಂತೆ ಹೆಚ್ಚು ಜನರಿಗೆ ಕೆಲಸ ಸಿಗುತ್ತಿಲ್ಲ. ಅಡುಗೆಯನ್ನೂ ಮಿತವಾಗಿ ಮಾಡಿಸುತ್ತಿದ್ದಾರೆ ಎನ್ನುವ ಬಲೂನ್ ಮಾರಾಟಗಾರರ ಮಾತುಗಳು ಕರುಣೆ ಹುಟ್ಟಿಸುತ್ತದೆ.

    ಚೌಕಬಾರಾ ಆಡಿದರು: ಭಾನುವಾರ ಬೆಳಗ್ಗೆ 7ರಿಂದ ರಾತ್ರಿ9 ಗಂಟೆಯವರೆಗೂ ಸಾರ್ವಜನಿಕರು ಸ್ವಯಂ ಕರ್ಯ್ೂ ಹಾಕಿಕೊಂಡು ಮನೆಯಲ್ಲೇ ಉಳಿದರು. ಚಪ್ಪಾಳೆ, ಚೆಸ್, ಕ್ರ್‌ಟಾ ಮೇಕಿಂಗ್, ಕೇರಂ ಆಡಿ ಈ ಸಮಯವನ್ನು ಜನರು ಕಳೆದಂತೆ ಬೀದಿ ಬದಿಯಲ್ಲೇ ಉಳಿದ ಬಲೂನ್ ವ್ಯಾಪಾರಿಗಳು ಚೌಕಬಾರಾ ಆಡಿ ದಿನ ಕಳೆದರು.


    ಕರೊನಾ ವೈರಸ್ ಹಬ್ಬದಿರಲು ಜಾತ್ರೆ ಮಾಡುತ್ತಿಲ್ಲ. ದೇವಸ್ಥಾನಗಳ ಬಾಗಿಲು ಮುಚ್ಚಲಾಗಿದೆ ಎಂಬ ವಿಷಯ ತಿಳಿಯಿತು. ಆದರೆ ಜನತಾ ಕರ್ಯ್ೂ ಇದೆ ಅಂತ ಗೊತ್ತಿರಲಿಲ್ಲ. ನಾವು ಪ್ರತಿದಿನ ಬೀದಿಬದಿ ಮಲಗುವ ಸ್ಥಳದಲ್ಲೇ ಕರ್ಯ್ೂ ದಿನವನ್ನೂ ಕಳೆದೆವು.
    ನಾಗರಾಜು, ಬಲೂನ್ ವ್ಯಾಪಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts