More

    ಬಸ್ ಕಾಣದ ಹಳ್ಳಿಗೆ ಸಾರಿಗೆ ವ್ಯವಸ್ಥೆ

    ವಡಗೇರಾ: ಗ್ರಾಮೀಣ ಜನರ ಮತ್ತು ಶಾಲಾ ಮಕ್ಕಳ ಅನುಕೂಲಕ್ಕೆ ತಕ್ಕಂತೆ ಸಾರಿಗೆ ಸೇವೆ ಒದಗಿಸುವುದರ ಜತೆಗೆ ಬಸ್ ಕಾಣದ ಹಳ್ಳಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ ಹೇಳಿದರು.

    ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ಶುಕ್ರವಾರ ನೂತನ ಮಾರ್ಗವಾಗಿ ವಡಗೇರಾದಿಂದ ಸುರಪುರ ಮತ್ತು ಶಹಾಪುರಗೆ ಪ್ರಯಾಣಿಸುವ ಬಸ್‌ಗೆ ಚಾಲನೆ ನೀಡಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶಕ್ಕೆ ಸಾರಿಗೆ ಸೌಲಭ್ಯ ಒದಗಿಸಿದರೆ ಶಾಲಾ ಮಕ್ಕಳಿಗೆ ಮತ್ತು ಜನಸಾಮಾನ್ಯರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.

    ಈ ಬಸ್ ವಡಗೇರಾದಿಂದ ಕಂಟಿತಾಂಡಾ, ಗೊಂದೆನೂರ, ಅನಕಸೂಗೂರ, ಐಕೂರ, ಹೈಯಾಳ, ಬೀರನೂರ ಮಾರ್ಗವಾಗಿ ಸುರಪುರ ತಲುಪಲಿದೆ. ಅದೇ ರೀತಿ ಶಹಾಪುರಗೆ ತೆರಳುವ ಬಸ್ ಗೊಂದೆನೂರ ಕ್ರಾಸ್, ಹೈಯಾಳ, ಹತ್ತಿಗೂಡೂರ ಮಾರ್ಗವಾಗಿ ಚಲಿಸಲಿದ್ದು, ಸಾರ್ವಜನಿಕರು ಇವುಗಳ ಲಾಭ ಪಡೆದುಕೊಳ್ಳಬೇಕು ಎಂದು ಹೇಳಿದರು.

    ಗ್ರಾಪಂ ಅಧ್ಯಕ್ಷ ಅಶೋಕ ಸಾಹು ಕರಣಗಿ, ವಿಭಾಗೀಯ ನಿಯಂತ್ರಣಾಧಿಕಾರಿ ಸುನೀಲ್‌ಕುಮಾರ ಚಂದ್ರಗಿ, ವಿಭಾಗೀಯ ಸಂಚಾರ ಅಧಿಕಾರಿ ಎಂ.ಎಸ್. ಹಿರೇಮಠ, ಪ್ರಶಾಂತ ಸುರಪುರ, ಸಾಯಿಬಣ್ಣ, ರವಿಶಂಕರ, ಮುಖಂಡರಾದ ಸಂಗುಗೌಡ ಮಾಲಿ ಪಾಟೀಲ್, ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮರೆಪ್ಪ ಬಿಳ್ಹಾರ, ನಿಂಗಣ್ಣಗೌಡ ಬೋರಡ್ಡಿ, ಭಾಷುಮೀಯಾ ನಾಯ್ಕೋಡಿ, ಶರಣು ಇಟಗಿ, ಮೈನೋದ್ದೀನ್ ದೇವದುರ್ಗ, ಶಿವರಾಜ ಬಾಗೂರ, ಬಸನಗೌಡ ಜಡಿ, ಶರಣು ಕುರಿ, ಮಲ್ಲಪ್ಪ ಮಾಗನೂರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts