More

    ವಿಆರ್‌ಎಲ್ ಮೀಡಿಯಾಕ್ಕೆ ಪ್ರಶಸ್ತಿಗಳ ಗರಿ

    ಹುಬ್ಬಳ್ಳಿ: ಧಾರವಾಡ ಜಿಲ್ಲೆ ವ್ಯಾಪ್ತಿಯಲ್ಲಿನ ಪತ್ರಕರ್ತರಿಗೆ ಪ್ರೋತ್ಸಾಹಿಸುವ ಉದ್ದೇಶದಿಂದ ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ 2019-20ನೇ ಸಾಲಿನಲ್ಲಿ ದಿನಪತ್ರಿಕೆಗಳಲ್ಲಿ ಪ್ರಕಟವಾದ ಹಾಗೂ ಟಿ.ವಿ. ವಾಹಿನಿಗಳಲ್ಲಿ ಬಿತ್ತರಗೊಂಡ ಉತ್ತಮ ವರದಿ, ಲೇಖನ ಛಾಯಾಚಿತ್ರ ಹಾಗೂ ವಿಡಿಯೋಗಳಿಗೆ ನೀಡುವ ಪ್ರಶಸ್ತಿಗೆ ವಿಆರ್‌ಎಲ್ ಮೀಡಿಯಾದ ನಾಲ್ವರು ಪತ್ರಕರ್ತರು ಆಯ್ಕೆಯಾಗಿದ್ದಾರೆ.

    ‘ವಿಜಯವಾಣಿ’ ಪತ್ರಿಕೆಯ ಹಿರಿಯ ಉಪಸಂಪಾದಕ ನಾಗರಾಜ ಹೆಗಡೆ ಮತ್ತಿಗಾರ ಅವರು ದಿ. ಕಷ್ಣಾಚಾರ್ಯ ರಾಘವಾಚಾರ್ಯ ಗಂಡಮಾಲಿ (ಮಾಮಾ) ಅತ್ಯುತ್ತಮ ಲೇಖನ ಪ್ರಶಸ್ತಿಗೆ, ಛಾಯಾಗ್ರಾಹಕ ಗುರು ಭಾಂಡಗೆ ಅವರು ಎಂ.ಡಿ.ಗೊಗೇರಿ ಅತ್ಯುತ್ತಮ ಛಾಯಾಗ್ರಹಣ ಪ್ರಶಸ್ತಿಗೆ, ‘ದಿಗ್ವಿಜಯ’ ಸುದ್ದಿ ವಾಹಿನಿಯ ವರದಿಗಾರ ಹರ್ಷ ಕುಲಕರ್ಣಿ ಹಾಗೂ ಕ್ಯಾಮರಾಮನ್ ವಿನಾಯಕ ಪೂಜಾರಿ ಅವರು ವಸಂತ ಹೊರಟ್ಟಿ (ಆಕ್ಸ್‌ರ್ಡ್ ಕಾಲೇಜ್) ಅತ್ಯುತ್ತಮ ಟಿವಿ ವರದಿಗಾರಿಕೆ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

    ಇನ್ನುಳಿದಂತೆ ಶ್ರೀಮತಿ ಕಮಲವ್ವ ಸೋಮಶೇಖರಪ್ಪ ಬುರ್ಲಬಡ್ಡಿ ಅತ್ಯುತ್ತಮ ನಗರ ವರದಿಗಾರಿಕೆ ಪ್ರಶಸ್ತಿಗೆ ಸಂಯುಕ್ತ ಕರ್ನಾಟಕದ ಪ್ರಧಾನ ವರದಿಗಾರ ಪ್ರಕಾಶ ಶೇಟ್, ಶ್ರೀಮತಿ ಮುರಿಗೆಮ್ಮ ಬಸಪ್ಪ ಹೂಗಾರ ಅತ್ಯುತ್ತಮ ನಗರ ವರದಿಗಾರಿಕೆ ಪ್ರಶಸ್ತಿಗೆ ಪ್ರಜಾವಾಣಿಯ ಹಿರಿಯ ವರದಿಗಾರಳಾದ ಕೃಷ್ಣಿ ಶಿರೂರ, ಜೀತೇಂದ್ರ ದಯಾಳಜಿ ಮಜೇಥಿಯಾ ಅತ್ಯುತ್ತಮ ಗ್ರಾಮೀಣ ವರದಿಗಾರಿಕೆ ಪ್ರಶಸ್ತಿಗೆ ಕಲಘಟಗಿ ಉದಯವಾಣಿಯ ವರದಿಗಾರ ಪ್ರಭಾಕರ ನಾಯಕ, ಸುಲೇಮಾನ್ ಅಬ್ದುಲ್ ಅಜೀಜಸಾಬ ಮುನವಳ್ಳಿ (ಪೊಲೀಸ್ ಇಲಾಖೆ) ಅತ್ಯುತ್ತಮ ಲೇಖನ ಪ್ರಶಸ್ತಿಗೆ ಪ್ರಜಾವಾಣಿಯ ವರದಿಗಾರ ಪ್ರಮೋದ ಕೆ., ಡಾ. ಬಿ.ಎ್. ದಂಡಿನ್ ಅತ್ಯುತ್ತಮ ಪುಟವಿನ್ಯಾಸ ಪ್ರಶಸ್ತಿಗೆ ಸಂಯುಕ್ತ ಕರ್ನಾಟಕದ ಪುಟ ವಿನ್ಯಾಸಕ ಮಂಜುನಾಥ ಹೂಗಾರ, ದಿ. ಅಣ್ಣಪ್ಪ ಶೆಟ್ಟಿ ಅತ್ಯುತ್ತಮ ಟಿವಿ ವರದಿಗಾರಿಕೆ ಪ್ರಶಸ್ತಿಗೆ ಪಬ್ಲಿಕ್ ಟಿವಿಯ ವರದಿಗಾರ ನವೀನ ಪರದೇಶಿ ಹಾಗೂ ಕ್ಯಾಮರಾಮನ್ ನಾರಾಯಣಗೌಡ ಆಯ್ಕೆಯಾಗಿದ್ದಾರೆ.

    ಪ್ರಶಸ್ತಿಯು ತಲಾ 5 ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಪತ್ರ ಅಲ್ಲದೆ,ಇಲೆಕ್ಟ್ರಾನಿಕ್ ಮಾಧ್ಯಮದವರಿಗೆ ಪ್ರಶಸ್ತಿಯು (ವರದಿಗಾರ ಹಾಗೂ ಕ್ಯಾಮರಾಮನ್ ಇಬ್ಬರಿಗೂ ಸೇರಿ) 10 ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿರುತ್ತದೆ.

    ಪ್ರಶಸ್ತಿ ಆಯ್ಕೆ ಸಮಿತಿಯು ರಾಜ್ಯ ಕಾರ್ಯಕಾರಿಣಿ ಸದಸ್ಯ ಬಸವರಾಜ ಬಿಜಾಪೂರ ಅಧ್ಯಕ್ಷತೆಯಲ್ಲಿ ಜಗದೀಶ ಬುರ್ಲಬಡ್ಡಿ, ತನುಜಾ ನಾಯ್ಕ, ಕಷ್ಣಾ ದಿವಾಕರ, ಮಧುಕರ ಭಟ್ಟ, ಮೆಹಬೂಬ ಮುನವಳ್ಳಿ, ಪ್ರಕಾಶ ನೂಲ್ವಿ ಹಾಗೂ ಮಂಜುನಾಥ ಜರತಾರಘರ ಅವರನ್ನೊಳಗೊಂಡಿತ್ತು.

    ತಿಂಗಳಾಂತ್ಯಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ ಎಲ್ಲರಿಗೂ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಧಾನ ಕಾರ್ಯದರ್ಶಿ ಸುಶೀಲೇಂದ್ರ ಕುಂದರಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts