More

    ಧರ್ಮ ಅಧರ್ಮದ ಸಂಘರ್ಷದಲ್ಲಿ ಧರ್ಮಕ್ಕೆ ಜಯ

    ಧಾರವಾಡ: ವಾಲ್ಮೀಕಿ ರಚಿತ ರಾಮಾಯಣ ಇಂದಿಗೂ ಪ್ರಸ್ತುತ. ಇದೊಂದು ಆದರ್ಶ ಜೀವನದ ನೀತಿ ಬೋಽಸುವ ಗ್ರಂಥ. ಧರ್ಮ- ಅಧರ್ಮ ಸತ್ಯ- ಅಸತ್ಯ, ಒಳಿತು ಕೆಡಕುಗಳ ನಡುವಿನ ವ್ಯತ್ಯಾಸವನ್ನು ಅರ್ಥೈಸುವ ಮಹಾಕಾವ್ಯ. ಹೀಗಾಗಿ ವಾಲ್ಮೀಕಿ ಅವರು ಸದಾ ಪ್ರಾತಃಸ್ಮರಣೀಯರು ಎಂದು ಜೆ.ಎಸ್.ಎಸ್ ಸಂಸ್ಥೆಯ ಕಾರ್ಯದರ್ಶಿ ಡಾ. ಅಜಿತ ಪ್ರಸಾದ್ ಹೇಳಿದರು.
    ನಗರದ ವಿದ್ಯಾಗಿರಿ ಜೆಎಸ್‌ಎಸ್ ಸಂಸ್ಥೆಯ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯಲ್ಲಿ ಶನಿವಾರ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
    ರಾಮಾಯಣದಲ್ಲಿ ಬರುವ ಪ್ರತಿಯೊಂದು ಪಾತ್ರವೂ ನೀತಿಯನ್ನು ಬೋಽಸುತ್ತದೆ. ಸುಳ್ಳಿಗೆ ಪ್ರಾರಂಭದಲ್ಲಿ ಮೇಲುಗೈಯಾದರೂ ಕೊನೆಗೆ ಸತ್ಯವೇ ಜಯಿಸುವುದು ಎಂಬುದು ರಾಮಾಯಣದ ತಾತ್ಪರ್ಯ ಎಂದರು.
    ಡಾ. ಸೂರಜ್ ಜೈನ್, ಮಹಾವೀರ ಉಪಾಧ್ಯೆ, ವಿ.ಕೆ. ಭರಣಿ ಹಾಗೂ ಸಿಬ್ಬಂದಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts