More

    ಲೋಕಸಭೆ ಚುನಾವಣೆ 2024: ಅಖಾಡದಲ್ಲಿ ಅಭ್ಯರ್ಥಿಗಳ ಮತ ಪರೀಕ್ಷೆ!

    ವಿಜಯವಾಣಿ ಸುದ್ದಿಜಾಲ ಬೆಂಗಳೂರು

    ರಾಜ್ಯದ 2ನೇ ಹಂತದ ಲೋಕಸಭಾ ಚುನಾವಣೆಗೆ ಮಂಗಳವಾರ ಮತದಾನ ನಡೆಯಲಿದೆ. ಮಾಜಿ ಸಿಎಂ ಜಗದೀಶ ಶೆಟ್ಟರ್, ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸೇರಿ ಘಟಾನುಘಟಿಗಳು ಸ್ಪರ್ಧಿಸಿರುವ ರಣಕಣದಲ್ಲಿ 2.59 ಕೋಟಿ ಮತದಾರರು ಮತ ಚಲಾಯಿಸುವ ಹಕ್ಕು ಪಡೆದಿದ್ದಾರೆ.

    ಕಾಂಗ್ರೆಸ್, ಬಿಜೆಪಿ ಎಲ್ಲ ಕ್ಷೇತ್ರಗಳಲ್ಲೂ ಸ್ಪರ್ಧಿಸಿದ್ದರೆ, ಬಿಎಸ್​ಪಿ 9, ನೋಂದಾಯಿತ ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳು 23, ಸ್ವತಂತ್ರ ಅಭ್ಯರ್ಥಿಗಳು 117 ಸೇರಿ 227 ಅಭ್ಯರ್ಥಿಗಳು ಸ್ಪರ್ಧೆಗಿಳಿದಿದ್ದಾರೆ. ಇದರಲ್ಲಿ 206 ಪುರುಷ, 21 ಮಹಿಳಾ ಅಭ್ಯರ್ಥಿಗಳಿದ್ದಾರೆ. ಈ ಕ್ಷೇತ್ರಗಳಲ್ಲಿ 2,59,52,958 ಮತದಾರರಿದ್ದು, 1,29,48,978 ಪುರುಷ, 1,29,64,570 ಮಹಿಳಾ ಹಾಗೂ 1,945 ತೃತೀಯ ಲಿಂಗಿ ಮತದಾರರು ಇದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಅತೀ ಕಡಿಮೆ 16,41,156 ಮತದಾರರಿದ್ದರೆ, ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ಅತೀ ಹೆಚ್ಚು 20,98,202 ಮತದಾರರಿದ್ದಾರೆ. ಸೂಕ್ಷ್ಮ ಮತಗಟ್ಟೆಗಳಿಗೆ ಒಬ್ಬರು ಮುಖ್ಯಪೇದೆ ಹಾಗೂ ಒಬ್ಬರು ಪೇದೆ ನಿಯೋಜಿಸಲಾಗಿದೆ. ಸಾಮಾನ್ಯ ಮತಗಟ್ಟೆಗೆ ಒಬ್ಬರು ಪೇದೆ ನಿಯೋಜಿಸಲಾಗಿದ್ದು, ಮತಗಟ್ಟೆಗಳ ಸಮೂಹ ಇರುವೆಡೆ ಕೇಂದ್ರದ ಪಡೆಗಳನ್ನು ನಿಯುಕ್ತಿಗೊಳಿಸಲಾಗಿದೆ. 28,269 ಮತಗಟ್ಟೆ ಸ್ಥಾಪಿಸಿದ್ದು, 40 ಸಾವಿರ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ.

    ಪರ್ಯಾಯ ಗುರುತಿನ ಚೀಟಿ: ಚುನಾವಣಾ ಆಯೋಗದಿಂದ ನೀಡಲಾಗಿರುವ ವೋಟರ್ ಸ್ಲಿಪ್​ನ ಜತೆಗೆ ಮತದಾರರ ಗುರುತಿನ ಚೀಟಿ, ಆಧಾರ್​ಕಾರ್ಡ್, ನರೇಗಾ ಜಾಬ್​ಕಾರ್ಡ್, ಬ್ಯಾಂಕ್, ಪೋಸ್ಟ್ ಆಫೀಸ್ ಪಾಸ್​ಬುಕ್, ಆರೋಗ್ಯ ವಿಮಾ ಸ್ಮಾರ್ಟ್​ಕಾರ್ಡ್, ಡಿಎಲ್, ಪ್ಯಾನ್​ಕಾರ್ಡ್, ಪಾಸ್​ಪೋರ್ಟ್, ಪಿಂಚಣಿ ದಾಖಲೆ, ರಾಜ್ಯಸರ್ಕಾರ, ಸಾರ್ವಜನಿಕ ಸಂಸ್ಥೆಗಳು, ಪಬ್ಲಿಕ್ ಲಿಮಿಟೆಡ್ ಕಂಪನಿಗಳು ಉದೊ್ಯೕಗಿಗಳಿಗೆ ನೀಡಿದ ಭಾವಚಿತ್ರವಿರುವ ಸೇವಾ ಗುರುತಿನ ಚೀಟಿಗಳು, ಎಂಪಿ, ಎಂಎಲ್​ಎ, ಎಂಎಲ್​ಸಿಗಳಿಗೆ ನೀಡಿರುವ ಅಧಿಕೃತ ಗುರುತಿನ ಚೀಟಿ, ವಿಶಿಷ್ಟ ಅಂಗವಿಕಲ ಗುರುತಿನ ಚೀಟಿ ತೋರಿಸಿ ಮತ ಚಲಾಯಿಸಬಹುದಾಗಿದೆ.

    ಭರಪೂರ ಸೌಲಭ್ಯ: ಮತಗಟ್ಟೆಗಳಲ್ಲಿ ಮತದಾರಸ್ನೇಹಿ ಸೌಲಭ್ಯ ಕಲ್ಪಿಸಲಾಗಿದೆ. ಕುಡಿಯುವ ನೀರು, ನೆರಳು, ಜ್ಯೂಸ್, ಕುಳಿತುಕೊಳ್ಳಲು ಕುರ್ಚಿ, ಫ್ಯಾನ್, ಅಂಗವಿಕಲರಿಗೆ ವಿಶೇಷ ಸವಲತ್ತು ಕಲ್ಪಿಸಲಾಗಿದೆ. ಸಖಿ ಮತಗಟ್ಟೆ ಸೇರಿ ವಿಶೇಷ ಜನಾಕರ್ಷಕ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಶುಶ್ರೂಷಕರು, ಆಶಾ ಕಾರ್ಯಕರ್ತೆಯರೊಂದಿಗೆ ಒಆರ್​ಎಸ್ ಸೇರಿ ಇತರ ವೈದ್ಯಕೀಯ ಕಿಟ್ ವ್ಯವಸ್ಥೆ ಮಾಡಲಾಗಿದೆ.

    ಮಹಿಳೆಯರೇ ನಿರ್ವಹಣೆ: 560 ಮತಗಟ್ಟೆಗಳನ್ನು ಮಹಿಳೆಯರೇ ನಿರ್ವಹಿಸ ಲಿದ್ದು, 112 ಮತಗಟ್ಟೆಗಳನ್ನು ಅಂಗವಿಕಲರು ನಿರ್ವಹಿಸುತ್ತಾರೆ. ಇತರ ವಿವಿಧ ವಿಷಯಗಳ 224 ಮಾದ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಸ್ಥಳೀಯ ಸಂಸ್ಕೃತಿ ಸಂಪ್ರದಾಯ ಬಿಂಬಿಸುವಂತೆ ಅಲಂಕರಿಸಲಾಗಿದೆ.

    ವೋಟರ್ ಲಿಸ್ಟ್​ನಲ್ಲಿ ಹೆಸರು ಹುಡುಕಬೇಕೆ?

    . ಓಟರ್ ಹೆಲ್ಪ್​ಲೈನ್ ಆಪ್ ಬಳಸಿ

    .voters.eci.gov.in/ceo.
    karnataka.gov.in

    1950ಗೆ ಸಂದೇಶ ಕಳಿಸಿ. ECI<space><EPIC No>

    ನಿಮ್ಮ ಮತಗಟ್ಟೆಯನ್ನು ಇಲ್ಲಿ ಹುಡುಕಿ

    . voters.eci.gov.in

    . ಮತದಾರರ ಸಹಾಯವಾಣಿ-1950

    . lvoter Helpline App

    ಪ್ರಜ್ವಲ್‌ ರೇವಣ್ಣ ಬಗ್ಗೆ ಸಹನೆ ತೋರಬೇಕಾಗಿಲ್ಲ: ಕಾಂಗ್ರೆಸ್‌ನ ನಡೆಯನ್ನು ಪ್ರಶ್ನಿಸಿದ ಪ್ರಧಾನಿ ಮೋದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts