More

    ಸರ್ವೀಸ್ ರಸ್ತೆ ನಿರ್ಮಾಣಕ್ಕೆ ರೈತರ ಆಗ್ರಹ

    ವಡಗೇರಾ: ತಾಲೂಕಿನ ಬಿಳ್ಹಾರ ಗ್ರಾಮದ ಬಳಿ ನಡೆಯುತ್ತಿರುವ ಚನ್ನೈ-ಸೂರತ್ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಜತೆಗೆ ಸರ್ವಿಸ್ ರಸ್ತೆ ನಿರ್ಮಿಸಬೇಕು ಎಂದು ಒತ್ತಾಯಿಸಿ ರೈತರು ಹೆದ್ದಾರಿ ಕಾಮಗಾರಿ ತಡೆದ ಸೋಮವಾರ ಪ್ರತಿಭಟನೆ ನಡೆಸಿದರು.

    ಕಾಮಗಾರಿ ನಿರ್ಮಾಣ ಹಂತದಲ್ಲಿರುವ ರಸ್ತೆಯಲ್ಲಿಯೇ ರೈತರು ಟೆಂಟ್ ಹಾಕಿ ಪ್ರತಿಭಟನೆಗೆ ಮುಂದಾಗಿದ್ದು, ಈಗ ನೀವು ಹೆದ್ದಾರಿ ಕಾಮಗಾರಿ ಮುಗಿಸಿಕೊಂಡು ಹೋಗುತ್ತೀರಿ ಆಮೇಲೆ ನಾವು ಸರ್ವೀಸ್ ರಸ್ತೆ ಇಲ್ಲದೆ ನಮ್ಮ ಹೊಲಗಳಿಗೆ ಹೇಗೆ ಹೋಗಬೇಕು. ಹೀಗಾಗಿ ಹೆದ್ದಾರಿ ಜತೆಯಲ್ಲಿಯೇ ಸರ್ವೀಸ್​ ರಸ್ತೆ ಕೂಡ ನಿರ್ಮಿಸಬೇಕು ಎಂದು ಒತ್ತಾಯಿಸಿದರು.

    ಭಾನುವಾರದಿಂದ ೧೫೦ಕ್ಕೂ ಹೆಚ್ಚು ರೈತರು ಸ್ಥಳದಲ್ಲೇ ಅಡುಗೆ ಮಾಡಿ ಪ್ರತಿಭಟನೆ ಮಾಡುತ್ತಿದ್ದರೂ ಸಂಬಂಧಿಸಿದ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸ್ಥಳಕ್ಕೆ ಬಾರದೆ ನಮ್ಮ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.

    ಈಗಾಗಲೇ ಲಕ್ಷಗಟ್ಟಲೇ ಬೆಲೆ ಬಾಳುವ ಜಮೀನು ಕೇವಲ ೫ರಿಂದ ೬ ಲಕ್ಷಕ್ಕಿಂತ ಕಡಿಮೆ ಬೆಲೆಗೆ ರಾಷ್ಟ್ರೀಯ ಹೆದ್ದಾರಿಗೆ ಕೊಟ್ಟಿದ್ದೇವೆ. ಉಳಿದ ಜಮೀನಿಗೆ ಹೋಗಬೇಕಾದರೆ ಸರ್ವೀಸ್ ರಸ್ತೆ ಇಲ್ಲ. ಈ ರಸ್ತೆ ನಿರ್ಮಾಣ ಮಾಡುವವರೆಗೆ ಪ್ರತಿಭಟನೆ ಕೈ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

    ಮಲ್ಹಾರಗೌಡ ಬಿಳ್ಹಾರ, ಸಿದ್ದೇಶ, ವಿಶ್ವನಾಥರೆಡ್ಡಿ, ಮಹಿಬೂಬ್ ಸಾಬ್, ಮಲ್ಲಿಕಾರ್ಜುನ ರೆಡ್ಡಿ, ಅಯ್ಯಪ್ಪ ಕವಡಿ, ಚನ್ನಯ್ಯಸ್ವಾಮಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts