More

    ಲೋಕ ಸಮರದಲ್ಲಿ ಮತಯಾಚನೆ, ಸಪ್ಪೆ ಸಪ್ಪೆ ಚುನಾವಣಾ ಪ್ರಚಾರ

    ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಕ್ಷೇತ್ರದ ಲೋಕ ಸಮರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯ ಅಬ್ಬರ ಚುನಾವಣಾ ಪ್ರಚಾರದ ನಡುವೆ ಇತರ ಅಭ್ಯರ್ಥಿಗಳು ಅವರವರ ಸಾಮರ್ಥ್ಯಕ್ಕೆ ಅನುಗುಣವಾಗಿ ಮತಬೇಟೆಯಲ್ಲಿ ತೊಡಗಿದ್ದು ರಾಷ್ಟ್ರೀಯ ಪಕ್ಷಗಳಿಗೆ ಹೋಲಿಸಿದಾಗ ಸಪ್ಪೆಯಾಗಿದೆ.
    ಇದೇ ಮೊದಲ ಬಾರಿಗೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಚುನಾವಣೆಗೆ (ಬರೋಬ್ಬರಿ 29) ಗರಿಷ್ಠ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಕಣದಲ್ಲಿ ಉಳಿದುಕೊಂಡಿದ್ದಾರೆ. ಇದರಲ್ಲಿ ರಾಜಕೀಯ ವಿವಿಧ ಪಕ್ಷಗಳಿಂದ 9 ಮತ್ತು ಪಕ್ಷೇತರರು 20 ಅಭ್ಯರ್ಥಿಗಳು ಇದ್ದಾರೆ. ಈಗಾಗಲೇ ಬಹಿರಂಗ ಪ್ರಚಾರ ಅಂತ್ಯಗೊಂಡಿದ್ದು ಜೋರಾಗಿ ಅಬ್ಬರಿಸಿದ್ದು ಮಾತ್ರ ಹೆಚ್ಚಿಗೆ ಕಾಂಗ್ರೆಸ್ ಮತ್ತು ಬಿಜೆಪಿ. ರ‍್ಯಾಲಿ, ಮೆರವಣಿಗೆ, ಸಭೆ ಮತ್ತು ಸಮಾರಂಭಗಳಿಗೆ ಭಾರಿ ಸಂಖ್ಯೆಯಲ್ಲಿ ಜನರನ್ನು ಸೇರಿಸಲಾಯಿತು.

    * ಪಕ್ಷೇತರರ ಪ್ರಚಾರ ಸಪ್ಪೆ
    ಪಕ್ಷೇತರ ಅಭ್ಯರ್ಥಿಗಳಾಗಿ ಜಿ.ಎನ್. ಕೋದಂಡರೆಡ್ಡಿ, ಎಚ್.ಸಿ.ಚಂದ್ರಶೇಖರ, ಡಿ.ಚಿನ್ನಪ್ಪ, ದೇವರಾಜ್ ಕರೋನ ವಾರಿಯರ್, ವಿ.ಎನ್. ನರಸಿಂಹಮೂರ್ತಿ ವಡಿಗೆರೆ, ನಸರುಲ್ಲಾ, ಭಾಸ್ಕರ್ ಅಂಕಾಲಮಡುಗು ಶಿವಾರೆಡ್ಡಿ, ಮೋಹಿತ್ ನರಸಿಂಹಮೂರ್ತಿ, ಜಿ.ಎನ್. ರವಿ, ರಾಜಣ್ಣ, ಡಾ ಎಂ.ಆರ್.ರಂಗನಾಥ, ಸಿ.ವಿ. ಲೋಕೇಶ್ ಗೌಡ, ವಲಸಪಲ್ಲಿ ಉತ್ತಪ್ಪ, ಟಿ.ವೆಂಕಟಶಿವುಡು, ಕೆ.ವೆಂಕಟೇಶ್, ಜಿ.ಎನ್.ವೆಂಕಟೇಶ್, ಎನ್.ಸುಧಾಕರ್, ಡಿ.ಸುಧಾಕರ, ಜಿ.ಸಂದೇಶ್ ಕಣದಲ್ಲಿ ಉಳಿದಿದ್ದಾರೆ. ಆದರೆ, ಕಡಿಮೆ ಅವಧಿಯಲ್ಲಿ ಹೆಚ್ಚಿನ ಮತದಾರರನ್ನು ಸೆಳೆಯುವ ನಿಟ್ಟಿನಲ್ಲಿ ಪರಿಶ್ರಮ ಸಾಲುತ್ತಿಲ್ಲ. ಹೆಚ್ಚಿನ ಬೆಂಬಲಿಗರು ಕಂಡು ಬರುತ್ತಿಲ್ಲ. ಜನರನ್ನು ಸೇರಿಸಿ, ದೊಡ್ಡ ಕಾರ್ಯಕ್ರಮಗಳನ್ನು ನಡೆಸುವಲ್ಲಿ ಆರ್ಥಿಕ ಸಮಸ್ಯೆಯಿಂದ ಹಿಂದೇಟು ಹಾಕಲಾಗಿದೆ ಎಂಬ ವಿಶ್ಲೇಷಣೆ ಮಾತುಗಳು ಕೇಳಿ ಬರುತ್ತಿವೆ.

    * ದೊಡ್ಡ ಕ್ಷೇತ್ರ ಪ್ರಚಾರ
    ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ (ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ, ದೊಡ್ಡಬಳ್ಳಾಪುರ, ನೆಲಮಂಗಲ, ಹೊಸಕೋಟೆ, ಬೆಂಗಳೂರು ನಗರ ಜಿಲ್ಲೆಯ ಯಲಹಂಕ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ, ಗೌರಿಬಿದನೂರು, ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ) 8 ಕ್ಷೇತ್ರಗಳಿವೆ. ಇವುಗಳ ವ್ಯಾಪ್ತಿಯಲ್ಲಿ ಪ್ರಚಾರದ ವಿಚಾರವಾಗಿ ಅಬ್ಬರಿಸುವಲ್ಲಿ ಪಕ್ಷೇತರರಿಗೆ ಕಷ್ಟವಾಗಿದೆ.

    * ಚುನಾವಣಾ ವೆಚ್ಚ ದುಬಾರಿ
    8 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಚುನಾವಣಾ ಪ್ರಚಾರವು ದುಬಾರಿಯಾಗಿದೆ. ಜನರನ್ನು ಸೇರಿಸುವುದು ಮತ್ತು ದೊಡ್ಡ ರ‍್ಯಾಲಿ, ಸಭೆ, ಸಮಾವೇಶಗಳನ್ನು ನಡೆಸುವುದಕ್ಕೆ ಕೋಟ್ಯಂತರ ರೂ ಹಣ ಖರ್ಚಾಗಿದೆ. ಇದರಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಯೋಚಿಸಿಲ್ಲ. ಸ್ಥಳೀಯ ಶಾಸಕರು, ಪಕ್ಷದ ಪದಾಧಿಕಾರಿಗಳ ಬೆಂಬಲದ ನಡುವೆಯೂ ವಾರಗಟ್ಟಲೇ ಪ್ರಚಾರಕ್ಕೆ ಬಳಸವಳಿದ್ದು ಸುಡು ಬಿಸಿಲಿನಲ್ಲಿ ಪ್ರಚಾರ, ಭಿನ್ನಮತ ಶಮನ ಮತ್ತು ಒಗ್ಗಟ್ಟು ಪ್ರದರ್ಶನ, ಪಕ್ಷ ಸಂಘಟನೆ ಮತ್ತು ಮತದಾರರ ಒಲವು ಗಳಿಕೆ ಸೇರಿದಂತೆ ನಾನಾ ವಿಚಾರದಲ್ಲಿ ಒತ್ತಡ ಹೆಚ್ಚಾಗಿದ್ದು ಮತದಾನ ದಿನ (ಏ.26) ಬೇಗ ಕಳೆಯುವುದನ್ನು ಎದುರು ನೋಡುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts